Advertisement
ತಂತ್ರಜ್ಞಾನ ಬೆಳೆದಂತೆ ಇತ್ತೀಚಿನ ದಿನಗಳಲ್ಲಿ ವಾರಕ್ಕೊಂದು ಹೊಸ ಮೊಬೈಲ್ ಫೋನ್ ಗಳು ಬಿಡುಗಡೆಯಾಗುತ್ತಿದ್ದು, ಗ್ರಾಹಕರು ಕೂಡ ಇಂದಿನ ಜಮಾನಕ್ಕೆ ತಕ್ಕಂತೆ ಹೊಸ ಮೊಬೈಲ್ ಫೋನ್ ಖರೀದಿ ಮಾಡುತ್ತಿದ್ದಾರೆ. ಆದರೆ, ಕೈಯಲ್ಲಿರುವ ಹಳೆಯ ಮೊಬೈಲ್ ಫೋನ್ ಏನು ಮಾಡುವುದು? ಎಂಬ ಚಿಂತೆ ಗ್ರಾಹಕರದ್ದು. ಆದರೆ, ಹಳೆ ಮೊಬೈಲ್ ಗಳ ಮಾರಾಟಕ್ಕೂ ಈಗಿನ ದಿನಗಳಲ್ಲಿ ಅಂತರ್ಜಾಲ ತಾಣಗಳಲ್ಲಿ ಅವಕಾಶವಿದೆ.
ಹೊಸ ಮೊಬೈಲ್ ಖರೀದಿ ವೇಳೆನಮ್ಮಲ್ಲಿರುವ ಹಳೆ ಮೊಬೈಲ್ ಬದಲಾವಣೆ ಮಾಡಲು ಪ್ರತ್ಯೇಕ ವ್ಯವಸ್ಥೆಯನ್ನು ಆನ್ ಲೈನ್‌ನಲ್ಲಿ ಕಲ್ಪಿಸಲಾಗಿದೆ. ಆನ್‌ಲೈನ್‌ನಲ್ಲಿ ಹೊಸ ಮೊಬೈಲ್ ಖರೀದಿಸುವ ಸಮಯದಲ್ಲಿ ‘ಹಳೆ ಮೊಬೈಲ್ ಎಕ್ಸೇಂಜ್’ ಲಿಂಕ್ ಕ್ಲಿಕ್ ಮಾಡಿ, ನಮ್ಮಲ್ಲಿರುವ ಹಳೆ ಫೋನ್ ಮಾಡೆಲ್ ನಂಬರ್ ಹಾಕಿದರೆ, ಹಳೆ ಫೋನ್ ಗೆ ದೊರಕುವ ಬೆಲೆ ಕಾಣುತ್ತದೆ. ಕೆಲವೊಂದು ಮಾಡೆಲ್ ಫೋನ್ ಗಳಿಗೆ ಮಾತ್ರ ಬದಲಾವಣೆಗೆ ಅವಕಾಶವಿದೆ. ಅದಕ್ಕೂ ಮುನ್ನ ನಿಮ್ಮ ಪ್ರದೇಶದಲ್ಲಿ ಎಕ್ಸ್ ಚೇಂಜ್‌ಗೆ ಅವಕಾಶ ವಿದೆಯೇ ಎಂಬ ಬಗ್ಗೆ ಪರಿಶೀಲನೆ ಮಾಡಬೇಕು. ಹಾಗಂತ ಹಳೆಯ ಕೆಟ್ಟು ಹೋದ ಮೊಬೈಲ್ ಫೋನ್ ಎಕ್ಸ್ ಚೇಂಜ್‌ಗೆ ಅವಕಾಶವಿಲ್ಲ. ನಾವು ನೀಡುವ ಹಳೆ ಮೊಬೈಲ್‌ಗಳು ಚಾಲು ಆಗುತ್ತಿರಬೇಕು. ಕೆಲವೊಮ್ಮೆ ಫೋನ್ ಮಾಡೆಲ್, ಸ್ಥಿತಿಗತಿ ಆಧರಿಸಿ ಉತ್ತಮ ಬೆಲೆಯೂ ಸಿಗುತ್ತದೆ.
