Advertisement

ಅಂಗವಿಕಲರ, ಎಂಡೋ ಸಂತ್ರಸ್ತರ ವಿವಿಧ ಬೇಡಿಕೆ ಆಗ್ರಹಿಸಿ ಪ್ರತಿಭಟನೆ, ಮನವಿ ಸಲ್ಲಿಕೆ

01:57 AM Jan 30, 2020 | Sriram |

ಉಡುಪಿ: ಜಿಲ್ಲೆಯ ಅಂಗವಿಕಲರ ಮಾಸಾಶನ ವಿತರಣೆ ಬಾಕಿ ಸೇರಿದಂತೆ, ವಿವಿಧ ಸಮಸ್ಯೆಗಳನ್ನು ಅವರು ಎದುರಿಸುತ್ತಿದ್ದಾರೆ. ಜಿಲ್ಲಾ ಮಟ್ಟದ ಸಮಸ್ಯೆಗಳನ್ನು ಜಿಲ್ಲಾ ಮಟ್ಟದಲ್ಲೇ ಹಾಗೂ ರಾಜ್ಯ ಮಟ್ಟದ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸುವಂತೆ ಕರ್ನಾಟಕ ರಾಜ್ಯ ಅಂಗವಿಕಲರ, ಪಾಲಕರ ಒಕ್ಕೂಟ ಉಡುಪಿ ಜಿಲ್ಲೆಯ ಗೌರವ ಅಧ್ಯಕ್ಷ ವೆಂಕಟೇಶ ಕೋಣಿ ಆಗ್ರಹಿಸಿದರು.

Advertisement

ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟ ಉಡುಪಿ ಜಿಲ್ಲಾ ಸಮಿತಿ ವತಿಯಿಂದ ಎಂಡೋ ಸಲ್ಫಾನ್‌ ಸಂತ್ರಸ್ತರ ಮತ್ತು ಅಂಗವಿಕಲರ ವಿವಿಧ ಸಮಸ್ಯೆಗಳನ್ನು ನಿವಾರಿಸುವ ಕುರಿತು ಬುಧವಾರ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಮೂರು ತಿಂಗಳಾದರೂ ಮಾಸಾಶನ ವಿತರಣೆ ಆಗಿಲ್ಲ. ಮಾಸಿಕ ಪೋಷಣಭತ್ಯೆಯನ್ನು 600 ರಿಂದ 3 ಸಾವಿರಕ್ಕೆ 1400ರಿಂದ 5 ಸಾವಿರಕ್ಕೆ ಹೆಚ್ಚಿಸಿ ಪಂಚಾಯತ್‌ನಲ್ಲಿ ಬುದ್ಧಿಮಾಂದ್ಯ, ಮಾನಸಿಕ ಅಸ್ವಸ್ಥರಿಗೆ ಶೇ. 5 ಅನುದಾನದ ಆದ್ಯತೆ ನೀಡಬೇಕು. ಜನದಟ್ಟಣೆೆ ಇರುವ ಸರಕಾರಿ ಕಚೇರಿ ಮೊದ ಲಾದ ಕಡೆ ಅಂಗವಿಕಲರಿಗೆ ಪ್ರತ್ಯೇಕ ಕೌಂಟರ್‌ ತೆರೆಯಬೇಕು. ಶೇ. 80 ರಿಯಾಯಿತಿಯಲ್ಲಿ ಬಸ್‌ ಪಾಸ್‌ಗಳನ್ನು ಆಯಾ ಘಟಕ ಕಚೇರಿಯಲ್ಲಿ ನೀಡಬೇಕು. ಶಾಸಕರ ಅನುದಾನ ನಿಧಿಯಿಂದ ಅಂಗವಿಕಲರಿಗಾಗಿ ಕಾಯ್ದಿರಿಸಿದ ಅನುದಾನವನ್ನು ಆಯಾ ವರ್ಷ ಖರ್ಚು ಮಾಡುವಂತೆ ಕ್ರಮವಹಿಸಿ 2 ವರ್ಷಗಳಿಂದ ಸರಕಾರ, ಶಾಸಕರ ನಿಧಿಯಿಂದ ನೀಡಬೇಕಾದ ದ್ವಿಚಕ್ರ ವಾಹನವನ್ನು ಶೀಘ್ರ ವಿತರಿಸಬೇಕು. ಸೊÌàದ್ಯೋಗಕ್ಕಾಗಿ ನೀಡುತ್ತಿರುವ ಆಧಾರ್‌ ಗೂಡಂಗಡಿ ಮೊತ್ತವನ್ನು 2 ಲಕ್ಷಕ್ಕೆ ಹೆಚ್ಚಿಸಬೇಕು. ಎನ್‌.ಎಚ್‌.ಎಫ್.ಡಿ.ಸಿ. ಮೂಲಕ ಬಡ್ಡಿ ರಹಿತ ಸಾಲವನ್ನು ಒದಗಿಸಬೇಕು. ಪುನರ್ವಸತಿ ಕೇಂದ್ರಕ್ಕಾಗಿ ಕುಂದಾಪುರ ನಾಡ ಗ್ರಾ.ಪಂ.ನಲ್ಲಿ ಗೊತ್ತುಪಡಿಸಿದ ಸ್ಥಳದಲ್ಲಿ ಶೀಘ್ರ ಪುನರ್ವಸತಿ ಕೇಂದ್ರವನ್ನು ಆರಂಭಿಸಬೇಕು. ಮಾಸಾಶನ 1500 ಇರುವುದನ್ನು 3 ಸಾವಿರಕ್ಕೆ, 3 ಸಾವಿರ ಇರುವುದನ್ನು 6 ಸಾವಿರಕ್ಕೆ ನಿಗದಿಪಡಿಸಬೇಕು ಎಂದು ಅವರು ಪ್ರತಿಭಟನೆಯಲ್ಲಿ ಆಗ್ರಹಿಸಿದರು.

