Advertisement

ಬೆಂಬಲ ಬೆಲೆಯಲ್ಲಿ ಅರಿಶಿಣ ಖರೀದಿಗೆ ಆಗ್ರಹ

04:14 PM Feb 05, 2023 | Team Udayavani |

ಗುಂಡ್ಲುಪೇಟೆ: ಪಟ್ಟಣದ ಡಿ.ದೇವರಾಜ ಅರಸು ಕ್ರೀಡಾಂಗಣದಲ್ಲಿ ರಾಜ್ಯ ಅರಿಶಿಣ ಬೆಳೆಗಾರರ ಒಕ್ಕೂಟದ ಸಭೆ ಸಭೆ ಶನಿವಾರ ನಡೆಯಿತು. ಅರಿಶಿಣ ಮತ್ತು ಸಾಂಬಾರ್‌ ಈರುಳ್ಳಿ ಕೈಪಿಡಿಯನ್ನು ರೈತರಿಗೆ ಹಂಚುವ ಮೂಲಕ ಪ್ರಗತಿಪರ ಕೃಷಿಕರಾದ ಚೌಡಹಳ್ಳಿ ರಾಜೇಂದ್ರ ಮತ್ತು ಸದಾಶಿವಮೂರ್ತಿ ಉದ್ಘಾಟಿಸಿದರು.

Advertisement

ಬೆಂಬಲ ಬೆಲೆಯಲ್ಲಿ ಅರಿಶಿಣ ಖರೀದಿ ಸೇರಿ ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರಧಾನಿ ಯವರಿಗೆ ಪತ್ರ ಚಳವಳಿ, ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವರು ಮತ್ತು ರಾಜ್ಯ ಕೃಷಿ ಸಚಿವರ ಬಳಿಗೆ ನಿಯೋಗ ತೆರಳುವುದು ಸೇರಿ ಹಲವು ನಿರ್ಣಯಗಳನ್ನು ಶನಿವಾರ ರಾಜ್ಯ ಅರಿಶಿಣ ಬೆಳೆಗಾರರ ಒಕ್ಕೂಟದ ಸಭೆಯಲ್ಲಿ ತೆಗೆದುಕೊಳ್ಳಲಾಯಿತು. ದಶಕಗಳಿಂದ ರಾಜ್ಯದ ಗಡಿ ಗುಂಡ್ಲುಪೇಟೆ ತಾಲೂಕಿನಲ್ಲಿ ಅರಿಶಿಣ ಬೆಳೆಯುತ್ತಿದ್ದೇವೆ. ಆದರೆ ಖರೀದಿ ಬೆಲೆ ವರ್ಷದಿಂದ ವರ್ಷಕ್ಕೆ ಕುಸಿಯುತ್ತಾ ಬಂದಿದೆ. ಪ್ರಸಕ್ತ ಸಾಲಿನಲ್ಲಿ ಬೆಲೆ ಇನ್ನೂ ಪಾತಳಕ್ಕೆ ಹೋಗಿದೆ. ಒಂದು ಎಕರೆ ಪ್ರದೇಶದಲ್ಲಿ ಅರಿಶಿಣ ಬೆಳೆಯಲು ಅಂದಾಜು ಲಕ್ಷದ ನಲವತ್ತೈದು ಸಾವಿರ ಖರ್ಚಾಗುತ್ತಿದೆ. ಈಗಿನ ಮಾರುಕಟ್ಟೆ ಬೆಲೆಯಲ್ಲಿ ಅರಿಶಿಣ ಮಾರಾಟದರೆ ಖರ್ಚಿನ ಅರ್ಧ ಹಣವೂ ಸಿಗುವುದಿಲ್ಲ. ಇದರಿಂದ ಬೆಳೆದ ಅರಿಶಿಣವನ್ನು ಮಾರಾಟ ಮಾಡಲಾಗದೇ, ಸಂಗ್ರಹಿಸಿಟ್ಟು ಕೊಳ್ಳಲಾಗದೇ ಅತಂತ್ರವಾಗಿದ್ದೇವೆ. ಆದ್ದರಿಂದ ಅರಿಶಿಣಕ್ಕೆ ಮಾರುಕಟ್ಟೆ ಬೆಲೆ ಅಸ್ತಿರವಾಗಿರುವುದರಿಂದ ಸರ್ಕಾರ ಮಧ್ಯ ಪ್ರವೇಶಿಸಿ ಅರಿಶಿಣವನ್ನು ಎಂಐಎಸ್‌-ಪಿಎಸ್‌ಎಸ್‌ ಯೋಜನೆಡಿ ಯಲ್ಲಿ ಬೆಂಬಲ ಬೆಲೆಯಲ್ಲಿ ಕೊಳ್ಳಬೇಕು. ಅರಿಶಿಣ ಬೆಳೆಗಾರರಾದ ನಮ್ಮನ್ನು ಸಂಕ?‌rದಿಂದ ಪಾರು ಮಾಡಬೇಕೆಂದು ಒತ್ತಾಯಿಸುವುದು. ಖರೀದಿಗೆ ಮುಂದಾಗದಿದ್ದರೆ ಬೆಂಗಳೂರಿನಲ್ಲಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವುದು, ಅರಿಶಿಣವನ್ನು ತೋಟಗಾರಿಕೆ ಬದಲು ಸಾಂಬಾರ ಬೆಳೆ ಎಂದು ಪರಿಗಣಿಸಬೇಕು ಎಂಬುದು ಸೇರಿ ಹಲವು ವಿಷಯಗಳು ಚರ್ಚೆಗೆ ಬಂದವು.

