Advertisement
ಭಾನುವಾರ ಶಾಸಕರ ಭವನದಲ್ಲಿ ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘದಿಂದ ಹಮ್ಮಿಕೊಂಡಿದ್ದ ಒಂದು ರಾಷ್ಟ್ರ, ಒಂದು ಶಿಕ್ಷಣ, ಒಂದು ವೇತನ ಜಾರಿಗೆ ಒತ್ತಾಯಿಸುವ ಬಗ್ಗೆ ಚರ್ಚಿಸಲು ನಡೆದ ದುಂಡು ಮೇಜಿನ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ವಿಶ್ವವಿದ್ಯಾಲಯದ ಬೋಧಕರಅರ್ಹತೆ, ವೇತನ ಇತ್ಯಾದಿ ನಿಗದಿ ಮಾಡುವ ಯುಜಿಸಿಯಂತೆಯೇ ಶಾಲಾ ಶಿಕ್ಷಕರ ಅರ್ಹತೆ, ಗುಣಮಟ್ಟ, ವೇತನದ ನಿಗದಿಗೆ ಶಾಲಾ ಶಿಕ್ಷಣ ಅನುದಾನ ಆಯೋಗ ರಚಿಸಬೇಕು ಎಂಬುದನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ತೀರ್ಮಾನಿಸಿದೆ.
ವಿಚಾರದಲ್ಲಿ ದೇಶದಲ್ಲೇ ಏಕರೂಪತೆ ತರುವ ಕಾರ್ಯ ನಡೆಯುತ್ತಿದೆ. ಈ ವಿಚಾರವಾಗಿ ಸರ್ಕಾರಗಳು ಶಿಕ್ಷಕ ಸಮುದಾಯ, ಶಿಕ್ಷಣ ಸಂಸ್ಥೆ ಹಾಗೂ ತಜ್ಞರನ್ನು ವಿಶ್ವಾಸಕ್ಕೆ ತೆಗೆದು ಕೊಳ್ಳಬೇಕೆಂದು ಆಗ್ರಹಿಸಿದ್ದಾರೆ. ವೃಂದ ಮತ್ತು ನೇಮಕಾತಿ ನಿಯಮ ರಚನೆ ಸಂಬಂಧಿಸಿದಂತೆ ದೇಶಾದ್ಯಂತ ಏಕರೂಪತೆ ಇರಬೇಕು. ಕೇಂದ್ರೀಯ ವಿದ್ಯಾಲಯ, ನವೋ ದಯ ವಿದ್ಯಾಲಯದ ಶಿಕ್ಷಕರ ನೇಮಕ ಸಂಬಂಧ ಕೇಂದ್ರದ ವೃಂದ ಮತ್ತು ನೇಮಕಾತಿ ನಿಯಮದ ಮಾದರಿಯಲ್ಲಿ ರಾಜ್ಯ ಸರ್ಕಾರದ ಸಿ ಆ್ಯಂಡ್ ಆರ್ ನಿಯಮ ರಚನೆಯಾಗ ಬೇಕು. ಇದಕ್ಕೆ ಶಿಕ್ಷಕರಿಂದ ಆಕ್ಷೇಪಣೆ ಗಳನ್ನು ಕರೆಯಬೇಕು ಎಂದು ಒತ್ತಾಯಿಸಿದರು.ಒಂದು ರಾಷ್ಟ್ರ, ಒಂದು ಶಿಕ್ಷಣ, ಒಂದು ವೇತನ ಜಾರಿಗೆ ಸಂಬಂಧಿಸಿ ದಂತೆ ಜಿಲ್ಲಾ, ರಾಜ್ಯ ಮಟ್ಟದಲ್ಲಿ ಇನ್ನಷ್ಟು ಚರ್ಚೆ ಹಾಗೂ ಈ ಕುರಿತು ರಾಜ್ಯಮಟ್ಟದ ಸೆಮಿನಾರ್ ಅನ್ನು ಬೆಂಗಳೂರಿನಲ್ಲಿ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಅರುಣ್ ಶಹಾಪೂರ್ ಹೇಳಿದರು.
Related Articles
Advertisement