ಬೆಂಗಳೂರು: “ಒಬ್ಬ ನಾಗರಿಕನಾಗಿ ಹಾಗೂ ಕಾನೂನಿಗೆ ವಿಧೇಯನಾಗಿ ಸುಪ್ರೀಂ ಕೋರ್ಟ್‌ನ ಇಂದಿನ ತೀರ್ಪನ್ನು ಸ್ವಾಗತಿಸುತ್ತೇನೆ. ಈ ತೀರ್ಪು ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ವಿಜಯ’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಣ್ಣಿಸಿದ್ದಾರೆ.
ಈ ತೀರ್ಪು ನಮ್ಮ ಹಾಗೂ ನಮ್ಮ ದೇಶದ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಮತ್ತು ಸಂವಿಧಾನವನ್ನು ಸಂಶಯದಿಂದ ನೋಡುವವರಿಗೆ ತಕ್ಕ ಉತ್ತರವಾಗಿದೆ. ಮತ್ತೂಮ್ಮೆ ನಾವು ಜಗತ್ತಿನ ಮುಂದೆ ಮೌಲ್ಯಗಳನ್ನು ಮತ್ತು ತತ್ವವನ್ನು ಸಾರುವ ಮತ್ತು ಎತ್ತಿ ಹಿಡಿಯುವ ದೊಡ್ಡ ದೇಶವೆಂದು ಸಾಬೀತುಪಡಿಸಿದ್ದೇವೆ ಎಂದು ತಿಳಿಸಿದ್ದಾರೆ.
ಇಲ್ಲಿ ಮೌಲ್ಯಗಳು ಮತ್ತು ತತ್ವಕ್ಕೆ ಬೆಲೆ ಇದೆ ಎಂದು ತೋರಿಸಿದ್ದೇವೆ. ನನ್ನ ಕಳಕಳಿಯ ಮನವಿ ಏನೆಂದರೆ, ಶಾಂತಿಯನ್ನು ಕಾಪಾಡಿ. ಯಾವುದೇ ಗೊಂದಲಗಳಿಗೆ ಬೆಲೆ ಕೊಡಬೇಡಿ ಎಂದು ಜನತೆಯಲ್ಲಿ ಮುಖ್ಯಮಂತ್ರಿಗಳು ಮನವಿ ಮಾಡಿದ್ದಾರೆ.
ಒಬ್ಬ ನಾಗರಿಕನಾಗಿ ಹಾಗೂ ಕಾನೂನಿಗೆ ವಿಧೇಯನಾಗಿ ಸುಪ್ರೀಂಕೋರ್ಟ್‌ನ ತೀರ್ಪನ್ನು ಸ್ವಾಗತಿಸುತ್ತೇನೆ. ಈ ತೀರ್ಪು ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ವಿಜಯವಾಗಿದೆ. ಈ ತೀರ್ಪು ನಮ್ಮ ಹಾಗೂ ನಮ್ಮ ದೇಶದ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಮತ್ತು ಸಂವಿಧಾನವನ್ನು ಸಂಶಯದಿಂದ ನೋಡುವವರಿಗೆ ತಕ್ಕ ಉತ್ತರವಾಗಿದೆ.
-ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