ಅರಕಲಗೂಡು: ತಾಲೂಕಿನಲ್ಲಿ ರಸಗೊಬ್ಬರದ ಅಭಾವವುಂಟಾಗಿದೆ. ರಸಗೊ ಬ್ಬರ ಮಾರಾಟಗಾರರು ನಿಗದಿತ ದರಕ್ಕಿಂತಲೂ ರೈತರಿಂದ ಹೆಚ್ಚುವರಿಯಾಗಿ ಹಣ ವಸೂಲಿ ಮಾಡುತ್ತಿದ್ದರೂ ಕೃಷಿ ಇಲಾಖೆ ಅಧಿಕಾರಿಗಳು ಮತ್ತು ಜಿಲ್ಲಾಡಳಿತ ಮೌನ ವಹಿಸಿದೆ ಎಂದು ತಾಲೂಕು ರೈತ ಸಂಘದ ಅಧ್ಯಕ್ಷ ಯೋಗಣ್ಣ ಆಪಾದಿಸಿದರು.
ಮಾರಾಟದಲ್ಲಿ ರೈತರ ಸುಲಿಗೆ ಕಂಡರೂ ಕಾಣದಂತೆ ಮೌನವಹಿಸಿರುವ ಜಿಲ್ಲಾಡಳಿತ ಮತ್ತು ಕೃಷಿ ಇಲಾಖೆ ಎಂದು ಆರೋಪಿಸಿದ ಪಟ್ಟಣದ ಪತ್ರಿಕಾ ಭವನದಲ್ಲಿ ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜಿಲ್ಲಾದ್ಯಂತ ಯೂರಿಯಾ ರಸಗೊಬ್ಬರ, ಕೊರತೆಯಿಂದ ರೈತರು ಪರದಾಡುತ್ತಿದ್ದರೂ ಕೃಷಿ ಇಲಾಖೆ ಹಾಗೂ ಜಿಲ್ಲಾಡಳಿತ ಸಮಸ್ಯೆ ನಿವಾರಿಸುವಲ್ಲಿ ವಿಫಲವಾಗಿದೆ ಎಂದು ಆಪಾದಿಸಿದರು.
ಗೊಬ್ಬರದ ಕೊರತೆಯನ್ನೇ ಬಂಡವಾ ಳವಾಗಿಸಿಕೊಂಡ ರಸಗೊಬ್ಬರ ಮಾರಾಟಗಾರರು ಒಂದು ಮೂಟೆ ಯೂರಿಯಾಗೊಬ್ಬರಕ್ಕೆ 260 ರೂ. ಬದಲಿಗೆ 320 ರಿಂದ 350 ವರೆಗೆ ಮಾರಾಟ ಮಾಡು ತ್ತಿದ್ದಾರೆ. ಇದಕ್ಕೆ ಯಾವುದೇ ಬಿಲ್ಲುಗಳನ್ನು ನೀಡದೇ ರೈತರನ್ನ ಸುಲಿಗೆ ಮಾಡುತ್ತಿದ್ದಾರೆ. ಈ ಕೂಡಲೇ ಸಂಬಂಧಪಟ್ಟ ಇಲಾಖೆ ಮಧ್ಯಪ್ರವೇಶಿಸಿ ರೈತರಿಗೆ ಆಗುತ್ತಿರುವ ಅನ್ಯಾಯ ತಡೆಗಟ್ಟಬೇಕು ಇಲ್ಲದಿದ್ದರೆ, ಉಗ್ರ ಹೋರಾಟಕ್ಕೆ ಮುಂದಾಗುವುದಾಗಿ ಎಚ್ಚರಿಕೆ ನೀಡಿದರು.
ಕೃಷಿ ಜಂಟಿ ನಿರ್ದೇಶಕ ಮಧುಸೂದನ್ ಅವರನ್ನು ರೈತ ಸಂಘ ಸಂಪರ್ಕಿಸಿ ತಾಲೂಕಿನಲ್ಲಿ ನಡೆಯುತ್ತಿರುವ ಅವ್ಯವಸ್ಥೆಯ ಬಗ್ಗೆ ಮನವರಿಕೆ ಮಾಡಿದೆ. ಇದಕ್ಕೆ ಸ್ಪಂದಿಸಿದ ಅವರು ಇನ್ನೂ ಎರಡು ದಿನಗಳಲ್ಲಿ ಸರಿಪಡಿಸು ವುದಾಗಿ ಆಶ್ವಾಸನೆ ನೀಡಿದ್ದಾರೆ. ಒಂದು ವೇಳೆ ಅಧಿಕಾರಿಗಳು ರೈತರಿಗೆ ಸ್ಪಂದಿಸಿ ರಸಗೊಬ್ಬರ ಕೊರತೆ ನೀಗಿಸದಿದ್ದಲ್ಲಿ ಅ.21ರಂದು ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ತಾಲೂಕು ರೈತ ಸಂಘದ ಕಾರ್ಯದರ್ಶಿ ರವಿ, ರಾಮನಾಥಪುರ ಹೋಬಳಿಯ ಅಧ್ಯಕ್ಷ ಕೃಷ್ಣೇಗೌಡ, ದೊಡ್ಡಮಗ್ಗೆ ಹೋಬಳಿ ಅಧ್ಯಕ್ಷ ಜಗನ್ನಾಥ್, ಮತ್ತು ಹಿರಿಯ ರೈತ ಮುಖಂಡ ಹೊಂಬೇಗೌಡ ಹಾಜರಿದ್ದರು.