Advertisement

ಪ್ರಜಾಪ್ರಭುತ್ವವೇ ಶರಣರ ಆಶಯ

10:48 AM Feb 23, 2018 | |

ಕಲಬುರಗಿ: ಪ್ರಜಾಪ್ರಭುತ್ವದ ಆಚರಣೆ ಆಶಯವೇ 12ನೇ ಶತನಮಾನದ ಶರಣ ಧರ್ಮದ ಆಶಯವೂ ಆಗಿತ್ತು. ಧರ್ಮ ಎಂಬುವುದು ವ್ಯಾಪಕ ಅರ್ಥ ಹೊಂದಿದ್ದು ಬಹುಬಳಕೆ, ವಿಶಿಷ್ಟವಾದಂತಹ, ಭಿನ್ನ- ಭಿನ್ನವಾದಂತಹ, ವಿರುದ್ಧವಾದಂತಹ, ಅರ್ಥ ಕೊಡುವಂತದಾಗಿದೆ ಎಂದು ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ| ಈಶ್ವರಯ್ಯ ಮಠ ಹೇಳಿದರು.

Advertisement

ನಗರದ ಗೋದುತಾಯಿ ನಗರದ ಮದರ್‌ ತೇರೆಸ್ಸಾ ಬಿಇಡಿ ಕಾಲೇಜಿನ ಸಭಾಂಗಣದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್‌ ಹಮ್ಮಿಕೊಂಡಿದ್ದ ವಚನ ಕ್ರಾಂತಿಯ ಪುನರುತ್ಥಾನ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. 

ಕಣ್ಣಿಂದು ನೋಡುವ ಧರ್ಮ, ಕಿವಿಯದು ಕೇಳುವ ಧರ್ಮ, ತ್ವಚೆಯ ಸ್ಪರ್ಶ ಧರ್ಮ ಹೀಗೆ ಧರ್ಮವನ್ನು ದಾನವಾಗಿ, ದಯವಾಗಿ, ಗುಣವಾಗಿ, ಸ್ವಭಾವಾಗಿ, ಆಚರಣೆಯಾಗಿ, ಕಟ್ಟು ಕಡಳೆಯಾಗಿ, ಮೌಲ್ಯವಾಗಿ, ನೀತಿಯಾಗಿ, ಸಂಪ್ರದಾಯವಾಗಿ ಜನ ಸಾಮಾನ್ಯರ ದಿನನಿತ್ಯದ ಜೀವನಲ್ಲಿ ಒಳ್ಳೆಯವರನ್ನು ಹೇಗೆ ಗುರುತಿಸಿಕೊಳ್ಳತ್ತೇವೆ. ಶರಣರು ಅವರ ಜೀವಿತ ಅವಧಿಯಲ್ಲಿ ಎಲ್ಲಿಯು ಯಾರನ್ನು ಹಿಯಾಳಿಸದೇ ತಮ್ಮ ಕಾಯಕದ ಬಗ್ಗೆ ಅಪಾರ ನಂಬಿಕೆ, ಗೌರವ ಇಟ್ಟುಕೊಂಡು ಬಾಳಿ ಬದುಕಿದವರು ಶರಣರು ಎಂದು
ಹೇಳಿದರು.

ಅಖೀಲ ಭಾರತ ಶರಣ ಸಾಹಿತ್ಯ ಪರಿಷತ್ತು ಕೇಂದ್ರ ಸಮಿತಿ ಉಪಾಧ್ಯಕ್ಷ ಅಪ್ಪಾರಾವ ಅಕ್ಕೋಣಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಅಧ್ಯಕ್ಷ ಪ್ರೊ| ಕುಪೇಂದ್ರ ಪಾಟೀಲ, ಜಿಲ್ಲಾ ಕಾರ್ಯದರ್ಶಿ ಡಾ| ಶರಣಬಸಪ್ಪ ವಡ್ಡಕೇರಿ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಶಿವಾರಾಜ ಅಂಡಗಿ, ಜಿಲ್ಲಾ ಆಡಳಿತ ಮಂಡಳಿ ಸದಸ್ಯರಾದ ವಿಜಯಕುಮಾರ ತೇಗಲತಿಪ್ಪಿ, ಮದರ್‌ ತೇರೆಸಾ ಚಾರಿಟೇಬಲ್‌ ಟ್ರಸ್ಟ್‌ ಕಾರ್ಯದರ್ಶಿ ಶಿವಪುತ್ರಪ್ಪ ಡೆಂಕಿ, ವನಿತಾ ಜಾಧವ ಇದ್ದರು.

ಪ್ರೊ| ಕೆ.ಎಸ್‌. ಬಗಾಲೆ, ಡಾ| ಶೀಲಾ ಸಿದ್ದರಾಮ, ಪ್ರೊ| ಕೆ. ವಿಶ್ವನಾಥ, ವಿಶ್ವನಾಥ ಮಂಗಲಗಿ, ಶಿವಾನಂದ ಮಠಪತಿ,
ಬಿ.ಎಂ. ಪಾಟೀಲ ಕಲ್ಲೂರ, ಸೋಮು ಕುಂಬಾರ, ರೇವಣಸಿದ್ದಪ್ಪ ಜೀವಣಗಿ, ರವಿ ಹರಗಿ, ಮಹಾಂಗವಾಕರ್‌, ಕಾಲೇಜಿನ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next