ಈ ಸಂದರ್ಭದಲ್ಲಿ ಸರ್ಕಾರಕ್ಕೆ ಸಲ್ಲಿಸಲು ಮನವಿ ಸಿದ್ದಪಡಿಸುವುದು, ಬೆಳಗಾರರ ಸಮಸ್ಯೆಗಳನ್ನು ಹೊತ್ತು ಮೆರವಣಿಗೆ ಮೂಲಕ ತರೆಳಿ ಜಿಲ್ಲಾಧಿಕಾರಿ ಗಳಿಗೆ ಮನವಿ ಸಲ್ಲಿಸುವುದು. ರಾಜ್ಯ ಕೃಷಿ ಸಚಿವರ ಬಳಿಗೆ ನಿಯೋಗ ತೆರಳುವುದು. ಪ್ರಧಾನ ಮಂತ್ರಿಗಳ ಗಮನ ಸೆಳೆಯಲು ಪತ್ರ ಚಳುವಳಿ ಮಾಡುವುದು. ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವರಾದ ಶೋಭಾಕರಂದ್ಲಾಜೆ ರ ಬಳಿಗೆ ನಿಯೋಗ ತೆರಳುವುದು ಸೇರಿದಂತೆ ಇನ್ನಿತರ ಚರ್ಚೆಗಳಾದವು.

ರಾಜ್ಯ ಅರಿಶಿಣ ಬೆಳಗಾರರ ಒಕ್ಕೂಟದ ಪದಾಧಿಕಾರಿಗಳಾದ ನಾಗಾರ್ಜುನಕುಮಾರ್‌, ಚಿದಾನಂದ ವೀರನಪುರ, ಕೊಳ್ಳೇಗಾಲ ಶಶಿಕುಮಾರ್‌, ಶಶಿಕುಮಾರ್‌ ದೊಡ್ಡಪ್ಪೂರು, ಜಿ.ಜಿ.ಮಲ್ಲಿಕಾರ್ಜುನ, ಹುತ್ತೂರುಸತೀಶ, ತೆರಕಣಾಂಬಿ ಚಂದ್ರು, ಚೌಡಳ್ಳಿ ಸದಾಶಿವಮೂರ್ತಿ, ವೀರನಪುರ ನಾಗರಾಜು, ಬೆಳವಾಡಿ ಪ್ರದೀಪ್‌, ರೈತ ಸಂಘದ ಸಂಪತ್‌ ಕುಂದುಕೆರೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next