Advertisement

ಔಷಧಿ ವನ ಪುನರುಜ್ಜೀವನಗೊಳಿಸಲು ಆಗ್ರಹ

10:50 AM May 22, 2019 | Suhan S |

ತುಮಕೂರು: ತಾಲೂಕಿನ ನಾಮದ ಚಿಲುಮೆ ಯಲ್ಲಿರುವ ಅರಣ್ಯ ಇಲಾಖೆಯ ಸಿದ್ಧ ಸಂಜೀವಿನಿ ಔಷಧಿಸಸ್ಯ ವನ ಸಂಪೂರ್ಣವಾಗಿ ಪಾಳು ಬಿದ್ದಿದೆ. ಅದ‌ನ್ನು ಪುನರುಜ್ಜೀವನಗೊಳಿಸಿ ಮೊದಲಿನಂತೆ ಆಕರ್ಷಣೀಯ ಕೇಂದ್ರವನ್ನಾಗಿ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಕೋರಿ ರಾಜ್ಯಪಾಲರು, ಸಿಎಂ, ಡಿಸಿಎಂ, ಅರಣ್ಯ ಸಚಿವರಿಗೆ ಆಗ್ರಹಪೂರ್ವಕ ಮನವಿ ಯನ್ನು ತುಮಕೂರಿನ ಸಾರ್ವಜನಿಕ ಹೋರಾ ಟಗಾರ ಆರ್‌.ವಿಶ್ವನಾಥನ್‌ ಸಲ್ಲಿಸಿ ದ್ದಾರೆ. ತಾಲೂಕಿನ ಅರೆಗುಜ್ಜನಹಳ್ಳಿ ಗ್ರಾಪಂ ವ್ಯಾಪ್ತಿ ಯಲ್ಲಿರುವ ನಾಮದ ಚಿಲುಮೆಯು ದೇವ ರಾಯನದುರ್ಗ ಅರಣ್ಯ ಪ್ರದೇಶದ ನಡುವೆ ಇರುವ ಸುಂದರ ತಾಣವಾಗಿದೆ. ನಿಸರ್ಗ ಧಾಮವಷ್ಟೇ ಅಲ್ಲದೆ, ಪೌರಾಣಿಕ ವಾಗಿಯೂ ಪ್ರಸಿದ್ಧಿ ಪಡೆದಿದೆ. ಇಲ್ಲಿರುವ ಅರಣ್ಯ ಇಲಾ ಖೆಗೆ ಸೇರಿದ ಸಿದ್ಧಸಂಜೀವಿನಿ ಔಷಧಿ ಸಸ್ಯ ವನ ಸೂಕ್ತ ನಿರ್ವಹಣೆ, ಮೇಲ್ವಿ ಚಾರಣೆ ಯಿಲ್ಲದೇ ಪಾಳುಬಿದ್ದಿರುವುದು ಶೋಚನೀಯ ಸಂಗತಿ ಎಂದು ಮನವಿಯಲ್ಲಿ ವಿಷಾದಿಸಿದ್ದಾರೆ.

Advertisement

ವನದಲ್ಲಿದೆ ವೈವಿಧ್ಯಮಯ ಅಸಂಖ್ಯಾತ ಸಸ್ಯ:ಸುಮಾರು 15 ವರ್ಷಗಳಿಗೂ ಹಿಂದೆ ಆಗಿನ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ತೋರಿದ ಆಸಕ್ತಿ ಹಾಗೂ ಅಪಾರ ಪರಿಶ್ರಮ ದಿಂದ ನಾಮದ ಚಿಲುಮೆಯಲ್ಲಿ ಸಿದ್ಧ ಸಂಜೀವಿನಿ ಔಷಧಿಸಸ್ಯ ವನ ಹೊಸದಾಗಿ ಸೃಷ್ಟಿ ಯಾಯಿತು. ತುಮಕೂರು ಭಾಗದಲ್ಲಿ ಪ್ರಪ್ರಥಮ ಬಾರಿಗೆ ಇಂತಹದೊಂದು ವನ ರೂಪುಗೊಂಡು ನಾಮದ ಚಿಲುಮೆಯ ಆಕರ್ಷಣೆಯನ್ನು ದ್ವಿಗುಣಗೊಳಿಸಿತು. ಅಪ ರೂಪದ ಹಾಗೂ ವೈವಿಧ್ಯಮಯವಾದ ಅಸಂಖ್ಯಾತ ಔಷಧಿ ಸಸ್ಯಗಳಿಂದ ಕೂಡಿದ್ದ ಈ ವನವು ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಆಕರ್ಷಿಸತೊಡಗಿತು. ಸುಮಾರು 15 ಎಕರೆ ಯಷ್ಟು ವಿಶಾಲವಾದ ಪ್ರದೇಶದಲ್ಲಿ ಔಷಧಿ ಸಸ್ಯಗಳ ನರ್ಸರಿ, ಪಿರಮಿಡ್‌ ಧ್ಯಾನ ಮಂದಿರ, ನವಗ್ರಹ ವನ, ಶಿವಪಂಚಾಯತನ ವನ, ಅಷ್ಟದಿಕ್ಪಾಲಕರ ವನ, ವರಮಹಾಲಕ್ಷ್ಮೀ ವ್ರತ ವನ, ಸತ್ಯನಾರಾಯಣ ವ್ರತ ವನ, ಸಂಕಷ್ಟ ಚತುರ್ಥಿ ವನ, ರಾಶಿ ನಕ್ಷತ್ರ ವನ, ಅಶೋಕ ವನ, ಅಗ್ರೌಷಧ ವನ, ಮಕ್ಕಳ ಉದ್ಯಾನವನ, ಸ್ವಾಸ್ಥ್ಯ ವನ, ಪಾರಂಪರಿಕ ವೈದ್ಯ ಚಿಕಿತ್ಸಾಲಯ, ಗಿಡಮೂಲಿಕಾ ವನ, ಉದ್ಯಾನವನ ಹೀಗೆ ಸುವ್ಯವಸ್ಥಿತವಾಗಿ ವಿನ್ಯಾಸಗೊಳಿಸಿ ಈ ಸಿದ್ಧಸಂಜೀವಿನಿ ಔಷಧಿಸಸ್ಯ ವನವನ್ನು ರೂಪಿಸ ಲಾಗಿತ್ತು ಎಂದು ತಿಳಿಸಿದ್ದಾರೆ.

