ಬೆಳಗಾವಿ: ನಗರದಲ್ಲಿ ಕಳೆದು ತಿಂಗಳು ಜಿಲ್ಲಾಡಳಿತ ನಡೆಸಿದ ಜಾಡುಮಾಲಿ ಸಮೀಕ್ಷೆಯು ಅವೈಜ್ಞಾನಿಕವಾಗಿದ. ಬೆಳಗಾವಿಯಲ್ಲಿ ಜಾಡಮಾಲಿ ಕುಟುಂಬಗಳು ಇಲ್ಲ ಎಂದು ಸರಕಾರಕ್ಕೆ ವರದಿ ಸಲ್ಲಿಸಿರುವುದು ಈ ಕುಟುಂಬಗಳಿಗೆ ಆಘಾತ ಉಂಟುಮಾಡಿದೆ.
ಕಾರಣ ಕೂಡಲೇ ಇದರ ಮರು ಸಮೀಕ್ಷೆ ನಡೆಸಬೇಕು ಎಂದು ಆಗ್ರಹಿಸಿ ಅಖೀಲ ಭಾರತೀಯ ಸಫಾಯಿ ಮಜದೂರ ಕಾಂಗ್ರೆಸ್ ಸದಸ್ಯರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಬೆಳಗಾವಿಯಲ್ಲಿ ಕಳೆದ ಹಲವಾರು ವರ್ಷಗಳಿಂದ ಸಫಾಯಿಗಳು ಕೆಲಸ ಮಾಡುತ್ತ ಬಂದಿದ್ದಾರೆ. ಆದೆ ಈಗ ನಡೆಸಿದ ಸಫಾಯಿ ಕರ್ಮಚಾರಿಗಳ ಸಮೀಕ್ಷೆಯಲ್ಲಿ ನಗರದಲ್ಲಿ ಸಫಾಯಿಗಳೇ ಇಲ್ಲವೆಂದು ಸರಕಾರಕ್ಕೆ ವರದಿ ಸಲ್ಲಿಸಲಾಗಿದೆ. ಇದರಿಂದ ಸಫಾಯಿ ಕೆಲಸ ಮಾಡುತ್ತ ಬಂದಿರುವ ಕುಟುಂಬಗಳಿಗೆ ಅನ್ಯಾಯವಾಗಿದೆ ಎಂದು ದೂರಿದರು.
ಸಂಘಟನೆ ಜಿಲ್ಲಾಧ್ಯಕ್ಷ ವಿಜಯ ನೀರಗಟ್ಟಿ ಮಾತನಾಡಿ, 2005 ಮತ್ತು 06ರಲ್ಲಿ ಜಾಡಮಾಲಿಗಳ ಸಮೀಕ್ಷೆ ಮಾಡಿದಾಗ ಜಿಲ್ಲೆಯಲ್ಲಿ 525 ಕುಟುಂಬಗಳು ವಾಸಿಸುತ್ತಿವೆ ಎಂದು ವರದಿ ನೀಡಲಾಗಿತ್ತು. ಆದರೆ ಕಳೆದ ತಿಂಗಳಿನಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಜಾಡಿಮಾಲಿಗಳೇ ಇಲ್ಲವೆಂದು ವರದಿಯಲ್ಲಿ ದಾಖಲಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಪಿ.ಕೆ.ಕಾಂಬಳೆ, ಮುನಿಸ್ವಾಮಿ ಬಂಡಾರೆ, ದೀಪಕ ವಾಗೆಲಾ, ವಿಜಯ ಕೊಲ್ಹಾಪುರೆ, ಪರಶುರಾಮ್, ನಾರಾಯಣಪ್ಪ, ಬಾಲಕೋಟಯ್ಯ ಇತರರು ಇದ್ದರು.