Advertisement
ಗಂಡಸಿಯಲ್ಲಿ ಗುರುವಾರ ನಡೆದ ಜೆಡಿಎಸ್ – ಕಾಂಗ್ರೆಸ್ ಜಂಟಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಬಂದ ನಂತರ ದೇಶದಲ್ಲಿ ದಲಿತರನ್ನು ಬೆತ್ತಲೆ ಮಾಡಿ ದೌರ್ಜನ್ಯ ಎಸಗಿದ ಪ್ರಕರಣಗಳು ನಡೆದಿವೆ. ಗೋ ಸಂರಕ್ಷಣೆಯ ಹೆಸರಿನಲ್ಲಿ ಅಲ್ಪಸಂಖ್ಯಾತರ ಹತ್ಯೆ ಮಾಡಿದ್ದಾರೆ. ಈಗ ದೇಶದಲ್ಲಿ ದಲಿತರು, ಅಲ್ಪ ಸಂಖ್ಯಾತರು ಭಯದ ವಾತಾವರಣದಲ್ಲಿ ಬದುಕುತ್ತಿದ್ದಾರೆ. ಇಂದು ದೇಶದಲ್ಲಿ ಪ್ರಜಾಪ್ರಭುತ್ವ, ಸಂವಿಧಾನ ಅಪಾಯ ದಲ್ಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
Related Articles
Advertisement
ನಿಜಬಣ್ಣ ಬಯಲಾಗುವ ದಿನ ಬರುತ್ತಿದೆ: ರಫೇಲ್ ಹಗರಣದ ಪುನರ್ ಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ಕೈಗೆತ್ತಿಕೊಂಡು ಕೇಂದ್ರ ಸರ್ಕಾರದ ಮನವಿಯನ್ನು ತಿರಸ್ಕರಿಸಿದೆ. 30 ಸಾವಿರ ಕೋಟಿ ರೂ. ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ನಡೆದಿರುವ ಭ್ರಷ್ಟಾಚಾರದಲ್ಲಿ ಬಿಜೆಪಿ ನೇತ್‌ತ್ವದ ಕೇಂದ್ರ ಸರ್ಕಾರದ ನಿಜಬಣ್ಣ ಬಯಲಾಗುವ ಕಾಲ ಸನ್ನಿಹಿತ ವಾಗಿದೆ ಂದರು. ಪ್ರಧಾನಿ ಮೋದಿ ಐಟಿ, ಇಡಿ, ಸಿಬಿಐ, ಆರ್ಬಿಐನಂತಹ ಸ್ವಾಯತ್ತ ಸಂಸ್ಥೆಗಳನ್ನೂ ದುರ್ಬಳಕೆ ಮಾಡಿಕೊಂಡು ದೇಶವನ್ನು ವಿನಾಶದ ಅಂಚಿಗೆ ತಂದು ನಿಲ್ಲಿಸಿದ್ದಾರೆ ಎಂದು ದೂರಿದರು. ತೇಜಸ್ವಿ ಸೂರ್ಯ ಅಮಾವಾಸ್ಯೆ -ಸಿದ್ದು ವ್ಯಂಗ್ಯ:
ಹಾಸನ: ಬೆಂಗಳೂರು ದಕ್ಷಿಣ ಲೋಕ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರ ಮೇಲೆ ವಾಗ್ಧಾಳಿ ನಡೆಸಿದ ಮಾಜಿ ಮುಖ್ಯ ಮಂತ್ರಿ ಸಿದ್ಧರಾಮಯ್ಯ ಅವರು, ಆತ ಸೂರ್ಯ ಅಲ್ಲ ಅಮವಾಸ್ಯೆ ಎಂದು ಟೀಕಿಸಿದರು. ಗಂಡಸಿಯಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ತೇಜಸ್ವಿ ಸೂರ್ಯ ಇನ್ನೂ ಹುಡುಗ. ಆತ ಈಗಲೇ ಡಾ.ಅಂಬೇಡ್ಕರ್ ಪ್ರತಿಮೆಗಳನ್ನು ಧ್ವಂಸ ಮಾಡಬೇಕು, ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ಸುಟ್ಟು ಹಾಕಬೇಕು ಎಂದು ಎಂದು ಹೇಳುತ್ತಾನೆ ಎಂದು ಏಕ ವಚನದಲ್ಲಿ ಹರಿಹಾಯ್ದರು. ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರು ಸ್ವಾಗತಿಸಿದರು. ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರು ಮಾತನಾಡಿದರು. ಹಿರಿಯ ಕಾಂಗ್ರೆಸ್ ಮುಖಂಡ ಬಿ ಶಿವರಾಮು, ಶಾಸಕ ಸಿ.ಎನ್.ಬಾಲಕೃಷ್ಣ, ವಿಧಾನ ಪರಿಷತ್ ಸದಸ್ಯರಾದ ಎಂ.ಎ.ಗೋಪಾಲಸ್ವಾಮಿ, ರಮೇಶ್ ಗೌಡ, ಗಾಯತ್ರಿ ಶಾಂತೇಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಾವಗಲ್ ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು ಬಿಜೆಪಿ ಮುಗಿಸಲೆಂದೇ ಒಂದಾಗಿದ್ದೇವೆ
ಹಾಸನ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮಾತನಾಡಿ, ದೇಶ ದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಬಾರದು. ಮೋದಿ ಪ್ರಧಾನಿ ಆಗಬಾರದು ಎಂದೇ ಕಾಂಗ್ರೆಸ್ – ಜೆಡಿಎಸ್ ಒಂದಾಗಿವೆ. ದೇಶದಲ್ಲಿ ಜಾತ್ಯತೀತ ತತ್ವದ ತಳಹದಿಯನ್ನು ಭದ್ರಗೊಳಿಸಿ ರೈತರ ಪರ ಸರ್ಕಾರ ರಚನೆ ಮಾಡಬೇಕೆಂದು ಕಾಂಗ್ರೆಸ್ ಮುಂದಾಗಿ ಎಚ್. ಡಿ. ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದೆ. ಹಿಂದಿನ ಸಿದ್ದರಾಮ್ಯ ಸರ್ಕಾರದ ಎಲ್ಲಾ ಜನಪ್ರಿಯ
ಕಾರ್ಯಕ್ರಮಗಳನ್ನು ಮುಂದುವರಿಸಿ ರೈತರ ಸಾಲ ಮನ್ನಾ ಮಾಡಿದ ಕುಮಾರಸ್ವಾಮಿ ಸರ್ಕಾರ ಇರುವುದೇ ರೈತರಿಗಾಗಿ ಎಂದು ಹೇಳಿದರು.