ಜ್ಞಾನಾರ್ಜನೆಯ ಕೇಂದ್ರವಾಗಿತ್ತು: ಅರಣ್ಯ ಇಲಾಖೆಯ ಸಿಬ್ಬಂದಿ ವರ್ಗದವರಿಗೆ ಔಷಧಿ ಸಸ್ಯಗಳ ಬಗ್ಗೆ ವಿವಿಧೆಡೆ ಸೂಕ್ತ ತರಬೇತಿಯನ್ನು ನೀಡಿ, ಇಲ್ಲಿಗೆ ನಿಯೋಜಿಸಲಾಗಿತ್ತು. ನಾಡಿನ ವಿವಿಧೆಡೆಗಳಿಂದ ಅಪರೂಪದ ಔಷಧಿ ಸಸ್ಯ ಗಳನ್ನು ತರಿಸಿ ಇಲ್ಲಿ ಬೆಳೆಸಲಾಯಿತು. ಕೊಳವೆ ಬಾವಿ ಮೂಲಕ ನೀರಿನ ವ್ಯವಸ್ಥೆ ಮಾಡ ಲಾಗಿತ್ತು. ಕಳೆ ಕೀಳಲು ಹಾಗೂ ಗಿಡಗಳ ವಿನ್ಯಾಸಕ್ಕೆ ಯಂತ್ರೋಪಕರಣಗಳ ವ್ಯವಸ್ಥೆ ಮಾಡಲಾಗಿತ್ತು. ಜೊತೆಗೆ ಇಲ್ಲೊಂದು ಪಿರಮಿಡ್‌ ಧ್ಯಾನ ಮಂದಿರವನ್ನೂ ನಿರ್ಮಿಸಿ ಈ ವನದ ಆಕರ್ಷಣೆಯನ್ನು ಹೆಚ್ಚಿಸಲಾಗಿತ್ತು. ಆರಂಭದ ದಿನಗಳಲ್ಲಿ ಈ ಔಷಧಿ ಸಸ್ಯವನ ಉತ್ತಮ ಸ್ಥಿತಿಯಲ್ಲಿದ್ದು, ಆಸಕ್ತರಿಗೆ ಹಾಗೂ ವಿಶೇಷವಾಗಿ ಸಸ್ಯಶಾಸ್ತ್ರ ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆಯ ಕೇಂದ್ರವೇ ಆಗಿಹೋಗಿತ್ತು. ಆದರೆ, ಇಂದು ಇಡೀ ವನವು ಸಂಪೂರ್ಣ ಅವನತಿ ಹೊಂದಿದೆ ಎಂದು ವಿವರಿಸಿದ್ದಾರೆ.

