Advertisement

ರಸ್ತೆ ಒತ್ತುವರಿ ತೆರವುಗೊಳಿಸಲು ಆಗ್ರಹ

01:16 PM Dec 14, 2019 | Team Udayavani |

ಮುಂಡರಗಿ: ತಾಲೂಕಿನ ಡಂಬಳ ಮೇವುಂಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಒಳರಸ್ತೆಯನ್ನು ಒತ್ತುವರಿ ಮಾಡಲಾಗಿದೆ. ಇದನ್ನು ಸರಿಪಡಿಸುವಂತೆ ಹಲವು ರೈತರು ಎರಡು ಸಲ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಅಧಿಕಾರಿಗಳಿಂದ ಕೇವಲ ಆಶ್ವಾಸನೆ ದೊರೆಯುತ್ತಿದೆ. ಪರಿಹಾರ ದೊರೆಯುತ್ತಿಲ್ಲ ಎಂದು ಆರೋಪಿಸಿ ಡಂಬಳದಲ್ಲಿ ನೂರಾರು ರೈತರು ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು. ಸಮಸ್ಯೆ ಪರಿಹಾರ ಆಗದೇ ಇದ್ದರೆ ಉಪತಹಶೀಲ್ದಾರ್‌ ಕಾರ್ಯಾಲಯ ಎದುರು ಉಗ್ರ ಹೋರಾಟ ಮಾಡುತ್ತೇವೆ ಎಂದು ಮುಖಂಡ ವಿರೂಪಾಕ್ಷಪ್ಪ ಯರಾಸಿ, ರಮೇಶ ಯಂಡಿಗೇರಿ ಎಚ್ಚರಿಕೆ ನೀಡಿದರು.

Advertisement

ಈ ಭಾಗದಲ್ಲಿ ನೂರಾರು ರೈತರ ಸಾವಿರಾರು ಎಕರೆ ಜಮೀನುಗಳಿವೆ. ಕೆಲ ರೈತರು ಅತಿಕ್ರಮಣ ಮಾಡಿಕೊಂಡಿದ್ದರಿಂದ ರಸ್ತೆ ಕಿರಿದಾಗಿದೆ. ಕೃಷಿ ಚಟುವಟಿಕೆ ಕೈಗೊಳ್ಳಲು ಬೆಳೆದ ಬೆಳೆ ಮಾರುಕಟ್ಟೆಗೆ ಸಾಗಟ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹಲವು ರೈತರು ತಮ್ಮ ಅಳಲು ತೋಡಿಕೊಂಡರು. ಸ್ಥಳಕ್ಕೆ ತಹಶೀಲ್ದಾರ್‌ ಮತ್ತು ಸರ್ವೇ ಅಧಿಕಾರಿಗಳು ಬರಬೇಕು. ಅಳತೆ ಮಾಡಿ ನ್ಯಾಯ ದೊರಕಿಸಿಕೊಡಬೇಕೆಂದು ಪಟ್ಟು ಹಿಡಿದರು. ರಸ್ತೆಯ ಹತ್ತಿರವೆ ಒಲೆ ಹೂಡಿ, ಅನ್ನ ಸಾಂಬಾರ್‌ ಮಾಡಿ ಊಟ ಮಾಡಿದರು. ಪೆಂಡಾಲ್‌ ನೆರಳಿನಲ್ಲಿ ಪ್ರತಿಭಟನೆಗೆ ಮುಂದಾದರು. ಪ್ರತಿಭಟನಾನಿರತರೊಂದಿಗೆ ಪೋನ್‌ ಕರೆ ಮಾಡಿ ಮಾತನಾಡಿದ ತಹಶೀಲ್ದಾರ್‌ ಡಾ| ವೆಂಕಟೇಶ ನಾಯಕ, ಡಿ. 13ರಂದು ಸರ್ವೇ ಮಾಡಿ ರೈತರಿಗೆ ಶಾಶ್ವತ ಪರಿಹಾರ ಒದಗಿಸಿಕೊಡಲಾಗುವುದು ಎಂದು ಭರವಸೆ ನೀಡಲಾಗಿತ್ತು. ಆದರೆ ಅನಿವಾರ್ಯ ಕಾರಣಗಳಿಂದ ಸರ್ವೇ ಮಾಡಲು ಸಾಧ್ಯವಾಗುತ್ತಿಲ್ಲ. ಡಿ. 19ರಂದು ಸರ್ವೆ ಅಧಿಕಾರಿಗಳನ್ನು ಕರೆಸಿ ಸರ್ವೇ ಮಾಡಿಕೊಡಲಾಗುವುದು ಎನ್ನುವ ಭರವಸೆ ನೀಡಿ ಪ್ರತಿಭಟನೆ ಹಿಂಪಡೆಯಲು ರೈತರಲ್ಲಿ ಮನವಿ ಮಾಡಿದರು. ಇದರಿಂದಾಗಿ ಪ್ರತಿಭಟನೆ ಮುಕ್ತಾಯಗೊಳಿಸಲಾಯಿತು.

ರೈತರಾದ ಶಂಕ್ರಪ್ಪ ಗಡಿಗಿ, ಆರ್‌. ಎಸ್‌. ಯಂಡಿಗೇರಿ, ಹುಸೇನಸಾಬ್‌ ಕಾಸ್ತಾರ, ಮಲ್ಲಪ್ಪ ಕರಡ್ಡಿ, ಬಸುರಾಜ ತಾರಿಕೊಪ್ಪ, ಮರಿಯಪ್ಪ ಸಿದ್ಧಣ್ಣವರ, ನಿಂಗಪ್ಪ ಪಲ್ಲೇದ, ಯಂಕಣ್ಣ ಗಡಗಿ, ಚಂದ್ರಶೇಖರ ಗಡಗಿ, ಮೌನೇಶ ಹಡಪದ,ಫಕ್ಕೀರಪ್ಪ ಆದಮ್ಮನವರ, ಸೋಮಪ್ಪ ತಳಗೇರಿ, ಬಸವರಡ್ಡಿ ಗಡಗಿ, ಮಳ್ಳಪ್ಪ ಸತ್ಯಣ್ಣವರ, ರಾಜಪ್ಪ ಕೊಳ್ಳಾರ, ಭೀಮಪ್ಪ ಡೊಳ್ಳಿನ, ರವಿ ತಾರಿಕೊಪ್ಪ, ಬಾಳಪ್ಪ ಕೊಳ್ಳಾರ, ಹನಮಂತ ಪಲ್ಲೇದ, ರೇವಣಸಿದ್ಧಪ್ಪ ಪಲ್ಲೇದ, ಹನಮಂತ ಬಾರಿಕೇರ ಸೇರಿದಂತೆ ರೈತರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next