Advertisement

ಜನರಲ್ಲಿ ದೇಶಭಕ್ತಿ ಮೂಡಿಸುವುದು ಅನಿವಾರ್ಯ

03:19 PM Sep 05, 2017 | |

ಚಿಕ್ಕಮಗಳೂರು: ಜನರಲ್ಲಿ ದೇಶಭಕ್ತಿ ಮೂಡಿಸುವ ಅವಶ್ಯಕತೆ, ಅನಿವಾರ್ಯತೆ ಉಂಟಾಗಿದೆ ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌ ಅಭಿಪ್ರಾಯಪಟ್ಟರು.

Advertisement

ಬಸವನಹಳ್ಳಿಯ ಓಂಕಾರೇಶ್ವರ ದೇಗುಲದ ಆವರಣದಲ್ಲಿ ಹಿಂದೂ ಮಹಾಸಭಾ ವತಿಯಿಂದ ಪ್ರತಿಷ್ಠಾಪಿಸಿರುವ ಗಣೇಶೋತ್ಸವದಲ್ಲಿ ಸೋಮವಾರ ಗಣಹೋಮದಲ್ಲಿ ಪಾಲ್ಗೊಂಡು ಬಳಿಕ ನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಭಾಷೆ ಬಗ್ಗೆ ಗೌರವ ಇದೆ. ಪಕ್ಷ ಮತ್ತು ರಾಜ್ಯದ ಬಗ್ಗೆ ಭಕ್ತಿ ಇದೆ. ಆದರೆ ದೇಶದ ಬಗ್ಗೆ ಭಕ್ತಿ ಇಲ್ಲದಂತಾಗಿದೆ. ಜಾತಿ, ಜಾತಿಗಳ ನಡುವೆ ವಿಷಯ ಬೀಜ ಬಿತ್ತುವ, ಸ್ವಾಮೀಜಿಗಳ ಮಧ್ಯೆ ಕಲಹ ಉಂಟು ಮಾಡಲಾಗುತ್ತಿದ್ದು, ಜನರಿಗೆ  ಉತ್ತಮ ಸಂದೇಶ ನೀಡುವ, ದೇಶ ಭಕ್ತಿಯನ್ನು ಮೂಡಿಸುವ ಕೆಲಸ ಆಗಬೇಕಾಗಿದೆ ಎಂದರು.

ಅಕ್ಕಪಕ್ಕದ ರಾಷ್ಟ್ರಗಳಿಗೆ ಭಾರತದ ಮೇಲೆ ಕಣ್ಣು ಬಿದ್ದಿದೆ. ಗಡಿಯನ್ನು ಅತಿಕ್ರಮಿಸುವ ಮೂಲಕ ಆರ್ಥಿಕವಾಗಿ ದುರ್ಬಲಗೊಳಿಸುವ ಪ್ರಯತ್ನ ಮಾಡಲಾಗುತ್ತಿದೆ. ಗಡಿಯಲ್ಲಿ ದೇಶ ಕಾಯುವ ಸೈನಿಕರಿಗೆ ನೈತಿಕ ಧೈರ್ಯ, ಸ್ಥೈರ್ಯ ಮೂಡಿಸಬೇಕಾಗಿದೆ. ದೇಶದ ಒಂದಿಂಚು ಜಾಗವನ್ನು ಬಿಟ್ಟುಕೊಡಬೇಕಾಗಿಲ್ಲ ಎಂದು ಹೇಳುವ ಮೂಲಕ ಸೈನಿಕರಿಗೆ ಮಾನಸಿಕ ಧೈರ್ಯ ಮೂಡಿಸುವ ಅಗತ್ಯತೆ  ಇದೆ ಎಂದು ತಿಳಿಸಿದರು.

ಚೀನಾ ನಮ್ಮ ದೇಶದ ಎಲ್ಲ ಮಾರುಕಟ್ಟೆಯನ್ನು ಹೊಕ್ಕಿದೆ. ಬಂದೂಕು  ಹಿಡಿಯದೆ ದೇಶದೊಳಗೆ ಇದ್ದುಕೊಂಡು ಚೀನಾ ಹೊಡೆದಾಗಬೇಕಾಗಿದೆ. ಅದು ಹೇಗೆಂದರೆ ವರ್ತಕರಿಗೆ ಚೀನಾದ ವಸ್ತುಗಳನ್ನು ಮಾರಾಟ ಮಾಡಬೇಡಿ ಎಂದು ತಿಳಿಹೇಳುವ ಮೂಲಕ ಚೀನಾ ವಸ್ತುಗಳನ್ನು ಮಾರಾಟ
ಮಾಡುತ್ತಿಲ್ಲ ಎಂಬ ನಾಮಫಲಕವನ್ನು ಅಂಗಡಿಗಳ ಮುಂದೆ ಪ್ರದರ್ಶಿಸಬೇಕಾಗಿದೆ. ಆ ದೇಶದ ವಸ್ತುಗಳನ್ನು ಖರೀದಿಸಲು ಜನರು ಮುಂದಾಗದೆ ಬಹಿಷ್ಕರಿಸಬೇಕೆಂದು ಮನವಿ ಮಾಡಿದರು. ಬಜರಂಗದ ಜಿಲ್ಲಾ ಸಂಚಾಲಕ ತುಡುಕೂರು ಮಂಜು ಮಾತನಾಡಿದರು.ವಿಶ್ವಹಿಂದು ಪರಿಷತ್‌ ಕಾರ್ಯದರ್ಶಿ ಯೋಗೀಶ್‌ರಾಜ್‌ ಅರಸ್‌, ಮುಖಂಡ ಶಿವಣ್ಣ, ಕನ್ನಡ ಪಕ್ಷದ ಪುರುಷೋತ್ತಮ್‌ ಸೇರಿದಂತೆ ಇತರರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next