Advertisement

ವಿಕಲಚೇತನರ ಹಕ್ಕು ಕಾಯ್ದೆ ಜಾರಿಗೆ ಆಗ್ರಹ

02:41 PM Nov 30, 2017 | |

ಕಾರವಾರ: ವಿಕಲಚೇತನರ ಹಕ್ಕಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಕಾಳಜಿಯಿಂದ ಜಾರಿಗೆ ತರುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲೆಯ ವಿಕಲಚೇತನರು ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಮೂರು ತಾಸುಗಳಿಗೆ ಹೆಚ್ಚು ಸಮಯ ಧರಣಿ ಸತ್ಯಾಗ್ರಹ  ಮಾಡಿದರು.

Advertisement

ಜಿಲ್ಲಾ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದಿಂದ ಧರಣಿ ಮಾಡಲಾಯಿತು. ಅಳ್ವೆಕೋಡಿ ಪ್ರವೀಣ್‌ಕುಮಾರ ಶೆಟ್ಟಿ ಮಾತನಾಡಿ, ಅಂಗವಿಕಲರ ಕಲ್ಯಾಣಕ್ಕೆ ಜಿಲ್ಲಾಧಿಕಾರಿಗಳು ಪ್ರತಿ ತಿಂಗಳು ಸಭೆ ಮಾಡಬೇಕು ಎಂದು ಒತ್ತಾಯಿಸಿದರು. ಅಂಗವಿಕಲರ ಮಾಸಿಕ ವೇತನವನ್ನು ಕನಿಷ್ಠ 3 ಸಾವಿರ ಕೊಡಬೇಕು. ಶೇ.75 ನ್ಯೂನ್ಯತೆಗಳಿರುವವರಿಗೆ 5 ಸಾವಿರ ಮಾಸಿಕ ವೇತನ ಕೊಡಬೇಕು. ಸುಪ್ರಿಂಕೋರ್ಟ್‌ ನಿರ್ದೇಶನವನ್ನು ಕೇಂದ್ರ-ರಾಜ್ಯ ಸರ್ಕಾರಗಳು ಜಾರಿಗೆ ತರಬೇಕು. ಅಂಗವಿಕಲರ ಕಲ್ಯಾಣಕ್ಕೆ 2013ರಲ್ಲಿ
ರೂಪಿಸಲಾದ ಕಾಯಿದೆಯನ್ನು ಇದೇ ಚಳಿಗಾಲದ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮಂಡಿಸಬೇಕು. 

ಡಾಟಾ ಎಂಟ್ರಿ ಆಪರೇಟರ್‌ ಹುದ್ದೆಗಳಿಗೆ ವಿಕಲಚೇತನರಿಗೆ ಹೆಚ್ಚು ಆದ್ಯತೆ ನೀಡಬೇಕು. ಎಲ್ಲಾ ಅಂಗವಿಕಲರಿಗೆ ಅಂತ್ಯೋದಯದ ಅಡಿ ಪಡಿತರ ಚೀಟಿ ನೀಡಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡಬೇಕು. ದೇಶದಲ್ಲಿ ಎಲ್ಲಾ ಅಂಗವಿಕಲರಿಗೆ ಒಂದೇ
ಮಾದರಿಯ ಗುರುತಿನ ಚೀಟಿ ನೀಡಬೇಕು, ರೈಲ್ವೆ ಮತ್ತು ಆಸ್ಪತ್ರೆಯಲ್ಲಿ ವೈದ್ಯರು ಅಂಗವಿಕಲರಿಗೆ ಹೆಚ್ಚು ಕಿರುಕುಳ ನೀಡುತ್ತಿದ್ದಾರೆ. ಇದನ್ನು ನಿಯಂತ್ರಿಸಬೇಕೆಂದು ಕೇಂದ್ರ, ರಾಜ್ಯ ಸರ್ಕಾರಗಳನ್ನು ಆಗ್ರಹಿಸಿದರು. 

ಜಿಲ್ಲೆಯ ವಿವಿಧ ತಾಲೂಕುಗಳಿಂದ ಬಂದಿದ್ದ 53 ವಿಕಲಚೇತನರು ಹಾಗೂ ವಿಕಲಚೇತನರ ಸಂಘದ ಪ್ರಧಾನ ಕಾರ್ಯದರ್ಶಿ ಸದಾಶಿವ ಗಾವಡಿ, ಚಂದ್ರಶೇಖರ ತಿಮ್ಮಪ್ಪ ನಾಯ್ಕ, ಸೂರ್ಯಕಾಂತ, ಮಿನಿನ್‌ ಡಿಸೋಜಾ, ಸದಾನಂದ ಎಂ.ನಾಯ್ಕ, ಸಂತೋಷ, ಉದಯ್‌, ಕರಿಯಮ್ಮ ಮುಂತಾದವರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next