ಕಾಂಗ್ರೆಸ್ ನಾಯಕರ ತಲೆಗೆಡಿಸಿದೆ.
Advertisement
ಕಾಂಗ್ರೆಸ್ ಪಾಲಿಗೆ ಬಂದಿರುವ ಇಪ್ಪತ್ತು ಸ್ಥಾನಗಳಲ್ಲಿ ಜಾತಿವಾರುಲೆಕ್ಕಾಚಾರ ಹಾಕಿ, ಅಳೆದು ತೂಗಿ ಅಭ್ಯರ್ಥಿಗಳ ಆಯ್ಕೆ ಮಾಡಿರುವ ಕೈ
ನಾಯಕರಿಗೆ ದಾವಣಗೆರೆ ಹಾಗೂ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ
ಸಾಮಾಜಿಕ ನ್ಯಾಯದಂತೆಯೇ ಟಿಕೆಟ್ ನೀಡಬೇಕೆಂಬ ಕಟ್ಟಪ್ಪಣೆ ರಾಜ್ಯ ಕಾಂಗ್ರೆಸ್ ನಾಯಕರಿಗೆ ಮುಳುವಾಗಿ ಪರಿಣಮಿಸಿದೆ.
ಪ್ರಕಾರ ದಾವಣಗೆರೆ ಕ್ಷೇತ್ರವನ್ನು ಲಿಂಗಾಯತ ಸಮುದಾಯಕ್ಕೆ
ನೀಡಬೇಕೆಂಬ ಕಾರಣಕ್ಕೆ ಹಾಲಿ ಶಾಸಕ, ಲಿಂಗಾಯತ ಸಮುದಾಯದ ಉಪಪಂಗಡ ಸಾದರ ಸಮುದಾಯಕ್ಕೆ ಸೇರಿರುವ ಶಾಮನೂರು ಶಿವಶಂಕರಪ್ಪಅವರಿಗೆ ನೀಡಲಾಗಿತ್ತು. ಅವರು, ಟಿಕೆಟ ನಿರಾಕರಿಸಿದ್ದರಿಂದ
ಅವರ ಪುತ್ರ ಎಸ್.ಎಸ್. ಮಲ್ಲಿಕಾರ್ಜುನ ಅವರಿಗೆ ಟಿಕೆಟ್ ನೀಡಲು
ಹೈಕಮಾಂಡ್ ಒಪ್ಪಿಗೆ ಸೂಚಿಸಿತ್ತು. ಎಸ್.ಎಸ್.ಮಲ್ಲಿಕಾರ್ಜುನ ಕೂಡ ಸ್ಪರ್ಧೆಗೆ ಹಿಂದೇಟು ಹಾಕಿ, ತಮ್ಮ
ಅಣತಿಯಂತೆ ನಡೆಯುವ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಕುರುಬ ಸಮುದಾಯಕ್ಕೆ ಸೇರಿರುವ ಮಂಜಪ್ಪ ಅವರಿಗೆ ಟಿಕೆಟ್ ಕೊಡಿಸುವ ಪ್ರಯತ್ನಿಸಿದರು. ಆದರೆ, ಕಾಂಗ್ರೆಸ್ ಹೈಕಮಾಂಡ್ ಮಾತ್ರ ಲಿಂಗಾಯತರಿಗೆ ಮೀಸಲಿಟ್ಟ ಕ್ಷೇತ್ರವನ್ನು ಕುರುಬ ಸಮುದಾಯಕ್ಕೆ ನೀಡಲು ನಿರಾಕರಿಸಿ, ಲಿಂಗಾಯತ ಸಮುದಾಯದ ಅಭ್ಯರ್ಥಿ ಹುಡುಕುವಂತೆ ಸೂಚಿಸಿತು. ಹೀಗಾಗಿ, ಲಿಂಗಾಯತ ಬಣಜಿಗ
ಸಮುದಾಯಕ್ಕೆ ಸೇರಿದ ತೇಜಸ್ವಿ ಪಟೇಲ ಅವರಿಗೆ ಟಿಕೆಟ್ ಕೊಡಿಸಲು ಶಾಮನೂರು ವಿರೋಧಿ ಬಣ ಪ್ರಯತ್ನ ನಡೆಸಿತು.ಸಾದರ ಲಿಂಗಾಯತರಿಗೆ ಟಿಕೆಟ್ ಕೊಡುವ ಸುಳಿವು ಅರಿತ ಕೊಂಡಜ್ಜಿ ಬಸಪ್ಪ
ಅವರ ಮೊಮ್ಮಗ, ಯುವ ಕಾಂಗ್ರೆಸ್ ಮುಖಂಡ ನಿಖೀಲ ಕೊಂಡಜ್ಜಿ ಕೂಡ
ಹೈಕಮಾಂಡ್‌ನ ಜಾತಿ ಲೆಕ್ಕಾಚಾರದ ಅಸ್ತ್ರವನ್ನೇ ಅವಕಾಶವನ್ನಾಗಿ ಬಳಸಿಕೊಳ್ಳಲು ಯತ್ನ ನಡೆಸಿದ್ದಾರೆ.
