ಹೊಸಪೇಟೆ: ಪಡಿತರ ಚೀಟಿಯಲ್ಲಿನ ನ್ಯೂನತೆ ಸರಿಪಡಿಸುವ ಮೂಲಕ ಪಡಿತರ ಫಲಾನುಭವಿಗಳಿಗೆ ಸಮರ್ಪಕ ಪಡಿತರ
ನೀಡಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಡಿವೈಎಫ್ಐ ತಾಲೂಕು ಸಮಿತಿ ನೇತೃತ್ವದಲ್ಲಿ ನಾಗರಿಕರು ತಹಶೀಲ್ದಾರ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ಶ್ರಮಿಕ ಭವನದಿಂದ ತಹಶೀಲ್ದಾರ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಬಡಜನರ ಆಹಾರ ಕೊರತೆ ನೀಗಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅರ್ಜಿ ಹಾಕಿದ ಎಲ್ಲ ಫಲಾನುಭವಿಗಳಿಗೆ ಬಿಪಿಎಲ್ ಕಾರ್ಡ್‌ಗಳನ್ನು ಕೊಡುವ ವ್ಯವಸ್ಥೆ ಮಾಡಬೇಕು. ಅರ್ಜಿ ಹಾಕಿ ಅನೇಕ ತಿಂಗಳು ಕಳೆದರೂ ರೇಷನ್ ಕಾರ್ಡ್ ನೀಡಿಲ್ಲ. ತಕ್ಷಣವೇ ಕ್ರಮ ಕೈಗೊಳ್ಳಬೇಕು.ಕೆಲವರಿಗೆ ಬಿಪಿಎಲ್ ಕೊಡುವುದನ್ನು ಬಿಟ್ಟು ಎಪಿಎಲ್ ಕಾರ್ಡ್ ನೀಡಲಾಗಿದೆ ಎಂದು ಆರೋಪಿಸಿದರು.
ಸರ್ಕಾರ ಪ್ರತಿ ಕುಟುಂಬಕ್ಕೆ 35 ಕೆ.ಜಿ ಅಕ್ಕಿ, ಗೋಧಿ, 5 ಸೀಮೆಎಣ್ಣೆ, ಸಕ್ಕರೆ, ಶೇಂಗಾ ಎಣ್ಣೆ, ಬೇಳೆ, ಹೆಸರು, ಉಪ್ಪು, ರಾಗಿ , ಜೊಳಗಳನ್ನು ನ್ಯಾಯಬೆಲೆ ಅಂಗಡಿಯಲ್ಲಿ ಒದಗಿಸಲು ಮುಂದಾಗಬೇಕು. ಕೆಲವರಿಗೆ ಕಾರ್ಡ್ ಇದ್ದರೂ ಬೆರಳಚ್ಚು ಬರುತ್ತಿಲ್ಲವೆಂದು ಅವರಿಗೆ ಪಡಿತರ ನಿಲ್ಲಿಸಲಾಗಿದೆ. ಇಂತಹ ಸಮಸ್ಯೆ ಬಗೆಹರಿಸಲು ವ್ಯವಸ್ಥೆ ಮಾಡಿ ತಕ್ಷಣವೇ ಪರಿಹಾರ ಕೊಡಲು ಮುಂದಾಗಬೇಕು ಎಂದು ಆಗ್ರಹಿಸಿದರು.
ಪಡಿತರ ಅಂಗಡಿಯಲ್ಲಿ ನಡೆಯುತ್ತಿರುವ ಮೋಸ ತಡೆಗಟ್ಟಲು ವೈಜಾnನಿಕ ರೀತಿಯಲ್ಲಿ ವ್ಯವಸ್ಥೆ ಮಾಡಲು ಮುಂದಾಗುವುದು, ಪ್ರತಿ ತಿಂಗಳು ಪಡಿತರ ಅಂಗಡಿ ಪರಿಶೀಲಿಸಲು ಸಮಿತಿ ರಚಿಸಬೇಕು. ನಿಲ್ಲಿಸಿರುವ ಸೀಮೆಎಣ್ಣೆ ನೀಡುವುದು, ಸೀಮೆಎಣ್ಣೆ ವರ್ತಕರನ್ನು ಮುಂದುವರಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿದರು.
ಮುಖಂಡರಾದ ಬಿಸಾಟಿ ಮಹೇಶ, ವಿ.ಸ್ವಾಮಿ. ಕಲ್ಯಾಣಯ್ಯ, ಕೆ.ರಮೇಶ ಇತರರಿದ್ದರು.