Advertisement
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಸಿಎಂ ಹುದ್ದೆ ಸೃಷ್ಟಿ ವಿಚಾರದ ಪ್ರಸಾವ ಸದ್ಯಕ್ಕಿಲ್ಲ. ಲೋಕಸಭೆ ಚುನಾವಣೆಯಲ್ಲಿ ಪಕ್ಷ ಅತಿ ಹೆಚ್ಚು ಸೀಟುಗಳೊಂದಿಗೆ ಗೆಲ್ಲಬೇಕು ಅಷ್ಟೇ. ಈಗ ಡಿಸಿಎಂ ಕೊಡಿ ಅನ್ನೋದು ಸರಿಯಲ್ಲ. ಲೋಕಸಭೆ ಚುನಾವಣೆ ಬಳಿಕ ಆ ಬೇಡಿಕೆ ಇರಲಿದೆ ಎಂದರು.
ಲೋಕಸಭೆಗೆ ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿ ಕೇಳಿದಾಗ, ಈಗ ಕೇವಲ ಒಂದು ಸುತ್ತಿನ ಸಮೀಕ್ಷೆ ಮತ್ತು ಚರ್ಚೆ ಆಗಿದೆ. ಇನ್ನೂ ಒಂದೆರಡು ಸುತ್ತಿನ ಸಭೆಗಳು ಆಗಬೇಕಿವೆ. ಬೆಳಗಾವಿಯಿಂದಲೂ ಎರಡು- ಮೂರು ಹೆಸರುಗಳನ್ನು ನೀಡಲಾಗಿದೆ. ಸಚಿವೆ ಲಕ್ಷ್ಮೀ ಹೆಬ್ಟಾಳ್ಕರ್ ಅವರೂ ತಮ್ಮ ಮಗನಿಗೆ ಟಿಕೆಟ್ ಕೊಡಿಸಲು ಅರ್ಜಿ ಹಾಕಿದ್ದಾರೆ. ಆದರೆ ಅವರು ಬಹಿರಂಗವಾಗಿ ಎಲ್ಲೂ ಹೇಳಿಲ್ಲ. ಸಮೀಕ್ಷೆಯಲ್ಲಿ ಒಲವು ವ್ಯಕ್ತವಾದರೆ, ಅವರಿಗೇ ಟಿಕೆಟ್ ಕೊಡುತ್ತಾರಷ್ಟೇ ಎಂದರು. ಟಿಕೆಟ್ ಅಂತಿಮಗೊಳ್ಳುವ ಮೊದಲು ಎಐಸಿಸಿ ಹಾಗೂ ಕೆಪಿಸಿಸಿ ಅಧ್ಯಕ್ಷರು ಸಮೀಕ್ಷೆ ಮಾಡಿಸುತ್ತಾರೆ. ಯಾರಿಗೆ ಹೆಚ್ಚು ಒಲವು ಇದೆಯೋ ಅವರಿಗೆ ಟಿಕೆಟ್ ಆಗುತ್ತದೆ ಎಂದ ಅವರು, ರಾಮ ಮಂದಿರಕ್ಕೆ ಕಾಂಗ್ರೆಸ್ ನಾಯಕರು ಹೋಗುವ ಬಗ್ಗೆ ಸ್ವತಃ ಮುಖ್ಯಮಂತ್ರಿ ಈಗಾಗಲೇ ತಿಳಿಸಿದ್ದಾರೆ. ಅದರಂತೆ ವಿಶೇಷ ವಿಮಾನದಲ್ಲಿ ಹೋಗುವುದು ಅಂತ ಆಗಿದೆ. ಎಲ್ಲರೂ ಹೋಗುತ್ತೇವೆ ಅಂತ ಹೇಳುತ್ತಿದ್ದಾರೆ. ಅಲ್ಲಿಗೆ ಹೋಗಬಾರದು ಎಂದೇನಿಲ್ಲ ಎಂದು ಸ್ಪಷ್ಟಪಡಿಸಿದರು.
Related Articles
Advertisement