Advertisement

ಡೆಮಾಕ್ರಾಟಿಕ್‌: ಹಿಂದೂ ಪರ ಅಭಿಯಾನ; ಟ್ರಂಪ್‌ರ ಹಿಂದೂ ವಾಯ್ಸಸ್‌ ಫಾರ್‌ ಟ್ರಂಪ್‌’ಗೆ ಸೆಡ್ಡು

09:45 AM Sep 03, 2020 | Nagendra Trasi |

ವಾಷಿಂಗ್ಟನ್‌: ಈ ಬಾರಿಯ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ನಿರ್ಣಾಯಕರಾಗಿರುವ ಸಮುದಾಯಗಳಲ್ಲೊಂದಾದ ಭಾರತೀಯ ಹಿಂದೂಗಳ ಮನವೊಲಿಸಲು ಡೆಮಾಕ್ರಾ ಟಿಕ್‌ ಪಕ್ಷ ‘ಹಿಂದೂ ಅಮೆರಿಕನ್ಸ್‌ ಫಾರ್‌ ಬೈಡೆನ್‌’ ಎಂಬ ಅಭಿಯಾನಕ್ಕೆ ಚಾಲನೆ ನೀಡುವುದಾಗಿ ಘೋಷಿಸಿದೆ.

Advertisement

ಈ ಅಭಿಯಾನದಲ್ಲಿ, ಅಮೆರಿಕದಲ್ಲಿರುವ ಭಾರತ ಮೂಲದ ಹಿಂದೂಗಳ ಹಕ್ಕುಗಳ ಸಂರಕ್ಷಣೆ, ಅವರ ಸಮಸ್ಯೆಗಳ ನಿವಾರಣೆ ಕುರಿತಂತೆ ಚರ್ಚೆ ಕೈಗೊಳ್ಳಲಾಗುವುದು. ಅಲ್ಲದೆ, ಅಮೆರಿಕ ದಲ್ಲಿ ಭಾರತೀಯರ ಮೇಲೆ ಇತ್ತೀಚಿನ ವರ್ಷಗಳಲ್ಲಿ ನಡೆದಿದ್ದ ಜನಾಂಗೀಯ ದ್ವೇಷದ ಕುಕೃತ್ಯಗಳ ನಿಯಂತ್ರಣದ ಬಗ್ಗೆಯೂ ಚರ್ಚಿಸಲು ನಿರ್ಧರಿ ಸಲಾಗಿದೆ.

ಮಂಗಳವಾರ ಆ ಅಭಿಯಾನದ ಮೊದಲ ವಚ್ಯುìವಲ್‌ ಸಭೆ ನಡೆಯಲಿದ್ದು, ಅದರಲ್ಲಿ, ಅಮೆರಿಕದ ಈಲಿಯಸ್‌ ಕ್ಷೇತ್ರದಿಂದ ಅಮೆರಿಕ ಸಂಸತ್ತಿನ ಮೇಲ್ಮನೆಗೆ ಆಯ್ಕೆಯಾಗಿರುವ ಭಾರತ ಮೂಲದ ರಾಜಾ ಕೃಷ್ಣಮೂರ್ತಿ ಯವರು ಭಾಷಣ ಮಾಡಲಿದ್ದಾರೆ ಎಂದು ಪಕ್ಷ ತಿಳಿಸಿದೆ.

ಆ. 14ರಂದು ಹಾಲಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಪಕ್ಷವಾದ ರಿಪಬ್ಲಿಕನ್‌, “ಹಿಂದೂ ವಾಯ್ಸಸ್‌ ಫಾರ್‌ ಟ್ರಂಪ್‌’ ಎಂಬ ಅಭಿಯಾನವನ್ನು ಶುರು ಮಾಡಿತ್ತು. ಅದಕ್ಕೆ ಪ್ರತಿಯಾಗಿ ಈಗ ಡೆಮಾಕ್ರಾ ಟಿಕ್‌ ಪಕ್ಷವೂ ಹಿಂದೂಗಳ ಮನವೊಲಿಕೆಗೆ ಸಿದ್ಧವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next