ಹೊಸ ಔಷಧಿ ಸಸ್ಯ ಬೆಳೆಸಿ: ಈ ವನವು ನಿರ್ಲಕ್ಷ್ಯಕ್ಕೊಳಗಾಗಿ, ಕ್ರಮೇಣ ಕಳೆಗುಂದುತ್ತಾ ಇಂದು ಅಕ್ಷರಶಃ ಕೇವಲ ನಾಮ ಫ‌ಲಕದಲ್ಲಷ್ಟೇ ಔಷಧಿ ಸಸ್ಯವನ ಎಂದು ಉಳಿದುಕೊಳ್ಳು ವಂತಹ ಹೀನಾಯ ಸ್ಥಿತಿಯನ್ನು ತಲುಪಿ ಬಿಟ್ಟಿದೆ. ತುಮಕೂರಿನ ಹೆಮ್ಮೆಯ ಆಸ್ತಿ ಯಾಗಬಹುದಾಗಿದ್ದ ಈ ಸ್ಥಳ ಇಂದು ಅವನತಿ ಹೊಂದಿದೆ. ಆದ್ದರಿಂದ ಈ ಔಷಧಿ ಸಸ್ಯವನ ವನ್ನು ಪುನರುಜ್ಜೀವನಗೊಳಿಸಿ ಮೊದಲಿನಂತೆ ಆಕರ್ಷಣೀಯ ಕೇಂದ್ರವಾಗಿಸಲು ನಾಶವಾಗಿ ರುವ ಔಷಧಿ ಸಸ್ಯಗಳ ಸ್ಥಳದಲ್ಲಿ ಮತ್ತೂಮ್ಮೆ ಹೊಸದಾಗಿ ಔಷಧಿ ಸಸ್ಯಗಳನ್ನು ಬೆಳೆಸಬೇಕು. ಔಷಧಿ ಸಸ್ಯಗಳ ಬಗ್ಗೆ ಅರಿವುಳ್ಳ ಸಿಬ್ಬಂದಿಯನ್ನು ಇಲ್ಲಿ ನೇಮಿಸಬೇಕು ಅಥವಾ ಇಲ್ಲಿರುವ ಸಿಬ್ಬಂದಿಗೆ ಆ ಬಗ್ಗೆ ತರಬೇತಿ ಕೊಡಿಸಬೇಕು. ಔಷಧಿ ಸಸ್ಯವನ ಸಿದ್ಧಗೊಳ್ಳುವಾಗ ಇಲ್ಲಿದ್ದ ಸಿಬ್ಬಂದಿಯನ್ನು ಕರೆಸಿ ಅವರ ಸಲಹೆ-ಸಹಕಾರ ಅನುಭವದ ಜ್ಞಾನ ಪಡೆದುಕೊಳ್ಳಬೇಕು. ಔಷಧಿ ಸಸ್ಯವನದ ನಿರ್ವಹಣೆಗಾಗಿ ಅಗತ್ಯ ವಿರುವಷ್ಟು ನುರಿತ ಸಿಬ್ಬಂದಿಯನ್ನು ನಿಯೋಜಿಸಬೇಕು ಎಂದು ಆಗ್ರಹಿಸಿದ್ದಾರೆ.

ವೈಜ್ಞಾನಿಕವಾಗಿ ನೀರು ಪೂರೈಸಿ: ಕೊಳವೆ ಬಾವಿಗಳನ್ನು ಸಮರ್ಪಕವಾಗಿ ಬಳಸಿಕೊಳ್ಳ ಬೇಕು. ಅಗತ್ಯವಿದ್ದರೆ ಹೆಚ್ಚುವರಿಯಾಗಿ ಕೊಳವೆಬಾವಿ ಕೊರೆಸಿ, ಆಮೂಲಕ ಇಡೀ ಔಷಧಿ ವನಕ್ಕೆ ನೀರು ಪೂರೈಸುವ ವ್ಯವಸ್ಥೆ ವೈಜ್ಞಾನಿಕವಾಗಿ ಆಗಬೇಕು. ಮಳೆ ನೀರಿನ ಸಂಗ್ರಹಕ್ಕೆ ವ್ಯವಸ್ಥೆ ಮಾಡಬೇಕು. ಕಳೆ ಕೀಳುವ ಹಾಗೂ ಗಿಡಗಳ ವಿನ್ಯಾಸ ನಿರ್ವಹಣೆಯ ಯಂತ್ರೋಪಕರಣಗಳನ್ನು ಒದಗಿಸಬೇಕು ಹಾಗೂ ಅದರ ಬಳಕೆಗೆ ಅಗತ್ಯವಿರುವ ಸೌಲಭ್ಯ ಒದಗಿಸಬೇಕು. ಔಷಧಿ ಸಸ್ಯಗಳ ತಜ್ಞರ ಮತ್ತು ಜಿಲ್ಲೆಯ ಪಾರಂಪರಿಕ ವೈದ್ಯರ ಜ್ಞಾನವನ್ನು ಈ ವನದ ಅಭಿವೃದ್ಧಿಗೆ ಬಳಸಿ ಕೊಳ್ಳಬೇಕು. ವನದ ಸುತ್ತಲೂ ಹಾಕಿರುವ ಬೇಲಿ, ಒಳಭಾಗದಲ್ಲಿ ಹಾಕಿರುವ ನಾಮಫ‌ಲಕ ಗಳು ಇತ್ಯಾದಿಗಳ ನಿರ್ವಹಣೆಗೆ ಶಾಶ್ವತ ವ್ಯವಸ್ಥೆ ಮಾಡಬೇಕು. ಇಲ್ಲಿರುವ ಪಿರಮಿಡ್‌ ಧ್ಯಾನ ಮಂದಿರವನ್ನು ಸುವ್ಯವಸ್ಥೆಗೊಳಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next