Related Articles
Advertisement
ಇದರ ಮೂಲಕ ಐಫೋನ್, ಸ್ಯಾಮ್ ಸಂಗ್ ಸೇರಿದಂತೆ ಪ್ರಮುಖ ಕಂಪೆನಿಯ ಬಳಸಿದ ಮೊಬೈಲ್‌ಗಳನ್ನು ಸ್ಥಳೀಯರಿಂದ ಖರೀದಿಸಲಿದ್ದಾರೆ. ಈ ವಿಚಾರವಾಗಿ ದೊಡ್ಡ ಸ್ಮಾರ್ಟ್‌ಫೋನ್ ಕಂಪೆನಿಗಳ ಜೊತೆಗೆ ಮಾತುಕತೆ ನಡೆಯುತ್ತಿದೆ. ಈ ಮೂಲಕ ಕಡಿಮೆ ಬೆಲೆಗೆ ಕೆಲ ತಿಂಗಳುಗಳ ವಾರಂಟಿಯೊಂದಿಗೆ ಬಳಸಿದ ಪ್ರಮಾಣಿಕೃತ ಮೊಬೈಲ್‌ಗಳು ಗ್ರಾಹಕರ ಕೈಗೆ ಸಿಗಲಿವೆ. ಅಷ್ಟೇ ಅಲ್ಲದೆ ಕ್ವಿಕರ್, ಒಎಲ್‌ಎಕ್ಸ್ ಸೇರಿದಂತೆ ಮತ್ತಿತರ ಆನ್‌ಲೈನ್ ಜಾಲ ತಾಣಗಳಲ್ಲಿ ಹಳೆಯ ಮೊಬೈಲ್ ಮಾರಾಟ ಮಾಡುವುದಕ್ಕೆ ಅವಕಾಶವಿದೆ.
ಫೋನ್ ಮಾರುವ ಮುನ್ನ ಎಚ್ಚರಹಳೆಯ ಫೋನ್‌ಗಳನ್ನು ಆನ್ ಲೈನ್ ಮುಖೇನ, ಮೊಬೈಲ್ ಶೋರೂಂಗಳಲ್ಲಿ ಅಥವಾ ಆನ್‌ಲೈನ್ ಜಾಲತಾಣಗಳಲ್ಲಿ ಮಾರಾಟ ಮಾಡುವ ಮುನ್ನ ಎಚ್ಚರವಹಿಸಬೇಕಿದೆ. ಹಳೆಯ ಫೋನ್ ಮಾರಾಟ ಮಾಡುವ ಮೊದಲು ಫ್ಯಾಕ್ಟ್ರಿ ಸೆಟ್ಟಿಂಗ್ ರೀಸೆಟ್ ಮಾಡಿಕೊಳ್ಳಿ. ಆ ಸಮಯದಲ್ಲಿ ಫೋನ್‌ನಲ್ಲಿ ಇದ್ದ ಎಲ್ಲಾ ಡಾಟಾಗಳು ಅಳಿಸಿಹೋಗುತ್ತದೆ. ಫೋನ್ ಗಳನ್ನು ಮಾರಾಟ ಮಾಡುವ ಮುನ್ನ ಬ್ಯಾಕ್ ಅಪ್ ತೆಗೆದುಕೊಳ್ಳುವುದು ಒಳ್ಳೆಯದು. ಕಂಪ್ಯೂಟರ್ ಅಥವಾ ಗೂಗಲ್ ಡ್ರೈವ್ ವ್‌ಗಳಲ್ಲಿ ಬ್ಯಾಕ್‌ಅಪ್ ತೆಗೆದಿಡಲು ಅವಕಾಶವಿದೆ. ಖರೀದಿ ಮುನ್ನವೂ ಎಚ್ಚರ
