Advertisement

ಪ್ರಜಾಪ್ರಭುತ್ವ ಮೌಲ್ಯ ಕುಸಿತ

11:54 AM Jun 25, 2018 | |

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳು ಕುಸಿಯುತ್ತಿದ್ದು, ಚುನಾವಣೆಗಳಲ್ಲಿ ಹಣ ಮತ್ತು ಜಾತಿ ಮೇಲುಗೈ ಸಾಧಿಸುತ್ತಿರುವುದು ಅಪಾಯಕಾರಿ ಬೆಳವಣಿಗೆ ಎಂದು ಮಾಜಿ ಸಭಾಪತಿ ಡಾ.ಬಿ.ಎಲ್‌.ಶಂಕರ್‌ ಆತಂಕ ವ್ಯಕ್ತಪಡಿಸಿದ್ದಾರೆ.

Advertisement

ಭಾರತ ಯಾತ್ರಾ ಕೇಂದ್ರದಿಂದ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕೆ.ಎಸ್‌.ನಾಗರಾಜ್‌ ಅವರ “ಬಸವನಗುಡಿ ರಾಜಕೀಯ ದರ್ಶನ’ ಮತ್ತು “ಕನ್ನಡಿಯೊಳಗಿನ ಗಂಟು’ ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಕೇರಳ ಹೊರತುಪಡಿಸಿ ದಕ್ಷಿಣ ಭಾರತದ ಯಾವ ರಾಜ್ಯಗಳಲ್ಲೂ ಈಗ ಆರೋಗ್ಯಕರ ರಾಜಕೀಯ ವಾತವಾರಣ ಇಲ್ಲ. ಹೀಗಾಗಿ, ಹಣ ಮತ್ತು ಜಾತಿ ರಾಜಕಾರಣ ವಿರುದ್ಧ ದೇಶದಾದ್ಯಂತ ಚರ್ಚೆಗಳು, ಸಮಾಲೋಚನೆಗಳು ಮತ್ತು ಹೋರಾಟಗಳು ನಡೆಯಬೇಕಾಗಿದೆ ಎಂದು ಹೇಳಿದರು.

ರಾಷ್ಟ್ರ ಮತ್ತು ರಾಜ್ಯ ರಾಜಕಾರಣಕ್ಕೆ ಹೆಸರಾಂತ ನಾಯಕರನ್ನು ಜನತಾ ಪರಿವಾರ ನೀಡಿದೆ. ಅದೇ ರೀತಿ ಇಬ್ಭಾಗವಾಗುವ ಮೂಲಕ, ಹಲವು ಯುವ ನಾಯಕರ ಭವಿಷ್ಯದ ಅಂತ್ಯಕ್ಕೂ ಕಾರಣವಾಯಿತು. ಇಂತಹ ರಾಜಕೀಯ ಮುಖಂಡರಲ್ಲಿ ಕೆ.ಎಸ್‌.ನಾಗರಾಜ್‌ ಕೂಡ ಒಬ್ಬರು ಎಂದರು.

ಶಾಸಕ ಎಲ್‌.ಎ.ರವಿಸುಬ್ರಹ್ಮಣ್ಯ ಮಾತನಾಡಿ, ಓಲೈಕೆ ರಾಜಕಾರಣ ಯಾರಿಗೂ ಶೋಭೆ ಅಲ್ಲ. ಇತ್ತೀಚಿನ ದಿನಗಳಲ್ಲಿ ದುಡ್ಡಿಲ್ಲದೇ ಚುನಾವಣೆಯನ್ನು ಎದುರಿಸುವುದು ಕಷ್ಟವಾಗಿದ್ದು, ಈ ಪ್ರವೃತ್ತಿ ಮೊದಲು ತೊಲಗಬೇಕು. ಹೀಗಾದಾಗ ಮಾತ್ರ, ಉತ್ತಮ ರಾಜಕಾರಣಿಗಳು ಗೆಲ್ಲಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

“ಬಸವನಗುಡಿ ರಾಜಕೀಯ ದರ್ಶನ’ ಕೃತಿ ಕುರಿತು ಪ್ರಾಧ್ಯಾಪಕ ಡಾ.ಸುಬ್ರಹ್ಮಣ್ಯ ಸ್ವಾಮಿ ಮಾತನಾಡಿದರು. ಉದಯ ಭಾನು ಕಲಾ ಸಂಘದ ಸಂಸ್ಥಾಪಕ ಅಧ್ಯಕ್ಷ ಎನ್‌.ನರಸಿಂಹನ್‌ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Advertisement

ಕೆಲವರು ಇನ್ನೂ ಅಧಿಕಾರದ ಆಸೆ ಬಿಟ್ಟಿಲ್ಲ: ಮಾಜಿ ಮುಖ್ಯಮಂತ್ರಿ ದಿ.ರಾಮಕೃಷ್ಣ ಹೆಗಡೆ ಅವರ ಕಾಲದಿಂದಲೂ ಸಚಿವರಾಗಿ ಆಧಿಕಾರದಲ್ಲಿರುವ ಕೆಲವರು ಈಗಲೂ ಸಚಿವ ಸ್ಥಾನದ ಆಸೆ ಬಿಟ್ಟಿಲ್ಲ. ಅಧಿಕಾರದ ಆಸೆಯನ್ನು ಹಿರಿಯರು ಮೊದಲು ಬಿಡಬೇಕು.

ಯುವ ರಾಜಕಾರಣಿಗಳನ್ನು ಬೆಳೆಸುವ ವ್ಯವಸ್ಥೆ ನಮ್ಮಲ್ಲಿ ಬರಬೇಕು. ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ, ಜೆ.ಎಚ್‌.ಪಟೇಲ್‌ ಮತ್ತು ನಿಜಲಿಂಗಪ್ಪ ಅವರು ತಮ್ಮ ಸಚಿವ ಸಂಪುಟದಲ್ಲಿ ಯುವಕರಿಗೆ ಹೆಚ್ಚು, ಅವಕಾಶ ನೀಡುತ್ತಿದ್ದರು. ಇಂತಹ ಪ್ರವೃತ್ತಿ ಮತ್ತೆ ಮರುಕಳಿಸಬೇಕಾಗಿದೆ ಎಂದು ಬಿ.ಎಲ್‌.ಶಂಕರ್‌ ಅಭಿಪ್ರಾಯಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next