Advertisement

ಎಂಇಎಸ್‌ ನಿಷೇಧಿಸಲು ಆಗ್ರಹ

02:36 PM Oct 19, 2019 | Suhan S |

ಮುಂಡರಗಿ: ನ.1ರಂದು ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿಯು ಆಚರಿಸುವ ಕರಾಳ ದಿನಕ್ಕೆ ಅನುಮತಿ ನೀಡಬಾರದು. ಕರ್ನಾಟಕ ರಾಜ್ಯದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿಯನ್ನು ಕೂಡಲೇ ನಿಷೇಧಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ವಿಶ್ವನಿರ್ಮಾಣ ಸೇನೆ ಕಾರ್ಯಕರ್ತರು ಬುಧವಾರ ತಹಶೀಲ್ದಾರ್‌ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

Advertisement

ನ.1ರಂದು ಗಡಿಪ್ರದೇಶವಾದ ಬೆಳಗಾವಿ ಜಿಲ್ಲೆಯ ಕನ್ನಡ ಹಾಗೂ ಮರಾಠಿ ಭಾಷಿಕರು ನಾಡಹಬ್ಬ ಆಚರಿಸುತ್ತಾರೆ. ಇಂತಹ ಸಂದರ್ಭದಲ್ಲಿ ಕೆಲವು ಪಟ್ಟಬದ್ಧ ಜನರು ಮಹಾರಾಷ್ಟ್ರ ಏಕೀಕರಣ ಸಮಿತಿ ಎಂಬ ಹೆಸರಿನ ಸಂಘಟನೆಯ ಸದಸ್ಯರು ಕರ್ನಾಟಕದಲ್ಲಿ ಮರಾಠಿ ಭಾಷಿಕರ ಮೇಲೆ ಅನ್ಯಾಯ ದೌರ್ಜನ್ಯ ಆಗುತ್ತಿದೆ ಎಂದು ಮರಾಠಿ ಭಾಷಿಕರ ಮನದಲ್ಲಿ ವಿಷಬೀಜ ಬಿತ್ತುವ ಉದ್ದೇಶದಿಂದ ನ.1ರಂದು ಕರಾಳ ದಿನ ಆಚರಿಸುತ್ತಾರೆ. ಆದ್ದರಿಂದ ನ.1 ರಂದು ಆಚರಿಸುವ ಕರಾಳ ದಿನಕ್ಕೆ ಅನುಮತಿ ನೀಡಬಾರದು. ನಾಡದ್ರೋಹಿ ಸಂಘಟನೆ ಮಹಾರಾಷ್ಟ್ರ ಏಕೀಕರಣ ಸಮಿತಿ ಕರ್ನಾಟಕದಲ್ಲಿ ಕೂಡಲೇ ನಿಷೇಧಿಸಬೇಕು ಎಂದು ಮಲ್ಲೇಶ ಹರಿಜನ ಆಗ್ರಹಿಸಿದರು. ಶಿರಸ್ತೇದಾರ್‌ ಬಿ.ಎಸ್‌.ಕನ್ನೂರ ಮನವಿ ಸ್ವೀಕರಿಸಿದರು.

ಕರ್ನಾಟಕ ವಿಶ್ವ ನಿರ್ಮಾಣ ಸೇನೆ ಜಿಲ್ಲಾಧ್ಯಕ್ಷ ಮಲ್ಲೇಶ ಹರಿಜನ, ಪುರಸಭೆ ಸದಸ್ಯರಾದ ಪವನ ಮೇಟಿ, ನಾಗರಾಜ ಹೊಂಬಳಗಟ್ಟಿ, ಕೊಟ್ರಾಗೌಡ ಪಾಟೀಲ, ಚಂದ್ರಶೇಖರ ಹಿರೇಮನಿ, ಎಸ್‌. ಕೆ. ಪೂಜಾರ, ಬಸಪ್ಪ ಡೋಣಿ, ಪರುಶುರಾಮ ಹೊಸಮನಿ, ನಾಗರಾಜ ರೋಣದ, ದಾವಲಸಾಬ ಕರ್ನಾಚಿ ಮತ್ತಿತರರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next