ಸೆಕೆಂಡ್ ಹ್ಯಾಂಡ್ ಮೊಬೈಲ್‌ಖರೀದಿ ಮಾಡುವಾಗಲೂ ಎಚ್ಚರ ವಹಿಸಬೇಕು. ಮೊದಲನೆಯದಾಗಿ ಮೊಬೈಲ್‌ನ ಪ್ರೊಸೆಸರ್ ಮತ್ತು ರ್ಯಾಮ್ ಬಗ್ಗೆ ಗಮನ ಇರಬೇಕು. ಕಡಿಮೆ ಎಂದರೂ, ಸುಮಾರು 2 ಜಿ.ಬಿ.ಯಷ್ಟಾದರೂ ಇರುವಂತೆ ಜಾಗೃತಿ ವಹಿಸಬೇಕು. ಫೋನ್ ಡಿಸ್ಪ್ಲೇ , ಸ್ಪೀಕರ್, ಬ್ಯಾಟರಿ ಹೇಗಿದೆ ಎನ್ನುವತ್ತಲೂ ಗಮನ ಹರಿಸಿ. ವರ್ಷದೊಳಗೆ ಮೊಬೈಲ್ ಎಕ್ಸ್‌ಚೇಂಜ್ ಹೆಚ್ಚು
ಕ್ವಿಕರ್ ಸಮೀಕ್ಷೆಯೊಂದರ ಪ್ರಕಾರ ಶೇ.40ರಷ್ಟು ಮೊಬೈಲ್ ಫೋನ್ ಬಳಕೆದಾರರು ಒಂದು ವರ್ಷಕ್ಕಿಂತ ಮುಂಚೆಯೇ ತಮ್ಮ ಮೊಬೈಲ್ ಫೋನ್‌ಗಳನ್ನು ಬದಲಾಯಿಸುತ್ತಾರೆ. ಶೇ.2ರಷ್ಟು ಮಂದಿ ನಾಲ್ಕು ವರ್ಷದ ಬಳಿಕ ಕೂಡ ಒಂದೇ ಮೊಬೈಲ್ ಫೋನ್ ಬಳಕೆ ಮಾಡುತ್ತಾರೆ. ಶೇ.75ರಷ್ಟು ಮಂದಿ ಮೊಬೈಲ್ ಫೋನ್ ಖರೀದಿಗೆ 10,000 ರೂ.ಗೂ ಹೆಚ್ಚಿನ ಹಣ ಹೂಡುತ್ತೇವೆ ಎಂದಿದ್ದಾರೆ. ಬಾಕಿ ಶೇ.25ರಷ್ಟು ಮಂದಿ 5 ರಿಂದ 10 ಸಾವಿರ ಮತ್ತು 15 ಸಾವಿರಕ್ಕೂ ಹೆಚ್ಚಿನ ದರದ ಮೊಬೈಲ್ ಖರೀದಿಸುತ್ತಾರೆ. ಸುಲಲಿತವಾಗಿ
ಹೊಸ ಫೋನ್ ಖರೀದಿ ಮಾಡುವ ಸಮಯದಲ್ಲಿ ನಮ್ಮಲ್ಲಿರುವ ಹಳೆಯ ಫೋನ್ ಎಕ್ಸ್‌ಚೇಂಜ್ ಮಾಡಲು ಆನ್ ಲೈನ್‌ನಲ್ಲಿಯೂ ಅವಕಾಶವಿದೆ. ಇದರಿಂದ ವ್ಯವಹಾರ ಕೂಡ ಸುಲಲಿತವಾಗಿ ಆಗುತ್ತದೆ.
– ಸುಶಾಂತ್ ಕದ್ರಿ ನವೀನ್ ಭಟ್ ಇಳಂತಿಲ