ಸುರಕ್ಷಾ ಸಂಹಿತೆ ಹಿಂಪಡೆಯಬೇಕೆಂದು ಕೇಂದ್ರ ಸರಕಾರವನ್ನು ಒತ್ತಾಯಿಸಿ ಜಿಲ್ಲಾ ಮಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಸಮನ್ವಯ ಸಮಿತಿ (ಸಿಐಟಿಯು) ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿತು.
Advertisement
ಈಗಿರುವ ಕಾಯಿದೆಯನುಸಾರ 2 ಕೋಟಿ ಕಾರ್ಮಿಕರು ಕಲ್ಯಾಣ ಮಂಡಳಿಯಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ರಾಜ್ಯದಲ್ಲಿ 3 ಲಕ್ಷ ಕಾರ್ಮಿಕರು ಫಲಾನುಭವಿಗಳಾಗಿ ಸೇರ್ಪಡೆಗೊಂಡಿ ದ್ದಾರೆ. ಕಾರ್ಮಿಕರ ಕಲ್ಯಾಣ ತೆರಿಗೆಯಿಂದ ಸಂಗ್ರಹವಾಗುವ 7,500 ಕೋ.ರೂ. ಗಳಲ್ಲಿ ಪಿಂಚಣಿ, ಮದುವೆ, ಶಿಕ್ಷಣ, ಹೆರಿಗೆ ಸೌಲಭ್ಯ ಇತ್ಯಾದಿ 30 ಸೌಲಭ್ಯ ಗಳಲ್ಲಿ ದೊರಕುತ್ತಿವೆೆ. ಈಗ ಸಿದ್ಧಗೊಂಡ ಸಾಮಾಜಿಕ ಸುರಕ್ಷಾ ಸಂಹಿತೆಯಿಂದ ಕಾರ್ಮಿಕರಿಗೆ ದೊರಕುವ ಸೌಲಭ್ಯ ಸಿಗುವುದಿಲ್ಲ. ಆದ್ದರಿಂದ ಉದ್ದೇಶಿತ ಮಸೂದೆ ಹಿಂದಕ್ಕೆ ಪಡೆಯಬೇಕೆಂದು ಪ್ರತಿಭಟನೆ ನಡೆಸಲಾಯಿತು.