Advertisement

ಕಳಂಕಿತ ಸಚಿವರ ರಾಜೀನಾಮೆಗೆ ಆಗ್ರಹ

02:26 PM Aug 22, 2017 | Team Udayavani |

ಹರಿಹರ: ಅಕ್ರಮ ಸಂಪತ್ತು ಸಂಗ್ರಹಿಸಿ ಎಸಿಬಿ ದಾಳಿಗೆ ಒಳಗಾಗಿರುವ ಸಚಿವರಾದ ಡಿ.ಕೆ. ಶಿವಕುಮಾರ್‌, ರಮೇಶ್‌ ಜಾರಕಿಹೊಳೆ ಅವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

Advertisement

ಶಿವಮೊಗ್ಗ ರಸ್ತೆ ಬಿಜೆಪಿ ಕಚೇರಿಯಿಂದ ಶಿವಮೊಗ್ಗ ವೃತ್ತ, ಮುಖ್ಯ ರಸ್ತೆ, ಗಾಂಧಿ  ವೃತ್ತಕ್ಕೆ ಮೆರವಣಿಗೆ ಮೂಲಕ ಆಗಮಿಸಿದ ಪ್ರತಿಭಟನಾಕಾರರು ಕೆಲ ಹೊತ್ತು ಮಾನವ ಸರಪಳಿ ರಚಿಸಿ ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗಿದರು. ನಂತರ ಮಿನಿ ವಿಧಾನಸೌಧಕ್ಕೆ ತೆರಳಿ ತಹಶೀಲ್ದಾರ್‌ ಜಿ.ನಳಿನಾ ಅವರಿಗೆ ಮನವಿ ನೀಡಿದರು. ಮಾಜಿ ಶಾಸಕ ಬಿ.ಪಿ.ಹರೀಶ್‌ ಮಾತನಾಡಿ, ಆದಾಯ ತೆರಿಗೆ ದಾಳಿಯಲ್ಲಿ ಸಾವಿರಾರು ಕೋಟಿ ರೂ. ಆಸ್ತಿ,ಪಾಸ್ತಿ ಪತ್ತೆಯಾದ ಸಚಿವ ಡಿ.ಕೆ.ಶಿವಕುಮಾರ್‌, ಇನ್ನೋರ್ವ ಸಚಿವ ರಮೇಶ್‌ ಜಾರಕಿಹೊಳೆ ಹಾಗೂ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಟಾಳ್ಕರ್‌ ಭಷ್ಟಾಚಾರ ನಡೆಸಿದ್ದಾರೆ. ಇಬ್ಬರು ಸಚಿವರನ್ನು ಸಂಪುಟದಿಂದ ಕೈಬಿಡಬೇಕು ಹಾಗೂ ಲಕ್ಷ್ಮೀ ಹೆಬ್ಟಾಳ್ಕರ್‌ ಅವರನ್ನು ಸ್ಥಾನದಿಂದ ವಿಮುಕ್ತಿಗೊಳಿಸಬೇಕು. ಈ ಮೂವರ ವಿರುದ್ಧದ ಪ್ರಕರಣಗಳನ್ನು ಸಿಬಿಐ ತನಿಖೆಗೆ ಆದೇಶಿಸಬೇಕು ಎಂದು ಆಗ್ರಹಿಸಿದರು.

ತಾಪಂ ಅಧ್ಯಕ್ಷೆ ಶ್ರೀದೇವಿ ಮಂಜಪ್ಪ, ಮುಖಂಡರಾದ ಎಸ್‌. ಎಂ.ವೀರೇಶ್‌, ರಾಜು ರೋಖಡೆ, ಗೋವಿನಾಳ್‌ ರಾಜಣ್ಣ, ಜಿಪಂ ಸದಸ್ಯ ವಾಗೀಶ್‌ ಸ್ವಾಮಿ, ನಗರಸಭಾ ಸದಸ್ಯೆ ಅಂಬುಜಾ ರಾಜೊಳಿ, ಅಜಿತ್‌ ಸಾವಂತ್‌, ಮಾಲತೇಶ್‌ ಭಂಡಾರಿ, ಶಾಮೀರ್‌ ಆಲಂ ಖಾನ್‌, ರಾಘವೇಂದ್ರ, ಬಿ.ರಾಮಚಂದ್ರಪ್ಪ, ಬ್ಯಾಂಕ್‌ ಶಿವಣ್ಣ, ಚಂದ್ರಶೇಖರ್‌ ಪೂಜಾರ್‌ ಇತರರಿದ್ದರು.

