Advertisement

ಮದ್ಯಪಾನ ಶಾಶ್ವತ ನಿಷೇಧಕ್ಕೆ ಆಗ್ರಹ

05:27 AM May 14, 2020 | Suhan S |

ವಿಜಯಪುರ: ರಾಜ್ಯದಲ್ಲಿ ಸಂಪೂರ್ಣವಾಗಿ ಮದ್ಯಪಾನ ನಿಷೇಧಿಸುವಂತೆ ಆಗ್ರಹಿಸಿ ಕಿತ್ತೂರ ರಾಣಿ ಚನ್ನಮ್ಮ ವಿಶ್ವ ಲಿಂಗಾಯತ ಪಂಚಮಸಾಲಿ ಸೇವಾ ಸಮಿತಿ ನೇತೃತ್ವದಲ್ಲಿ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

Advertisement

ಸಂಘಟನೆ ಮುಖಂಡ ದಾನೇಶ ಅವಟಿ ಮಾತನಾಡಿ, ರಾಜ್ಯದಲ್ಲಿ ಕೋವಿಡ್ ರೋಗ ಭೀತಿ ಮಿತಿ ಮೀರಿದ್ದು, ಇದರ ನಿಯಂತ್ರಣಕ್ಕೆ ನಡೆಯುತ್ತಿರುವ ಪ್ರಯತ್ನಗಳು ಪೂರ್ಣ ಪ್ರಮಾಣದಲ್ಲಿ ಫಲ ನೀಡಿಲ್ಲ. ಮತ್ತೂಂದೆಡೆ ಲಾಕ್‌ ಡೌನ್‌ ಸಂದರ್ಭದಲ್ಲಿ ರಾಜ್ಯ ಸರ್ಕಾರ ಮದ್ಯ ನಿಷೇ ಧಿಸಿದ್ದರಿಂದ ಮದ್ಯ ವ್ಯಸನಿಗಳ ಕುಟುಂಗಳು ನೆಮ್ಮದಿ ಜೀವನ ನಡೆಸುತ್ತಿದ್ದವು. ಆದರೆ ಇದೀಗ ಸರ್ಕಾರ ಮದ್ಯ ಮಾರಾಟ ಆರಂಭಿಸಿದ್ದು, ಮದ್ಯ ವ್ಯಸನಿಗಳ ಕುಟುಂಬಗಳು ಸಂಕಷ್ಟಕ್ಕೆ ಸಿಲಕುತ್ತಿವೆ ಎಂದು ವಿಷಾದಿಸಿದರು.

ಸಮಿತಿ ಅಧ್ಯಕ್ಷ ಸಿದ್ದು ಅವಟಿ ಮಾತನಾಡಿ, ಮದ್ಯ ವ್ಯಸನಿಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಸೋಂಕು ಪಸರಿಸಲು ಮತ್ತಷ್ಟು ಪ್ರೇರಕರಾಗುತ್ತಿದ್ದಾರೆ. ಕಾರಣ ರಾಜ್ಯದಲ್ಲಿ ಪೂರ್ಣ ಪ್ರಮಾಣದಲ್ಲಿ ಪಾನ ನಿಷೇಧಿಸುವಂತೆ ಆಗ್ರಹಿಸಿದರು.

ಈ ಸಂದರ್ಭದಲ್ಲಿ ನಿಂಗಪ್ಪ ಸಂಗಾಪುರ, ಜಗದೀಶ ಬಳೂತಿ, ಅವಿನಾಶ ಚಂಚಲಕರ, ಮಹಿಬೂಬ ರೋಜಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next