Advertisement
ಹಗಲು ರಾತ್ರಿ ಎನ್ನದೆ ಸತತ ಬಿದ್ದ ಮಳೆಯಿಂದ ಹತ್ತಿ ಬೆಳೆ ವಿವಿಧ ರೋಗಬಾಧೆಯಿಂದ ಹಾಳಾಗುತ್ತಿದ್ದರೆ, ಭೂಮಿ ಅತಿ ಹೆಚ್ಚು ಹಸಿ ಆಗಿ ತೊಗರಿ ಬೆಳೆ ಒಣಗುತ್ತಿವೆ. ಇಷ್ಟೇ ಅಲ್ಲದೆ ಹಳ್ಳಿಗಳಲ್ಲಿನ ಮನೆಗಳ ಗೋಡೆಗಳು ಬಿದ್ದು ಹೋಗಿವೆ. ರೈತರು ಅನುಭವಿಸುತ್ತಿರುವ ಈ ತೊಂದರೆಗಳಿಗೆ ಪರಿಹಾರವಾಗಿ ಸರ್ಕಾರ ಪ್ರತಿ ಎಕರೆಗೆ 20,000 ರೂ.ಗಳನ್ನು ನೀಡಬೇಕು. ಹಾಳಾದ ಮನೆಗಳ ಸಮೀಕ್ಷೆ ಮಾಡಿಸಿ ಸೂಕ್ತ ಪರಿಹಾರ ವಿತರಿಸುವ ಮೂಲಕ ರೈತರನ್ನು ಸಂಕಷ್ಟದಿಂದ ಕೂಡಲೇ ಪಾರು ಮಾಡಬೇಕೆಂದು ಕರವೇ ಹೋರಾಟಗಾರರು ಆಗ್ರಹಿಸಿದರು.
Related Articles
Advertisement
ಕಳೆದ ವರ್ಷ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಬಂದಾಗ ಎರಡು ಸಾವಿರ ಕೋ.ರೂ. ನೀಡುವುದಾಗಿ ಹೇಳಿದ್ದರು. ಆದರೆ ಮೊನ್ನೆ ಬಂದಾಗ ಯಾವುದೇ ಚಕಾರವೆತ್ತಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಾದರೂ ನುಡಿದಂತೆ ಅನುದಾನ ಬಿಡುಗಡೆಗೊಳಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಅನ್ನಪೂರ್ಣ ಕ್ರಾಸ್‌ದಿಂದ ಆರ್‌ಟಿಒ ವರೆಗಿನ ರಸ್ತೆ ಅಗಲೀಕರಣ ಜತೆಗೆ ಸರಿಯಾದ ನಿಟ್ಟಿನಲ್ಲಿ ಅಭಿವೃದ್ಧಿಯಾಗಬೇಕೆಂದು ಜಿಲ್ಲಾಧಿಕಾರಿ ಕಚೇರಿ ಎದುರುಗಡೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಸಿಎಂಗೆ ಮನವಿ ಸಲ್ಲಿಸಲಾಯಿತು.
ವೇದಿಕೆಯ ರಾಜ್ಯಾಧ್ಯಕ್ಷ ಸಚಿನ್ ಫರತಾಬಾದ್, ಮಲ್ಲಿಕಾರ್ಜುನ ನೀಲೂರ, ಪ್ರವೀಣ ಸಚಿನ್, ಅಕ್ಷಯ ಸಚಿನ್ ಪೂಜಾರಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.