ಬಿಜೆಪಿ ನಾಯಕರ ಮೇಲೆ ಸೇಡಿನ ರಾಜಕಾರಣ
ಹೊನ್ನಾಳಿ: ಬಿಜೆಪಿಯ ಅಭ್ಯುದಯವನ್ನು ಸಹಿಸದ ರಾಜ್ಯದ ಮುಖ್ಯಮಂತ್ರಿಗಳು ಬಿಜೆಪಿ ನಾಯಕರ ಮೇಲೆ ಸೇಡಿನ ರಾಜಕರಣ ಮಾಡಿ ಮಾಜಿ ಮುಖ್ಯಮಂತ್ರಿ ಬಿ . ಬಿ.ಎಸ್‌.ಯಡಿಯೂರಪ್ಪನವರನ್ನು ಸಿಲುಕಿಸಲು ಎಸಿಬಿಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.

ಎಸಿಬಿಯನ್ನು ದುರ್ಬಳಕ್ಕೆ ಮಾಡಿಕೊಂಡು ಬಿಜೆಪಿಯ ನಾಯಕರುಗಳ ಮೇಲೆ ಪ್ರಕರಣ ದಾಖಲು ಮಾಡಿಕೊಳ್ಳಲು ಹೊರಟಿರುವುದನ್ನು ಖಂಡಿಸಿ ತಾಲೂಕು ಬಿಜೆಪಿ ಘಟಕದಿಂದ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಕಳೆದ ಅವಧಿಯಲ್ಲಿ ಬಿ.ಎಸ್‌.ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಬೆಂಗಳೂರಿನ ಶಿವರಾಮಕಾರಂತ ಬಡಾವಣೆಯ 3546 ಎಕರೆಯಲ್ಲಿ 257 ಎಕರೆ ರೈತರ ಭೂಮಿಯನ್ನು ಡಿನೋಟಿಪೈ ಪ್ರಕರಣದಿಂದ ಕೈಬಿಟ್ಟು ತಮ್ಮ ಭೂಮಿ ವಾಪಾಸ್‌ ನೀಡುವಂತೆ ರೈತರು ಅರ್ಜಿಸಲ್ಲಿಸಿದ
ಮೇರೆಗೆ ವಾಪಾಸ್‌ ನೀಡಲಾಗಿತ್ತು. ಇದು ಮುಖ್ಯಮಂತ್ರಿಗಳ ಪರಮಾಧಿಕಾರ ಈ ಪ್ರಕ್ರಿಯೆಗೆ ರಾಜ್ಯ ಹೈಕೋರ್ಟ್‌ ಕೂಡ ಮಾನ್ಯತೆ ನೀಡಿತ್ತು. ಆದರೆ ಹಿಂದಿನ ಪ್ರಕರಣವನ್ನು ಕೆದಕಿ ಯಡಿಯೂರಪ್ಪನವರನ್ನು ವೈಯುಕ್ತಿಕವಾಗಿ ತೇಜೋವಧೆ ಮಾಡುವ ಉದ್ದೇಶವಿಟ್ಟುಕೊಂಡು ಕಾಂಗ್ರೆಸ್‌ ಸರ್ಕಾರ ಎಫ್‌ಐಆರ್‌ ದಾಖಲಿಸಿರುವುದು ಖಂಡನೀಯ ಎಂದರು.

Advertisement

ಬಿಜೆಪಿ ತಾಲೂಕು ಅಧ್ಯಕ್ಷ ಡಿ.ಜಿ.ರಾಜಪ್ಪ, ಜಿ.ಪಂ ಸದಸ್ಯ ಎಂ.ಆರ್‌.ಮಹೇಶ್‌ ಮಾತನಾಡಿದರು. ಜಿಲ್ಲಾ ಮೋರ್ಚಾ ಅಧ್ಯಕ್ಷ ಡಿ.ಜಿ.ರಾಜಣ್ಣ, ಮುಖಂಡರಾದ ಶಾಂತರಾಜ್‌ಪಾಟೀಲ್‌, ಜಿಪಂ ಸದಸ್ಯ ವೀರಶೇಖರಪ್ಪ, ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿಗಳಾದ ಅರಕೆರೆ ನಾಗರಾಜ್‌, ಕುಬೇಂದ್ರಪ್ಪ, ತಾಪಂ ಸದಸ್ಯರಾದ ಮರಿಕನ್ನಪ್ಪ, ಹನುಮಂತಪ್ಪ, ತಿಪ್ಪೇಶ್‌, ಚಂದ್ರಮ್ಮ ಹಾಲೇಶಪ್ಪ, ಎಪಿಎಂಸಿ ನಿರ್ದೇಶಕರಾದ
ಜಿ.ವಿ.ಎಂ. ರಾಜು, ಹನುಮಂತಪ್ಪ, ಪಪಂ ಸದಸ್ಯರಾದ ಹೊಸಕೆರೆ ಸುರೇಶ್‌, ಸರಳಿನಮನೆ ಮಂಜುನಾಥ್‌, ಚಂದ್ರಶೇಖರ್‌ ಪಾಟೀಲ್‌, ರೈತಮೋರ್ಚಾ ಅಧ್ಯಕ್ಷ ರವೀಂದ್ರನಾಥ್‌, ಕೋನಾಯಕಹಳ್ಳಿ ಮಂಜುನಾಥ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next