Advertisement

ರಾಷ್ಟ್ರಧರ್ಮ ಸಂಘಟನೆಯಿಂದ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ಆಗ್ರಹ

08:56 PM Dec 02, 2020 | mahesh |

ಬೆಂಗಳೂರು: ಪ್ರಬಲ ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತರುವಂತೆ ಒತ್ತಾಯಿಸಿ ರಾಷ್ಟ್ರಧರ್ಮ ಸಂಘಟನೆಯ ವತಿಯಿಂದ  ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ರವರಿಗೆ ಮನವಿ ಸಲ್ಲಿಸಲಾಯಿತು. ಗಾಂಧಿನಗರದ ಮೌರ್ಯ ಸರ್ಕಲ್‍ನಲ್ಲಿ ಆಯೋಜನೆಗೊಂಡಿದ್ದ ಈ ಕಾರ್ಯಕ್ರಮದಲ್ಲಿ 80 ರಿಂದ 100 ಜನರು ನಮ್ಮ ಹಿಂದೂ ಸಂಸ್ಕೃತಿಯ ಮೌಲ್ಯಗಳನ್ನು ಎತ್ತಿಹಿಡಿಯುವವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Advertisement

ರಾಷ್ಟ್ರಧರ್ಮ ಸಂಘಟನೆಯ ಸಂಸ್ಥಾಪಕರಾದ ಸಂತೋಷ್ ಕೆಂಚಾಂಬ ರವರ ನೇತೃತ್ವದಲ್ಲಿ ದೇಸಿ ತಳಿಯಾದ ಗಿರ್ ಗೋವಿನೊಂದಿಗೆ ಮೌರ್ಯ ಸರ್ಕಲ್‍ನಿಂದ ಮುಖ್ಯಮಂತ್ರಿಗಳ ಗೃಹ ಕಛೇರಿ ಕೃಷ್ಣವರೆಗೆ ಪಾದಯಾತ್ರೆ ಮಾಡಲಾಯಿತು.

ಈ ಕಾರ್ಯಕ್ರಮದಲ್ಲಿ ರಾಷ್ಟ್ರಧರ್ಮ ಸಂಘಟನೆಯ ಕಾರ್ಯಕರ್ತರು ಹಾಗೂ ಗೋಪಾಲಕ ಕುಮಾರ ಸುಬ್ರಮಣ್ಯ ಜಾಗೀರ್‍ಧಾರ್, ಗೋ ಸೇವಕ ರಾಘವೇಂದ್ರ, ರಾಷ್ಟ್ರೋತ್ತಾನ ಗೋಶಾಲೆಯ ಡಾ. ವಿ ಜೀವನ್ ಕುಮಾರ್, ಗೋಮಾತ್ರಂ ಗೋಶಾಲೆಯ ಜಿ.ಎಲ್ ಮಂಜುನಾಥ್, ಪ್ರಾಣಿ ದಯಾಸಂಘದ ಸುನೀಲ್ ದುಗಾರ್ ಸೇರಿದಂತೆ ಹಲವಾರು ಗೋ ಸೇವಕರು ಪಾಲ್ಗೊಂಡಿದ್ದರು.

ಈ ಕೆಳಕಂಡ ವಿಷಯಗಳನ್ನು ಮುಖ್ಯಮಂತ್ರಿಗಳ ಬಳಿ ಚರ್ಚಿಸಲಾಯಿತು.

1. ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತರುವುದು
2. ಗೋ ರಕ್ಷಕರನ್ನು ಜೈಲಿನಿಂದ ಬಿಡುಗಡೆ ಮಾಡಿ ಅವರ ಮೇಲಿರುವ ಕೇಸುಗಳನ್ನು ಖುಲಾಸೆ
ಮಾಡುವುದು
3. ದೇಸಿ ಗೋವುಗಳ ಸಂರಕ್ಷಣೆಗೆ ಆಯೋಗ ರಚನೆ
4. ಗೋಮಾಳ ಜಾಗದ ಸಂರಕ್ಷಣೆ ಮತ್ತು ಒತ್ತುವರಿ ತಡೆಯುವುದು
5. ಗೋ ಶಾಲೆಗಳಿಗೆ ಬಜೆಟ್‍ನಲ್ಲಿ ಸೂಕ್ತ ಅನುದಾನ ನೀಡುವುದು
ಈ ಎಲ್ಲಾ ವಿಷಯಗಳನ್ನು ಆಲಿಸಿದ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದರು

Advertisement
Advertisement

Udayavani is now on Telegram. Click here to join our channel and stay updated with the latest news.

Next