Advertisement

ISRO: ಭಾರತದ ಬಾಹ್ಯಾಕಾಶ ತಂತ್ರಜ್ಞಾನಕ್ಕೆ ಅಮೆರಿಕದಿಂದ ಬೇಡಿಕೆ!: ಎಸ್‌.ಸೋಮನಾಥ್‌

08:51 PM Oct 15, 2023 | Team Udayavani |

ರಾಮೇಶ್ವರಂ: ಭಾರತದ ಬಾಹ್ಯಾಕಾಶ ತಂತ್ರಜ್ಞಾನವನ್ನು ಇದೀಗ ಅಮೆರಿಕದ ನಾಸಾ ವಿಜ್ಞಾನಿಗಳೂ ಕೊಡುತ್ತೀರಾ ಎಂದು ಕೇಳುತ್ತಿದ್ದಾರೆ…

Advertisement

ಹೀಗೆಂದು ಇಸ್ರೋ ಅಧ್ಯಕ್ಷ ಎಸ್‌.ಸೋಮನಾಥ್‌ ಹೇಳಿದ್ದಾರೆ. ಈಗ ಕಾಲ ಬದಲಾಗಿದೆ, ಭಾರತ ಅತ್ಯಂತ ಬಲಿಷ್ಠವಾಗಿದೆ. ನಮ್ಮ ಜ್ಞಾನ, ಬುದ್ಧಿವಂತಿಕೆಯ ಮಟ್ಟ ಇಡೀ ಜಗತ್ತಿನಲ್ಲೇ ಅತ್ಯಂತ ಶ್ರೇಷ್ಠರ ಪೈಕಿ ಸ್ಥಾನ ಪಡೆದಿದೆ ಎಂದು ಸೋಮನಾಥ್‌ ಹೇಳಿದ್ದಾರೆ.

ರಾಮೇಶ್ವರಂನಲ್ಲಿ ನಡೆದ ಭಾರತದ ಖ್ಯಾತ ವಿಜ್ಞಾನಿ, ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ.ಅಬ್ದುಲ್‌ ಕಲಾಮ್‌ ಅವರ 92ನೇ ಜನ್ಮದಿನಾಚರಣೆಯಲ್ಲಿ ಅವರು ಮಾತನಾಡಿದರು. “ನಾವು ಚಂದ್ರಯಾನ-3 ನೌಕೆಯನ್ನು ಉಡಾವಣೆ ಮಾಡುವುದಕ್ಕೂ ಮುನ್ನ, ನಾಸಾ-ಜೆಪಿಎಲ್‌ ವಿಜ್ಞಾನಿಗಳನ್ನು ಆಹ್ವಾನಿಸಿದ್ದೆವು. ಅವರು ನಮ್ಮೆಲ್ಲ ಸಿದ್ಧತೆ, ತಂತ್ರಜ್ಞಾನಗಳನ್ನು ನೋಡಿ, ಎಲ್ಲವೂ ಚೆನ್ನಾಗಿದೆ, ಸುಗಮವಾಗಿ ನಡೆಯಲಿದೆ ಎಂದು ಹೊಗಳಿದರು. ಅಷ್ಟು ಮಾತ್ರವಲ್ಲ, ಇಷ್ಟು ಕಡಿಮೆ ವೆಚ್ಚದಲ್ಲಿ, ಸರಳವಾಗಿ, ಉನ್ನತ ತಂತ್ರಜ್ಞಾನವನ್ನು ಹೇಗೆ ಸಿದ್ಧ ಮಾಡಿದಿರಿ? ನೀವೇಕೆ ಅದನ್ನು ನಮಗೆ ಮಾರಬಾರದು? ಎಂದು ಕೇಳಿದರು. ಅರ್ಥ ಮಾಡಿಕೊಳ್ಳಿ, ಈಗ ಕಾಲ ಬದಲಾಗಿದೆ ಎಂದು ಸೋಮನಾಥ್‌ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next