Advertisement

ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿ ನಿಯಮ ತಿದ್ದುಪಡಿಗೆ ಆಗ್ರಹ

04:00 PM Feb 19, 2020 | Suhan S |

ಕೋಲಾರ: ದೈಹಿಕ ಶಿಕ್ಷಣ ಶಿಕ್ಷಕರ ವೃಂದ, ನೇಮಕಾತಿ ನಿಯಮ ತಿದ್ದುಪಡಿ ಮೂಲಕ ಆಗಿರುವ ಅನ್ಯಾಯ ಸರಿಪಡಿಸಿ ಮತ್ತು ಪ್ರೋ .ಎಲ್‌.ಆರ್‌.ವೈದ್ಯನಾಥನ್‌ ವರದಿ ಜಾರಿ ಮಾಡುವಂತೆ ಜಿಲ್ಲೆಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಪ್ರತಿನಿಧಿಗಳು, ವಿಧಾನ ಪರಿಷತ್‌ ಸದಸ್ಯರ ನೇತೃತ್ವದಲ್ಲಿ ಶಿಕ್ಷಣ ಸಚಿವ ಸುರೇಶ್‌ಕುಮಾರ್‌ಗೆ ಮನವಿ ಸಲ್ಲಿಸಿದರು.

Advertisement

ಸಚಿವರಿಗೆ ಮನವಿ ಸಲ್ಲಿಸಿದ ಎಂಎಲ್‌ಸಿಗಳು ಮಾತನಾಡಿ, ವೃಂದ ಮತ್ತು ನೇಮಕಾತಿ ನಿಯಮ ತಿದ್ದುಪಡಿಗೆ ಆಡಳಿತಾತ್ಮಕ ಅನುಮೋದನೆಯೂಸಿಕ್ಕಿದೆ, ಹಣಕಾಸು, ಕಾನೂನು ಇಲಾಖೆಯು  ಒಪ್ಪಿಗೆ ನೀಡಿದ್ದು, ಭರವಸೆ ಸಮಿತಿಯೂ ಈಗಾಗಲೇ ಶಿಕ್ಷಣ ಇಲಾಖೆಗೆ ದೈಹಿಕ ಶಿಕ್ಷಣ ಶಿಕ್ಷಕರನ್ನು ಸಹ ಶಿಕ್ಷಕರನ್ನಾಗಿ ಮಾಡಲು ಒಪ್ಪಿ ವರದಿ ನೀಡಿದೆ ಎಂದು ಹೇಳಿದರು.

ದೈಹಿಕ ಶಿಕ್ಷಣ ಕಡ್ಡಾಯ: ವೈದ್ಯನಾಥನ್‌ ವರದಿ ಶಿಫಾರಸಿನಲ್ಲಿನ 13 ಅಂಶಗಳನ್ನು ಅನುಷ್ಠಾನ ಗೊಳಿಸುವಂತೆ ಮತ್ತು ದೈಹಿಕ ಶಿಕ್ಷಣ ಶಿಕ್ಷಕರನ್ನು ಸಹಶಿಕ್ಷಕರೆಂದು ಪದನಾಮಕರಿಸಲು ಮನವಿ ಮಾಡಿದ ಅವರು, ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಖಾಲಿ ಇರುವ ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು, 10ನೇ ತರಗತಿ ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಣ ಕಡ್ಡಾಯ ಗೊಳಿಸಿ ಪರೀಕ್ಷಾ ವಿಷಯವಾಗಿ ಜಾರಿ ಮಾಡಬೇಕು ಎಂದು ಮನವಿ ಮಾಡಿದರು.

ದೈಹಿಕ ಶಿಕ್ಷಣ ಸಹಶಿಕ್ಷಕರೆಂದು ನೇಮಿಸಿ: ದೈಹಿಕ ಶಿಕ್ಷಣ ಶಿಕ್ಷಕರ ರಾಜ್ಯ ಜೇಷ್ಠಾತಾ ಪಟ್ಟಿ ಪ್ರಕಟಿಸಬೇಕು, ಪದವಿ ಪೂರ್ವ ಕಾಲೇಜುಗಳಲ್ಲಿ ಇತರೆ ವಿಷಯ ದಂತೆ ದೈಹಿಕ ಶಿಕ್ಷಣಕ್ಕೂ ಉಪನ್ಯಾಸಕರ ನೇಮಕಾತಿ ಮಾಡಬೇಕು, ಎಸ್‌ಟಿಎಸ್‌ ಮತ್ತು ಟಿಡಿಎಸ್‌ನಲ್ಲಿನ  ಶಿಕ್ಷಕರ ಮಾಹಿತಿಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರನ್ನು ವಿಶೇಷ ಶಿಕ್ಷಕರು ಎಂದು ನಮೂದಿಸುವುದನ್ನು ದೈಹಿಕ ಶಿಕ್ಷಣ ಸಹಶಿಕ್ಷಕರು ಎಂದು ನಮೂದಿಸಲು ಮನವಿ ಮಾಡಿದರು.

ಕಡ್ಡಾಯವಾಗಿ ನೇಮಿಸಿ: ದೈಹಿಕ ಶಿಕ್ಷಕರಿಗೆ ಟಾಲ್ಪ್ ತರಬೇತಿ, ತಾಲೂಕು ಮತ್ತು ಜಿಲ್ಲಾ ದೈಹಿಕ ಪರಿವೀಕ್ಷಕರ ಹುದ್ದೆಗೆ ಕೂಡಲೇ ಬಡ್ತಿ ನೀಡುವುದು, ಇತರೆ ವಿಷಯಗಳಂತೆ ಅವಧಿಗಳ ಆಧಾರದ ಮೇಲೆ ದೈಹಿಕ ಶಿಕ್ಷಣ ಶಿಕ್ಷಕರ ನೇಮಕ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿಗೆ ನಿಗದಿಗೊಳಿಸಿರುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಮಾಡಿ, ಪ್ರತಿ ಶಾಲೆಗೂ ದೈಹಿಕ ಶಿಕ್ಷಣ ಶಿಕ್ಷಕರನ್ನು ಕಡ್ಡಾಯವಾಗಿ ನೇಮಿಸಲು ಕ್ರಮ ಕೈಗೊಳ್ಳುವಂತೆ ಕೋರಲಾಯಿತು.

Advertisement

ಈ ವೇಳೆ ವಿಧಾನ ಪರಿಷತ್‌ ಸದಸ್ಯರಾದ ವೈ.ಎ.ನಾರಾಯಣಸ್ವಾಮಿ, ಅರುಣಾ ಷಹಾಪುರ, ರಾಜ್ಯ ಮತ್ತು ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಇ.ಶ್ರೀನಿವಾಸಗೌಡ, ಜಿಲ್ಲಾ ಕಾರ್ಯದರ್ಶಿ ಎಸ್‌.ಚೌಡಪ್ಪ, ದೇವಿರೆಡ್ಡಿ, ಅರುಣ್‌ ಕುಮಾರ್‌, ಬಾಲರಾಜು, ರಘು, ಮನೋಹರ್‌ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next