Advertisement

10 ದಿನದಲ್ಲಿ ಕಬ್ಬಿನ ಬಾಕಿ ಹಣ ಪಾವತಿಸಲು ಆಗ್ರಹ

07:33 PM Sep 13, 2022 | Team Udayavani |

ಹುಮನಾಬಾದ: ಬೀದರ ಸಹಕಾರ ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಿಸಿದ ರೈತರ ಬಾಕಿ ಹಣ ಮುಂದಿನ 10 ದಿನಗಳಲ್ಲಿ ಪಾವತಿಸುವಂತೆ ಒತ್ತಾಯಿಸಿ ಯುವ ಮುಖಂಡ ಬ್ಯಾಂಕ್‌ ರೆಡ್ಡಿ ನೇತೃತ್ವದಲ್ಲಿ ಸೋಮವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಯಿತು.

Advertisement

ಪಟ್ಟಣದ ಹಳೇ ತಹಶೀಲ್ದಾರ್‌ ಕಚೇರಿಯಿಂದ ಆರಂಭಗೊಂಡ ಪ್ರತಿಭಟನೆ ಪಟ್ಟಣದ ಮುಖ್ಯರಸ್ತೆಗಳ ಮೂಲಕ ಮಿನಿ ವಿಧಾನಸೌಧಕ್ಕೆ ತೆರಳಿತು. ರಸ್ತೆ ಉದ್ದಕ್ಕೂ ಬಿಎಸ್‌ಎಸ್‌ಕೆ ಆಡಳಿತ ಮಂಡಳಿ ಹಾಗೂ ಅಧ್ಯಕ್ಷರ ವಿರುದ್ಧ ಘೋಷಣೆ ಕೂಗಿದರು.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಬ್ಯಾಂಕ್‌ ರೆಡ್ಡಿ, ವರ್ಷ ಕಾಲ ಹೊಲದಲ್ಲಿ ದುಡಿದು ಕಬ್ಬು ಬೆಳೆಸಿದ ರೈತರು ಬಿಎಸ್‌ಎಸ್‌ ಕೆ ಹಾಗೂ ಆಡಳಿತ ಮಂಡಳಿಗೆ ನಂಬಿಕೊಂಡು ಕಬ್ಬು ಪೂರೈಕೆ ಮಾಡಿದ್ದಾರೆ. ಇಂದು ಅವರು ಹಣ ಸಿಗದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಗೆ ಬಂದಿದ್ದಾರೆ. ಜಿಲ್ಲೆಯ ಬಿಜೆಪಿ ನಾಯಕರು ರೈತರ ಬಗ್ಗೆ ಕಾಳಜಿ ಕಾಣುತ್ತಿಲ್ಲ. ರೈತರ ಹಣದಲ್ಲಿ ರಾಜಕೀಯ ಮಾಡಿದವರು ಯಾರು ಉಳಿದಿಲ್ಲ. ಕೂಡಲೇ ರೈತರ ಹಣ ಪಾವತಿ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಅಧ್ಯಕ್ಷರ ಮನೆ ಎದುರಿಗೆ ಧರಣಿ ನಡೆಸಲಾಗುವುದು ಎಂದರು.

ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್‌ ಪ್ರದೀಪಕುಮಾರ್‌ ಹಿರೇಮಠ ಅವರಿಗೆ ಸಲ್ಲಿಸಿದರು. ವಿವಿಧ ಗ್ರಾಮಗಳ ಜನರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next