ಹೊಸದಿಲ್ಲಿ: ಮನೆ ಕಟ್ಟುವುದಕ್ಕಾಗಿ ತವರಿನಿಂದ ಹಣ ತರುವಂತೆ ಪತ್ನಿಯನ್ನು ಒತ್ತಾಯಿಸುವುದು ಕೂಡ “ವರದಕ್ಷಿಣೆಗೆ ಬೇಡಿಕೆ’ ವ್ಯಾಪ್ತಿಗೆ ಸೇರಿದ್ದು, ಐಪಿಸಿ 304 ಬಿ ಸೆಕ್ಷನ್‌ನಡಿ ದಂಡನೆಗೆ ಅರ್ಹ ಎಂಬುದಾಗಿ ಸುಪ್ರೀಂ ಕೋರ್ಟ್ ಮಂಗಳವಾರ ತೀರ್ಪು ನೀಡಿದೆ.
ಕಳವಳಕಾರಿ ಮಟ್ಟ ಮುಟ್ಟಿರುವ ವರದಕ್ಷಿಣೆ ಪಿಡುಗನ್ನು ನಿಯಂತ್ರಿಸುವುದಕ್ಕಾಗಿ ಭಾರತೀಯ ದಂಡ ಸಂಹಿತೆಗೆ 304 ಬಿ ಸೆಕ್ಷನ್ ಸೇರಿಸಲಾಗಿದೆ.
ಇದರ ನಿಯಮ ಗಳಲ್ಲಿ ಸ್ಪಷ್ಟತೆ ಇಲ್ಲ ಎಂಬುದನ್ನು ಎತ್ತಿಹಿಡಿದು ವರದಕ್ಷಿಣೆ ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆಯಿಂದ ವಿನಾಯಿತಿ ಸಿಗುವಂತಾಗಬಾರದು ಎಂದು ಸಿಜೆಐ ಎನ್. ವಿ. ರಮಣ ನೇತೃತ್ವದ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಇದನ್ನೂ ಓದಿ:ರಾಜ್ಯದಲ್ಲಿಂದು 14,473 ಕೋವಿಡ್ ಪ್ರಕರಣ ಪತ್ತೆ, 5 ಸಾವು: ಪಾಸಿಟಿವಿಟಿ ದರ ಶೇ.10.30
ಮಧ್ಯಪ್ರದೇಶದಲ್ಲಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ಆಕೆಯ ಪತಿ ಮತ್ತು ಮಾವನನ್ನು ದೋಷಮುಕ್ತಗೊಳಿಸಿ ಹೈಕೋರ್ಟ್ ನೀಡಿದ್ದ ತೀರ್ಪನ್ನು ಬದಿಗೆ ಸರಿಸಿ ಸು.ಕೋ. ಈ ತೀರ್ಪು ನೀಡಿದೆ.