Advertisement

ಕೂಡು ರಸ್ತೆ ದುರಸ್ತಿಗೆ ಆಗ್ರಹ

03:49 PM Jul 08, 2022 | Team Udayavani |

ಚಿಂಚೋಳಿ: ಸೇಡಂ ಮತಕ್ಷೇತ್ರಕ್ಕೆ ಒಳಪಟ್ಟಿರುವ ತಾಲೂಕಿನ ಇರಗಪಳ್ಳಿ- ಬುರಗಪಳ್ಳಿ ಗ್ರಾಮದ ಕೂಡು ರಸ್ತೆ ಸಂಪೂರ್ಣ ಹದಗೆಟ್ಟಿರುವುದರಿಂದ ವಾಹನ ಗಳು ರಸ್ತೆಯಲ್ಲೇ ಸಿಲುಕಿಕೊಂಡು ಶಾಲೆ ಸಮಯಕ್ಕೆ ಹೋಗಲು ವಿದ್ಯಾರ್ಥಿ ಗಳಿಗೆ ತೊಂದರೆಯಾಗುತ್ತಿದೆ ಎಂದು ಇರಗಪಳ್ಳಿ ಶಾಲೆ, ಕಾಲೇಜು ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಬುರಗಪಳ್ಳಿ ಹತ್ತಿರ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.

Advertisement

ವಿದ್ಯಾರ್ಥಿಗಳು ಇರಗಪಳ್ಳಿ ಗ್ರಾಮದಿಂದ ಗಣಾಪುರ ಸರ್ಕಾರಿ ಪ್ರೌಢ ಶಾಲೆಗೆ ಟಂಟಂ ವಾಹನದಲ್ಲಿ ಬರುವ ಸಂದರ್ಭದಲ್ಲಿ ಕೆಸರಿನಲ್ಲಿ ಆಯತಪ್ಪಿ ಬಿದ್ದಿದ್ದರಿಂದ ವಿದ್ಯಾರ್ಥಿಗಳ ಬಟ್ಟೆ ಮತ್ತು ಪಠ್ಯಪುಸ್ತಕಗಳು ಕೆಸರುಮಯವಾಗಿದ್ದವು. ಇದರಿಂದ ಅಸಮಾಧಾನಗೊಂಡ ವಿದ್ಯಾರ್ಥಿನಿಯರು ಶಾಲೆಗೆ ಹೋಗದೇ ಮನೆಗೆ ತೆರಳಿದ್ದರು. ಇದನ್ನು ಗಮನಿಸಿದ ಪಾಲಕರು ಮಕ್ಕಳೊಂದಿಗೆ ಆಗಮಿಸಿ ಬುರಗಪಳ್ಳಿ ಗ್ರಾಮದ ರಸ್ತೆ ತಡೆ ನಡೆಸಿದರು.

ಇರಗಪಳ್ಳಿ ಗ್ರಾಮದ ಹತ್ತಿರ ಹರಿಯುವ ಮುಲ್ಲಾಮಾರಿ ನದಿಗೆ ಕಳೆದ ಎರಡು ವರ್ಷದ ಹಿಂದೆ ಬ್ರಿಡ್ಜ್ ಕಮ್‌ ಬ್ಯಾರೇಜ್‌ ನಿರ್ಮಿಸಲಾಗಿದೆ. ಆದರೆ ಸೇತುವೆಗೆ ಕೂಡು ರಸ್ತೆ ನಿರ್ಮಿಸಿಲ್ಲ. ಇದರಿಂದಾಗಿ ರಸ್ತೆ ಕೆಸರುಮಯವಾಗಿದೆ. ರಸ್ತೆಯಲ್ಲಿ ಭಾರಿ ತೆಗ್ಗುಗಳು ಬಿದ್ದಿವೆ. ಶಾಲೆಯಿಂದ ಮನೆಗೆ ಬರುವ ಸಂದರ್ಭದಲ್ಲಿ ಅಟೋಗಳು ಅನೇಕ ಸಲ ಪಲ್ಟಿಯಾಗಿವೆ ಎಂದು ಕರ್ಚಖೇಡ ಗ್ರಾಪಂ ಉಪಾಧ್ಯಕ್ಷ ಶ್ರೀಕಾಂತ ಅಸಮಾಧಾನ ವ್ಯಕ್ತಪಡಿಸಿದರು.

ಗ್ರಾಮಸ್ಥರಾದ ನಾಗಪ್ಪ ಪೂಜಾರಿ, ಹಣಮಂತ ಹೊಸಮನಿ, ಇಬ್ರಾಹಿಂ ಪಟೇಲ್‌, ದಳಪತಿ, ಸುಭಾನರೆಡ್ಡಿ, ಕೃಷ್ಣಾರೆಡ್ಡಿ, ಶಿವರಾಜ, ಕೈಲಾಶ ಅಶೋಕ ಇನ್ನಿತರರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next