Advertisement

Tiger: ಹುಲಿ ಉಗುರಿಗೆ ಹೆಚ್ಚಿದೆ ಬೇಡಿಕೆ- ಅಕ್ರಮವಾಗಿ ಡೀಲ್‌ ಮಾಡಿ ವ್ಯವಹಾರ

12:31 AM Oct 26, 2023 | Team Udayavani |

ಬೆಂಗಳೂರು: ಹುಲಿ ಉಗುರು ಅದೃಷ್ಟದ ಸಂಕೇತವೆಂದು ಬಿಂಬಿತವಾಗಿರುವುದರಿಂದ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ. ದಂಧೆಕೋರರು ಅಕ್ರಮವಾಗಿ ಡೀಲ್‌ ಮಾಡಿ ವ್ಯವಹಾರ ಕುದುರಿಸುತ್ತಾರೆ. ಒಂದು ಹುಲಿ ಉಗುರು 20 ಸಾವಿರ ರೂ.ನಿಂದ 1 ಲಕ್ಷದವರೆಗೂ ಮಾರಾಟವಾಗುತ್ತಿದೆ ಎಂದು ತಿಳಿದು ಬಂದಿದೆ.

Advertisement

ಸಾಮಾನ್ಯವಾಗಿ ದಂಧೆಕೋರರು ಕಾಡುಗಳಲ್ಲಿ ಮೃತಪಟ್ಟ ಹುಲಿಯ ಉಗುರನ್ನು ಕಿತ್ತು ಮಾರಾಟ ಮಾಡುತ್ತಾರೆ. ಉಗುರಿಗೋಸ್ಕರ ಜೀವಂತ ಹುಲಿಯನ್ನು ಕೊಲ್ಲುವ ಪ್ರಕರಣಗಳು ವಿರಳ ಎನ್ನುತ್ತವೆ ಅರಣ್ಯ ಇಲಾಖೆ ಮೂಲಗಳು.

ನಕಲಿ ಹುಲಿ ಉಗುರು ಜಾಲ
ಕೆಲವು ಮಾರುಕಟ್ಟೆಗಳಲ್ಲಿ ಅಕ್ರಮವಾಗಿ ನಕಲಿ ಹುಲಿ ಉಗುರು ಮಾರಾಟ ಜಾಲ ಎಗ್ಗಿಲ್ಲದೇ ನಡೆಯುತ್ತಿದೆ. ಅಸಲಿ ಹುಲಿ ಉಗುರು ಎಂದು ನಂಬಿಸಿ ಹೆಚ್ಚಿನ ದುಡ್ಡು ಪಡೆದು ಮಾರಾಟ ಮಾಡುತ್ತಾರೆ. ಇತ್ತ ಇದನ್ನು ಖರೀದಿಸಿದವರು ಅಸಲಿ ಇರಬಹುದೆಂದೇ ನಂಬಿ ಲಾಕೆಟ್‌ಗಳಲ್ಲಿ ಅಳವಡಿಸುತ್ತಾರೆ.

ಮೃತಪಟ್ಟಿರುವ ಹುಲಿಗಳ ಮರಣೋತ್ತರ ಪರೀಕ್ಷೆ ನಡೆಸುವ ವೇಳೆ ಅದರ ಪ್ರತೀ ಅಂಗಾಂಗಗಳು ಇವೆಯೇ ಎಂದು ಕೂಲಂಕಷವಾಗಿ ಪರಿಶೀಲಿಸಲಾಗುತ್ತದೆ. ಒಂದು ವೇಳೆ ಸತ್ತ ಹುಲಿಯಿಂದ ಅದರ ಅಂಗಾಂಗ ತೆಗೆದರೆ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು.
– ಸುಭಾಷ್‌ ಕೆ. ಮಾಲ್ಖಡೆ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು (ವನ್ಯಜೀವಿ) ಅರಣ್ಯ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next