Related Articles
ಅಲ್ಪಸಂಖ್ಯಾತರಿಗೆ ನೀಡುತ್ತಿದ್ದ ಹಾವೇರಿ ಕ್ಷೇತ್ರವನ್ನು ಅಣ್ಣನಿಗಾಗಿ ಪಟ್ಟು ಹಿಡಿದು ಎಚ್.ಕೆ. ಪಾಟೀಲ್ ಪಡೆದುಕೊಂಡಿರುವುದರಿಂದ ಸಾಮಾಜಿಕ
ನ್ಯಾಯ ಕಾಪಾಡಲು ಧಾರವಾಡ ಕ್ಷೇತ್ರವನ್ನುಅಲ್ಪ ಸಂಖ್ಯಾತರಿಗೆ ನೀಡಲು ಕಾಂಗ್ರೆಸ್ ಹೈಕಮಾಂಡ್ ಆಸಕ್ತಿ ವಹಿಸಿದೆ ಎಂದು ಹೇಳಲಾಗುತ್ತಿದೆ. ಅದೇ ಕಾರಣಕ್ಕೆ, ಮಾಜಿ ಸಂಸದ ಐ.ಜಿ. ಸನದಿ ಅಥವಾ ಅವರ ಪುತ್ರ ಶಾಕೀರ್ ಸನದಿ ಹೆಸರು ಮುಂಚೂಣಿಯಲ್ಲಿ ಕೇಳಿ ಬರುತ್ತಿವೆ. ಇದರ ನಡುವೆ ಸಿ.ಎಂ.
ಇಬ್ರಾಹಿಂ ಪುತ್ರಿ ಸೀಮಾ ಅವರ ಹೆಸರು ಕೂಡ ಬಲವಾಗಿ ಕೇಳಿ ಬರುತ್ತಿದೆ.
ಆದರೆ, ಬಿಜೆಪಿಯ ಭದ್ರಕೋಟೆ ಹಾಗೂ ಹಿಂದುತ್ವದ ಉತ್ತರ ಕರ್ನಾಟಕದ
ಕೇಂದ್ರವಾಗಿರುವ ಹುಬ್ಬಳ್ಳಿ-ಧಾರವಾಡದಲ್ಲಿ ಅಲ್ಪಸಂಖ್ಯಾತ ಸಮುದಾ
ಯದವರಿಗೆ ಟಿಕೆಟ… ನೀಡಿದರೆ, ಗೆಲುವಿನ ತಟ್ಟೆಯನ್ನು ಬಿಜೆಪಿಯವರ ಕೈಗೆ ಅನಾಯಾಸವಾಗಿ ನೀಡಿದಂತಾಗುತ್ತದೆ ಎಂಬ ಮಾತು ರಾಜ್ಯ ಕಾಂಗ್ರೆಸ್ ವಲಯದಲ್ಲಿ ಕೇಳಿ ಬರುತ್ತಿದೆ. ಹೀಗಾಗಿ ಅಲ್ಪಸಂಖ್ಯಾತರ ಬದಲು ಬಹುಸಂಖ್ಯಾತ ಹಿಂದುಗಳಲ್ಲಿ ಪ್ರಬಲ ಲಿಂಗಾಯತ ಸಮುದಾಯಕ್ಕೆ ಸೇರಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ
ಅಥವಾ ಸದಾನಂದ ಡಂಗನವರ್ ಅವರಲ್ಲಿ ಯಾರಾದರೂ ಒಬ್ಬರಿಗೆ ಟಿಕೆಟ್ ಕೊಡಬೇಕೆನ್ನುವುದು ರಾಜ್ಯ ಕಾಂಗ್ರೆಸ್ ನಾಯಕರ ವಾದವಾಗಿದೆ ಎಂದು ತಿಳಿದು ಬಂದಿದೆ.
Advertisement
ವಿಳಂಬಕ್ಕೆ ಸಾಮಾಜಿಕ ನ್ಯಾಯ ಸೂತ್ರ ಕಾರಣಎರಡೂ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ವಿಳಂಬಕ್ಕೆ ಹೈಕಮಾಂಡ್‌ನ ಸಾಮಾಜಿಕ ನ್ಯಾಯ ಹಾಗೂ ರಾಜ್ಯ ನಾಯಕರ ಗೆಲುವಿನ ಸೂತ್ರದ ನಡುವಿನ ಸಂಘರ್ಷವೇ ಕಾರಣ ಎಂಬ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಕೇಳಿ ಬರುತ್ತಿವೆ. ಶಂಕರ ಪಾಗೋಜಿ