Advertisement

ಪದವಿ-ಸ್ನಾತಕೋತ್ತರ ಪರೀಕ್ಷೆ ರದ್ದತಿಗೆ ಆಗ್ರಹ

08:02 PM Jul 15, 2021 | Team Udayavani |

ಬೀದರ: ಪದವಿ, ಸ್ನಾತಕೋತ್ತರ ಹಾಗೂ ಡಿಪ್ಲೊಮಾ 1, 3 ಮತ್ತು 5ನೇ ಸೆಮಿಸ್ಟರ್‌ ಪರೀಕ್ಷೆಗಳನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿ ಆಲ್‌ ಇಂಡಿಯಾ ಡೆಮಾಕ್ರಟಿಕ್‌ ಸ್ಟೂಡೆಂಟ್ಸ್‌ ಆರ್ಗನೈಸೇಷನ್‌ ಜಿಲ್ಲಾ ಸಮಿತಿಯಿಂದ ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು.

Advertisement

ಸಮಿತಿ ಜಿಲ್ಲಾ ಸಂಚಾಲಕ ಹಣಮಂತ ಎಸ್‌. ಎಚ್‌. ಮತ್ತು ಪ್ರಮುಖ ತುಳಸಿರಾಮ ಎನ್‌. ಕೆ. ನೇತೃತ್ವದಲ್ಲಿ ಸದಸ್ಯರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಅಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು. ನಾಮಫಲಕ ಹಿಡಿದು ಪರೀಕ್ಷೆಗೆ ವಿರೋಧ ವ್ಯಕ್ತಪಡಿಸಿದರು. ಒಂದು ತಿಂಗಳಲ್ಲಿ ಎರಡು ಸೆಮಿಸ್ಟರ್‌ಗಳ ಪರೀಕ್ಷೆ ನಡೆಸಬಾರದು ಹಾಗೂ ಎರಡು ಡೋಸ್‌ ಕೋವಿಡ್‌ ಲಸಿಕೆ ನಂತರವೇ ಆಪ್‌ ಲೈನ್‌ ತರಗತಿ ಮತ್ತು ಪರೀಕ್ಷೆ ನಡೆಸಬೇಕು ಎಂದು ಆಗ್ರಹಿಸಲಾಯಿತು.

ಈ ವೇಳೆ ಹಣಮಂತ ಎಸ್‌.ಎಚ್‌. ಮಾತನಾಡಿ, ಪರೀಕ್ಷೆ ರದ್ದುಗೊಳಿಸುವಂತೆ ಹಲವು ಹಂತದ ಹೋರಾಟ ನಡೆಸಲಾಗಿದ್ದು, ಉನ್ನತ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಲಾಗಿದೆ. ಅಷ್ಟೇ ಅಲ್ಲ  ಪಾಲಕರು, ವೈದ್ಯರು, ಶಿಕ್ಷಣ ಪ್ರೇಮಿಗಳು ಸೇರಿ ಒಂದು ಲಕ್ಷಕ್ಕೂ ಹೆಚ್ಚು ಜನ ಸಹಿ ಮಾಡಿ ಬೆಂಬಲ ಸೂಚಿಸಿದ್ದಾರೆ.

ವಿದ್ಯಾರ್ಥಿಗಳ ಆತಂಕವನ್ನು ಅರಿಯದ ಸರ್ಕಾರ ಮತ್ತು ವಿಶ್ವವಿದ್ಯಾಲಯಗಳು ನಮ್ಮ ಬೇಡಿಕೆಗಳ ಪರ ಯಾವುದೇ ನಿರ್ಧಾರ ಕೈಗೊಳ್ಳದೇ ಮೌನ ವಹಿಸಿದ್ದು, ಪರೀಕ್ಷೆಗೆ ತಯಾರಿಯಲ್ಲಿ ಮುಳುಗಿವೆ. ವಿದ್ಯಾರ್ಥಿಗಳ ಜೀವ ಲೆಕ್ಕಿಸದೇ ಪರೀಕ್ಷೆಗಳನ್ನು ನಡೆಸುವುದೇ ಪ್ರಮುಖ ಗುರಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸದಸ್ಯರಾದ ಲಕ್ಷ್ಮಣ ಮಚಕೂರೆ, ಅಕ್ಷತಾ, ಶೃತಿ, ಕಾವೇರಿ, ಮಾರುತಿ, ಶಿವಕುಮಾರ, ಪ್ರದೀಪ, ಸಚಿನ್‌, ಸುನೀತಾ, ಪ್ರೀಯಾ, ಸಿದ್ದು ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next