Advertisement
ಸಿಸಿ ಕ್ಯಾಮೆರಾ, ಭದ್ರತಾ ವ್ಯವಸ್ಥೆ, ಗಸ್ತು ನಿಯೋಜನೆ, ಸಮರ್ಪಕ ದೀಪ ವ್ಯವಸ್ಥೆ, ಶುಚಿತ್ವ, ಶೌಚಾಲಯ ಇನ್ನಿತರ ಮೂಲಭೂತ ಸೌಕರ್ಯಗಳನ್ನು ಪಾರ್ಕ್‌ಗೆ ಕಲ್ಪಿಸಿ ಆ ನಂತರ ಸರ್ಕಾರ ರಾಜಧಾನಿಯ ಪಾರ್ಕ್‌ಗಳ ವೇಳೆ ವಿಸ್ತರಣೆ ಮಾಡಲಿ ಎಂಬ ಮಾತುಗಳು ಕೇಳಿ ಬಂದಿವೆ. ಹಿರಿಯ ನಾಗರಿಕರಿಗೆ ರಾತ್ರಿ ವೇಳೆ ಊಟ ಮುಗಿಸಿ ವಾಂಕಿಂಗ್ ಮಾಡಲು ಅನುಕೂಲವಾಗಲಿದ್ದು, ಸಾರ್ವಜನಿಕರು ದುರ್ಬಳಕೆ ಮಾಡಿಕೊಳ್ಳಬಾರದು ಎಂಬ ಸಲಹೆಗಳು ಕೂಡ ವ್ಯಕ್ತವಾಗಿದೆ.
Related Articles
Advertisement
ದುರ್ಬಳಕೆಗೆ ಅವಕಾಶ ನೀಡಬಾರದು: ಸರ್ಕಾರದ್ದು ಒಳ್ಳೆಯ ನಿರ್ಧಾರವಾಗಿದೆ. ಆದರೆ ಪಾರ್ಕ್‌ಗಳ ದುರ್ಬಳಕೆಗೆ ಅವಕಾಶ ನೀಡಬಾರದು. ಸಾರ್ವಜನಿಕರೂ ಪಾರ್ಕ್‌ಗಳನ್ನು ತಪ್ಪು ಕಾರಣಕ್ಕಾಗಿ ಬಳಸಿಕೊಳ್ಳಬಾರದು ಎಂದು “ಟ್ರೀ ಡಾಕ್ಟರ್’ ವಿಜಯ್ ನಿಶಾಂತ್ ಹೇಳುತ್ತಾರೆ. ಬೆಳಗ್ಗೆ ಮತ್ತು ರಾತ್ರಿ ಹೊತ್ತಿನಲ್ಲಿ ಪಾರ್ಕ್‌ಗಳಲ್ಲಿ ವಾಕಿಂಗ್ ಮಾಡುವುದರಿಂದ ಅನೇಕ ರೀತಿಯ ಅನುಕೂಲಗಳಿವೆ. ವಾಯುವಿಹಾರಕ್ಕೆ ನೆರವಾಗಲಿದೆ. ಆ ಹಿನ್ನೆಲೆಯಲ್ಲಿ ಸರ್ಕಾರ ಉತ್ತಮವಾದ ಹೆಜ್ಜೆಯಿರಿಸಿದೆ ಎಂದು ಹೇಳುತ್ತಾರೆ.
ಸರ್ಕಾರ ಒಳ್ಳೇಯ ಉದ್ದೇಶದಿಂದ ಈ ನಿಲುವು ತಗೆದುಕೊಂಡಿದೆ. ಸದ್ಬಳಕೆಯಾಗುವ ನಿಟ್ಟಿನಲ್ಲಿ ಜನರು ಮುಂದಾಗಬೇಕು ಎಂದು ಸಾಫ್ಟ್ವೇರ್ ಎಂಜಿನಿಯರ್ ಶಶಾಂಕ್ ಹೇಳುತ್ತಾರೆ. ರಾತ್ರಿ ವೇಳೆ ಮಹಿಳೆಯರಿಗೆ ಸುರಕ್ಷತೆ ಭಯ: ಬಿಬಿಎಂಪಿಗೆ ಸೇರಿದ ಉದ್ಯಾನವನಗಳು ಈ ಮೊದಲು ಪ್ರತಿ ದಿನ ಬೆಳಗ್ಗೆ 5 ರಿಂದ ರಾತ್ರಿ 8 ರವರೆಗೆ ಸಾರ್ವಜನಿಕರಿಗೆ ತೆರೆದಿರುತ್ತಿದ್ದವು. ನಿರ್ವಹಣೆ ಕಾರ್ಯವನ್ನು ಕೈಗೊಳ್ಳುವಾಗ ಬೆಳಗ್ಗೆ 10 ರಿಂದ ಮಧ್ಯಾಹ್ನ 1.30 ರವರೆಗೆ ಮುಚ್ಚಿರುತ್ತಿದ್ದವು. ಈ ಹಿಂದಿನ ನಿರ್ಧಾರ ಸರಿಯಾಗಿತ್ತು. ರಾತ್ರಿ 10ರ ವರೆಗೂ ಪಾಕ್‌ಗಳು ತೆರೆದರೆ ಮುಂದೊಂದು ದಿನ ಅನೈತಿಕ ತಾಣಗಳಾಗುವ ಭಯ ಕಾಡುತ್ತಿದೆ ಎಂದು ವಿಲ್ಸನ್ ಗಾರ್ಡ್‌ನ ವ್ಹಿ ಲವ್ ರಾಣಿ ಪಾಕ್‌ನ ಖಜಾಂಚಿ ನಯನಾ ಹೇಳುತ್ತಾರೆ.
