Advertisement

ಪ್ರಜಾಪ್ರಭುತ್ವ ಸಂರಕ್ಷಣೆ ದಿನ ಆಚರಣೆ

11:25 PM Jun 26, 2019 | Sriram |

ಕುಂಬಳೆ: ಕಳೆದ 1975 ಜೂ. 25ರಂದು ಅಂದಿನ ಪ್ರಧಾನ ಮಂತ್ರಿಯಾಗಿದ್ದ ಇಂದಿರಾಗಾಂಧಿ ಯವರು ಮಧ್ಯರಾತ್ರಿ ದೇಶಾದ್ಯಂತ ತುರ್ತು ಪರಿಸ್ಥಿತಿ ಘೋಷಿಸಿ ವಾಕ್‌ ಸ್ವಾತಂತ್ರ್ಯ, ಮಾಧ್ಯಮ ಸ್ವಾತಂತ್ರ್ಯವನ್ನು ಕಸಿಯಲೆತ್ನಿಸಿದ ವಿರುದ್ಧ ಸಂಘ ಪರಿವಾರದ ಕಾರ್ಯಕರ್ತರು ಇದನ್ನು ಸಂಘಟಿತರಾಗಿ ಪ್ರತಿಭಟಿಸಿದರು.

Advertisement

ಅಧಿಕಾರದ ಯಾವುದೇ ಆಸೆ ಆಮಿಷ ಗಳಿಲ್ಲದೆ ಪ್ರತಿಫಲದ ಅಪೇಕ್ಷೆಯಿಲ್ಲದೆ ಪೊಲೀಸರ ಕ್ರೂರ ಹಿಂಸೆಯನ್ನು ಸಹಿಸಿ ಕೆಚ್ಚೆದೆಯಿಂದ ಹೋರಾಡಿದ ಸಂಘ ಪರಿವಾರ ಸ್ವಯಂಸೇವಕರ ಬಲಿದಾನ ಮತ್ತು ನಿಸ್ವಾರ್ಥಸೇವೆಯ ಪ್ರತಿಫಲವಾಗಿ ಇಂದು ಓರ್ವ ಸ್ವಯಂಸೇವಕ ದೇಶಪ್ರೇಮಿ ತುರ್ತುಪರಿಸ್ಥಿತಿ ಹೋರಾಟಗಾರ ದೇಶದ ಪ್ರಧಾನಿಯಾಗಲು ಸಾಧ್ಯವಾಯಿತೆಂಬು ದಾಗಿ ಬಿ.ಜೆ.ಪಿ. ಕಣ್ಣೂರು ವಲಯಾಧ್ಯಕ್ಷ ಪಿ.ಪಿ. ಕರುಣಾಕರನ್‌ ಮಾಸ್ತರ್‌ ಹೇಳಿದರು.

ಆಸೋಸಿಯೇಶನ್‌ ಆಫ್‌ ದಿ ಎಮರ್ಜೆನ್ಸಿ ವಿಕ್ಟಿಮ್ಸ್‌ ಕೇರಳ ಇದರ ಕಾಸರಗೋಡು ಜಿಲ್ಲಾ ಸಮಿತಿ ವತಿಯಿಂದ ಕಾಸರಗೋಡು ಟೌನ್‌ ಬ್ಯಾಂಕ್‌ ಸಭಾಭವನದಲ್ಲಿ ಜರಗಿದ ಪ್ರಜಾಪ್ರಭುತ್ವ ಸಂರಕ್ಷಣೆಯ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯಾದ್ಯಂತ ಸುಮಾರು ಏಳು ಸಹಸ್ರದಷ್ಟು ಮಂದಿ ನೈಜ ತುರ್ತುಪರಿಸ್ಥಿತಿ ಹೋರಾಡಿದವರು ಸಂಕಷ್ಟ ಜೀವನ ನಡೆಸುತ್ತಿದ್ದಾರೆ. ಇವರ ನೆರವಿಗೆ ಸರಕಾರ ಮುಂದಾಗಬೇಕೆಂದರು.

ಸಂಘಟನೆಯ ಜಿಲ್ಲಾಧ್ಯಕ್ಷ ವಿ. ರವೀಂದ್ರನ್‌ ಅಧ್ಯಕ್ಷತೆ ವಹಿಸಿದರು. ರಾ.ಸ್ವ.ಸೇ. ಸಂಘದ ಕಾಸರಗೋಡು ನಗರ ಸಂಘ ಚಾಲಕ್‌ ಕೆ.ಟಿ. ಕಾಮತ್‌, ಟೌನ್‌ ಬ್ಯಾಂಕ್‌ ಉಪಾಧ್ಯಕ್ಷ

ಅನರ್ಹರಿಗೆ ಪಿಂಚಣಿ

ತುರ್ತು ಪರಿಸ್ಥಿತಿ ಹೋರಾಟಗಾರರಿಗೆ ಬಿಜೆಪಿ ಆಡಳಿತ ನಡೆಸುವ ರಾಜ್ಯ ಸರಕಾರಗಳು ಪಿಂಚಣಿ ಮತ್ತು ಆರ್ಥಿಕ ನೆರವು ನೀಡುತ್ತಿದ್ದರೂ ವಿಪಕ್ಷ ಆಡಳಿತದ ಸರಕಾರಗಳು ಇದಕ್ಕೆ ಮುಂದಾಗಿಲ್ಲ. ಆದರೆ ಇದೀಗ ಕೇರಳ ಸರಕಾರವು ಸಿ.ಪಿ.ಎಂ. ಪಕ್ಷದ ಅನರ್ಹರನ್ನು ಒಳಪಡಿಸಿ ಪಿಂಚಣಿ ನೀಡಲು ಮುಂದಾಗಿದ್ದು ಸರಕಾರ ನೈಜ ಹೋರಾಟಗಾರರನ್ನು ವಂಚಿಸುತ್ತಿರುವುದು ಖೇದಕರ.
ಪಿ.ಪಿ. ಕರುಣಾಕರ ಮಾಸ್ತರ್‌

ಬಿಜೆಪಿ ಕಣ್ಣೂರು ವಲಯಾಧ್ಯಕ್ಷ
Advertisement
Advertisement

Udayavani is now on Telegram. Click here to join our channel and stay updated with the latest news.

Next