ಜಾಗೃತಿ ಸಮಿತಿ ಅಧ್ಯಕ್ಷ ಪ್ರತಾಪ್ ಶೆಟ್ಟಿ ಸಾಸ್ತಾನದ ಮಾಬುಕಳದಲ್ಲಿ ಪಾದಯಾತ್ರೆಗೆ ಚಾಲನೆ ನೀಡಿದರು.
Advertisement
ಕುಮ್ರಗೋಡಿನಿಂದ ಮಾಬುಕಳ, ಸಾಸ್ತಾನ, ಸಾಲಿಗ್ರಾಮ, ಕೋಟ ವ್ಯಾಪ್ತಿಯಲ್ಲಿ ಸರ್ವೀಸ್ ರಸ್ತೆ ನಿರ್ಮಾಣವಾಗಬೇಕು ಮತ್ತು ಅವೈಜ್ಞಾನಿಕ ಕಾಮಗಾರಿಗಳನ್ನು ಸರಿಪಡಿಸಬೇಕು. ಸರ್ವಿಸ್ ರಸ್ತೆ ನಿರ್ಮಾಣವಾಗುವ ತನಕ ಪೊಲೀಸರು ವಿರುದ್ಧ ದಿಕ್ಕಿನಲ್ಲಿ ಸಂಚರಿಸುವವರಿಗೆ ದಂಡ ವಿಧಿಸಬಾರದು ಎಂದು ಘೋಷಣೆಗಳನ್ನು ಕೂಗಿದರು.
ಪ್ರತಿಭಟನಾ ಮೆರವಣಿಗೆಯಲ್ಲಿ ವಾಹನ ಚಾಲಕ- ಮಾಲಕರು, ಸ್ವಸಹಾಯ ಸಂಘಗಳು, ಸ್ಥಳೀಯರು ಬೃಹತ್ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು ಮತ್ತು ನವಯುಗ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸಾಸ್ತಾನ, ಗುಂಡ್ಮಿ, ಚೇಂಪಿ, ಸಾಲಿಗ್ರಾಮ, ಮುಂತಾದ ಕಡೆಗಳಲ್ಲಿ ತಂಪು ಪಾನೀಯಗಳನ್ನು ವಿತರಿಸಲಾಯಿತು ಹಾಗೂ ಹಲವು ಕಡೆ ಸ್ಥಳೀಯರು ಮೆರವಣಿಗೆಯ ಜತೆ ಸೇರಿ ಹೆಜ್ಜೆ ಹಾಕಿದರು. ಪ್ರತಿಭಟನೆಗೆ ಆಗಮಿಸುವವರಿಗೆ ವಾಹನ ಮಾಲಕರಿಂದ ಉಚಿತ ವಾಹನದ ವ್ಯವಸ್ಥೆ ಕೂಡ ಮಾಡಲಾಗಿತ್ತು.
Related Articles
ಪ್ರತಿಭಟನಾ ಮೆರವಣಿಗೆ ಸಂದರ್ಭ ಅಹಿತಕರ ಘಟನೆಗಳು ನಡೆಯದಂತೆ ಉಡುಪಿ ಡಿವೈಎಸ್‌ಪಿ ಜಯಶಂಕರ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು ಹಾಗೂ ಕೋಟ, ಸಾಲಿಗ್ರಾಮ, ಸಾಸ್ತಾನ ಮುಂತಾದ ಕಡೆ ಪೊಲೀಸರನ್ನು ನಿಯೋಜಿಸಲಾಗಿತ್ತು. ಬ್ರಹ್ಮಾವರ ವೃತ್ತ ನಿರೀಕ್ಷಕ ಅನಂತಪದ್ಮನಾಭ, ಉಡುಪಿಯ ಮಂಜುನಾಥ ಮತ್ತು ಠಾಣಾಧಿಕಾರಿಗಳಾದ ನಿತ್ಯಾನಂದ ಗೌಡ, ಮಧು, ರಾಘವೇಂದ್ರ ಹಾಗೂ ಸಿಬಂದಿ ಉಪಸ್ಥಿತರಿದ್ದರು.
Advertisement
ಜಾಗೃತಿ ಸಮಿತಿ ಕಾರ್ಯದರ್ಶಿ ವಿಟuಲ ಪೂಜಾರಿ, ಕಾನೂನು ಸಲಹೆಗಾರ ಶ್ಯಾಮ್‌ಸುಂದರ ನಾೖರಿ, ಬ್ರಹ್ಮಾವರ ತಾಲೂಕು ಜನಜಾಗೃತಿ ಸಮಿತಿ ಅಧ್ಯಕ್ಷ ಅಚ್ಯುತ್ ಪೂಜಾರಿ, ಜಿ.ಪಂ. ಸದಸ್ಯ ರಾಘವೇಂದ್ರ ಕಾಂಚನ್, ತಾ.ಪಂ. ಸದಸ್ಯೆ ಜ್ಯೋತಿ ಉದಯ ಪೂಜಾರಿ, ಲಲಿತಾ, ಜಾಗೃತಿ ಸಮಿತಿಯ ಸದಸ್ಯ ಪ್ರಶಾಂತ ಶೆಟ್ಟಿ ನಾಗರಾಜ ಗಾಣಿಗ ಸಾಲಿಗ್ರಾಮ, ಅಲ್ವಿನ್ ಅಂದ್ರಾಡೆ, ಗೋವಿಂದ ಪೂಜಾರಿ, ಜಿಲ್ಲಾ ಲಾರಿ ಮಾಲಕರ ಸಂಘದ ರಾಜೇಶ್ ಕಾವೇರಿ, ಕಿಶೋರ್ ಕುಮಾರ್ ಉಪಸ್ಥಿತರಿದ್ದರು.