ಕುಡುಕರು ಬಂದು ಪಾಕ್‌ನಲ್ಲಿರುವ ಆಸನಗಳಲ್ಲಿ ಕುಳಿತುಕೊಂಡು ಕಾಲ ಕಳೆಯುವ ಸಾಧ್ಯತೆಯಿರುತ್ತದೆ. ಈ ವಾತಾವರಣದಲ್ಲಿ ಮಹಿಳೆಯರು ವಾಕ್ ಮಾಡಲು ಆಗುವುದಿಲ್ಲ. ಜತೆಗೆ ಪಾರ್ಕ್‌ನ ಅಕ್ಕ-ಪಕ್ಕದಲ್ಲಿರುವ ಸ್ಥಳೀಯ ನಿವಾಸಿಗಳಿಗೂ ಅನಾನುಕೂಲ ವಾಗುವ ಸಾಧ್ಯತೆ ಇದೆ ಎನ್ನುತ್ತಾರೆ. ರಾತ್ರಿ ವೇಳೆ ಕುಡುಕರು ಬರುವುದರಿಂದ ಮಹಿಳೆಯರಿಗೆ ಸುರಕ್ಷತೆಯ ಬಗ್ಗೆ ಭಯ ಕಾಡಲಿದೆ. ಈ ಬಗ್ಗೆ ಕೂಡ ಪಾಲಿಕೆ ಕಾಳಜಿ ತೋರಬೇಕು ಎಂದು ವಿಜಯನಗರ ಪಾರ್ಕ್‌ನ ನಡಿಗೆದಾರರಾದ ಎಸ್. ತ್ರಿಶಾಲ್ ಹೇಳುತ್ತಾರೆ.
ಬಿಬಿಎಂಪಿ ಉದ್ಯಾನವನಗಳಲ್ಲಿ ಕ್ಯಾಮೆರಾ ಅಳವಡಿಸಿಲ್ಲ. ಸರ್ಕಾರದ ಈ ನಿರ್ಧಾರ ಮುಂದೆ ಹಲವು ರೀತಿಯ ಸಮಸ್ಯೆಗಳಿಗೆ ಕಾರಣವಾಗಬಹುದು. ಆಗು ಹೋಗುಗಳ ಬಗ್ಗೆ ಆಲೋಚನೆ ಮಾಡಿ ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸುತ್ತಾರೆ.
ರಾಜಧಾನಿ ಬೆಂಗಳೂರಿನಲ್ಲಿ ನಿವೃತ್ತ ಉದ್ಯೋಗಿಗಳು ಹಲವು ಸಂಖ್ಯೆಯಲ್ಲಿ ನೆಲೆಸಿದ್ದಾರೆ. ಅವರಿಗೆಲ್ಲಾ ಸರ್ಕಾರದ ಈ ನಿರ್ಧಾರ ಅನುಕೂಲವಾಗಲಿದೆ. ಹಿರಿಯ ನಾಗರಿಕರು ರಾತ್ರಿ ವೇಳೆ ಪಾರ್ಕ್‌ನಲ್ಲಿ ಕುಳಿತು ಬೇಸರ ಮರೆಯಲು ಸಹಾಯವಾಗಲಿದೆ. ಜತೆಗೆ ಮಹಿಳೆಯರು ಕೂಡ ತಮ್ಮ ದೈನಂದಿನ ಜಂಜಾಟ ಮರೆತು ಪಾರ್ಕ್‌ನಲ್ಲಿ ವಾಕಿಂಗ್ ಮಾಡಿ ತಣ್ಣನೆಯ ಗಾಳಿ ಪಡೆಯಲು ಲಾಭವಾಗಲಿದೆ. ಸರ್ಕಾರದ ಈ ನಿರ್ಧಾರವನ್ನು ಸ್ವಾಗತಿಸುತ್ತೇನೆ. ●ಸಿ.ಕೆ.ರವಿಚಂದ್ರ , ನಡಿಗೆದಾರರ ಸಂಘದ ಅಧ್ಯಕ್ಷ
ಬಿಬಿಎಂಪಿ ವ್ಯಾಪ್ತಿಯ ಎಲ್ಲಾ ಉದ್ಯಾನಗಳನ್ನು ಬೆಳಗ್ಗೆ 5 ಗಂಟೆಯಿಂದ ರಾತ್ರಿ 10 ರವರೆಗೆ ತೆರೆಯಲು ಸರ್ಕಾರ ನಿರ್ಧರಿಸಿರು ವುದು ಒಳ್ಳೆಯ ಕ್ರಮ ಅಲ್ಲ. ರಾತ್ರಿಯಾಗುತ್ತಿ ದ್ದಂತೆ ಪಾರ್ಕ್‌ಗಳು ಅನೈತಿಕ ತಾಣಗಳಾಗುವ ಭಯ ಕಾಡುತ್ತಿದೆ. ಗುಂಡು, ತುಂಡುಗಳ ಪ್ರದೇಶವಾಗಿ ಮಾರ್ಪಡು ಸಾಧ್ಯತೆ ಇರುತ್ತದೆ. ಹೀಗಾಗಿ ಸರ್ಕಾರ ತನ್ನ ನಿರ್ಧಾರವನ್ನು ಮರು ಪರಿಶೀಲಿಸುವ ಅಗತ್ಯವಿದೆ. ●ಎಸ್. ಉಮೇಶ್, ಅಧ್ಯಕ್ಷರು ಕಬ್ಬನ್ ಪಾಕ್ ನಡಿಗೆದಾರರ ಸಂಘ
– ದೇವೇಶ ಸೂರಗುಪ್ಪ