Advertisement

ಬೇಡಿಕೆ ಈಡೇರಿಕೆಗೆ ಮನವಿ

12:51 PM Jun 29, 2019 | Team Udayavani |

ಚಿಕ್ಕೋಡಿ: ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿ ಪದವೀಧರ ಶಿಕ್ಷಕರು ಕ್ಷೇತ್ರ ಶಿಕ್ಷಣಾಧಿಕಾರಿಗೆ ಮನವಿ ಸಲ್ಲಿಸಿದರು.

Advertisement

ಸರ್ಕಾರದ ನಿಯಮಗಳು ಅಸ್ಪಷ್ಟತೆಯಿಂದ ಕೂಡಿರುವುದರಿಂದ ಪದವಿ ಪಡೆದ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಕಡೆಗಣಿಸಲಾಗುತ್ತಿದೆ. ಪದವಿ ಪಡೆದ ಪ್ರಾಥಮಿಕ ಶಾಲಾ ಶಿಕ್ಷಕರನ್ನು 1ರಿಂದ 5ನೇ ತರಗತಿಗಳಿಗೆ ಸೀಮಿತಗೊಳಿಸಿದ್ದರಿಂದ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಅನ್ಯಾಯವಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಆದ್ದರಿಂದ ಪದವಿ ಪಡೆದ ಪ್ರಾಥಮಿಕ ಶಾಲಾ ಶಿಕ್ಷಕರನ್ನು (ಜಿಪಿಟಿ)ಎಂದು ಪರಿಗಣಿಸುವವರೆಗೂ 6 ರಿಂದ 8 ನೇ ತರಗತಿಯ ಶಿಕ್ಷಕರಿಗೆ ನೀಡುವ ತರಬೇತಿಗಳನ್ನು ಬಹಿಸ್ಕರಿಸಲಾಗವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಈ ವೇಳೆ ಪದವೀಧರ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಜಿ.ಎಂ. ಕಾಂಬಳೆ, ತಾಲೂಕಾ ಅಧ್ಯಕ್ಷ ಎಸ್‌.ಎ. ಖಡ್ಡ, ಆರ್‌.ಕೆ. ಕಾಂಬಳೆ, ಎಸ್‌.ಎನ್‌. ಬೆಳಗಾವಿ, ಸಿ.ಬಿ. ಅರಭಾಂವಿ, ಎಸ್‌.ಎಂ. ಮಾನೆ, ಪಿ.ಡಿ. ಮಜಲಟ್ಟಿ, ಎನ್‌.ಜಿ. ಪಾಟೀಲ, ಆರ್‌.ಜಿ. ರುದ್ರಗೌಡರ, ಎಸ್‌.ಜಿ. ಮೋಮಿನ, ಎಸ್‌.ಎಂ. ಕಮತೆ, ಪ್ರವೀಣ ಸಾಮಕ, ಆರ್‌.ವಿ. ಪೋತದಾರ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next