ಈ ಬಗ್ಗೆ ಫೆ. 12ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿ ಬಳಿಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸುವ ಕಾರ್ಯಕ್ರಮ ಕೂಡ ನಡೆಯಲಿದ್ದು ಇದಕ್ಕೂ ಇಲ್ಲಿನ ಅಂಗವಿಕಲರು ಹೆಚ್ಚಿನ ಸಂಖ್ಯೆಯಲ್ಲಿ ಬರುವಂತೆ ಅವರು ವಿನಂತಿ ಮಾಡಿದರು. ಬಳಿಕ ಜಿಲ್ಲಾಧಿಕಾರಿಗಳಿಗೆ ವಿವಿಧ ಬೇಡಿಕೆಗಳಿಗೆ ಸಂಬಂಧಿಸಿ ಮನವಿ ಸಲ್ಲಿಸಲಾಯಿತು.

ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟ ಉಡುಪಿ ಜಿಲ್ಲೆಯ ಅಧ್ಯಕ್ಷ ಮಂಜುನಾಥ್‌ ಹೆಬ್ಟಾರ್‌, ಪ್ರಧಾನ ಕಾರ್ಯದರ್ಶಿ ಕೃಷ್ಣ ಪೂಜಾರಿ, ಸಹಕಾರ್ಯದರ್ಶಿಗಳಾದ ನಾರಾಯಣ ಶೇರುಗಾರ, ಕೃಷ್ಣ ನಾಯ್ಕ ಬ್ರಹ್ಮವಾರ, ಖಜಾಂಚಿ ಬಾಬು ದೇವಾಡಿಗ, ಜಿಲ್ಲಾ ಸಮಗ್ರ ಅಂಗವಿಕಲರ ವಿ.ಆರ್‌.ಡಬ್ಲೂ. ಎಂ.ಆರ್‌.ಡಬ್ಲೂé. ನೌಕರರ ಒಕ್ಕೂಟದ ಅಧ್ಯಕ್ಷೆ ಮಂಜುಳಾ ಸುಭಾಶ್‌, ಕಾರ್ಯದರ್ಶಿ ಹರೀಶ್‌ ಶೆಟ್ಟಿ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next