Advertisement

ಹುನಗುಂದದಲ್ಲಿ ಬಡವರ ಫ್ರಿಡ್ಜ್ ಗೆ ಭಾರೀ ಬೇಡಿಕೆ

03:34 PM Apr 02, 2021 | Team Udayavani |

ಹುನಗುಂದ: ದಿನದಿಂದ ದಿನಕ್ಕೆ ತಾಪಮಾನ ಏರಿಕೆಯಾಗುತ್ತಿದ್ದು, ಜನರುಬಿಸಿಲಿನ ಬೇಗೆಯಿಂದ ತತ್ತರಿಸಿದ್ದಾರೆ.ಬಾಯಾರಿಕೆ ತಣಿಸಿಕೊಳ್ಳಲು ಪರದಾಡುತ್ತಿದ್ದು, ಸದ್ಯ ಬಡವರ ಫ್ರಿಡ್ಜ್ ಮಡಿಕೆಗೆ ಭಾರಿ ಬೇಡಿಕೆ ಬಂದಿದೆ. ಕುಂಬಾರರು ತಯಾರಿಸಿದ ಮಣ್ಣಿನ ಮಡಿಕೆಗೆ ತಾಲೂಕಿನಲ್ಲಿ ಬೇಡಿಕೆಯಿದ್ದು,ಹೆಚ್ಚಿನ ಸಂಖ್ಯೆಯಲ್ಲಿ ಮಡಿಕೆ ಖರೀದಿಸುತ್ತಿದ್ದಾರೆ.

Advertisement

ಹೌದು. ಈ ಹಿಂದೆ ಮಡಿಕೆಯಿಲ್ಲದೇ ಮಾನವನ ಜೀವನವೇ ಇಲ್ಲಎನ್ನುವ ಪರಿಸ್ಥಿತಿ ಇತ್ತು. ಆದರೆ,ಆಧುನಿಕ ಭರಾಟೆಯಿಂದ ಸ್ಟೀಲ್‌,ಅಲ್ಯೂಮಿನಿಯಂ, ಪ್ಲಾಸ್ಟಿಕ್‌ ಅಬ್ಬರಕ್ಕೆಸಿಲುಕಿ ಮಣ್ಣಿನ ಮಡಿಕೆಗಳುಮಾಯವಾಗಿದ್ದವು. ಬೇಸಿಗೆ ಸಮಯ ಬಂದರೇ ಸಾಕು ಬಿಸಿಲಿನ ತಾಪದಿಂದ ಬಾಯರಿಕೆ ತಣಿಸಿಕೊಳ್ಳಲು ಶ್ರೀಮಂತರುಆಧುನಿಕ ಫ್ರಿಡ್ಜ್ ಖರೀದಿಸುತ್ತಿದ್ದರು. ಬಡಜನರು ಮಡಿಕೆಯಿಂದ ಬಾಯಾರಿಕೆ ತಣಿಸಿಕೊಳ್ಳುತ್ತಿದ್ದಾರೆ. ಮಡಿಕೆಗಳು ತಂಪುನೀರು ಒದಗಿಸುವುದರಿಂದ ಇವುಗಳನ್ನು ಬಡವರ ಫ್ರಿಡ್ಜ್ ಎಂದೇ ಕರೆಯುವುದು ವಾಡಿಕೆ.

ಬಡವರ ಫ್ರಿಡ್ಜ್  ಗೆ ಭಾರಿ ಬೇಡಿಕೆ: ವರ್ಷದ ಏಳೆಂಟು ತಿಂಗಳು ಮಡಿಕೆಗಳನ್ನು ಮಣ್ಣಿನಿಂದ ಮಾಡಲಾಗುತ್ತಿದೆ. ಬೇಡಿಕೆಯಿಲ್ಲದಸಂದರ್ಭದಲ್ಲಿ ಮಡಿಕೆ ತಯಾರಿಸಿಮನೆಯಲ್ಲಿಯೇ ಸಂಗ್ರಹಿಸಿ ಡುತ್ತಾರೆ.ಬೇಸಿಗೆ ಆರಂಭವಾಗುತ್ತಿದ್ದಂತೆಶ್ರೀಮಂತರು ಕೂಡಾ ಮಡಿಕೆ ಖರೀದಿಗೆ ಮುಗಿ ಬೀಳುತ್ತಿದ್ದಾರೆ. ಕುಂಬಾರಕುಟುಂಬಗಳು ಸದ್ಯ ವಿಭಿನ್ನ ಮಾದರಿಯಮಡಿಕೆಗಳನ್ನು ಮಾರುಕಟ್ಟೆಯಲ್ಲಿ ಮರಾಟ ಮಾಡುತ್ತಿದ್ದಾರೆ. ಬೇಸಿಗೆ ತಾಪಕ್ಕೆ ತಂಪನ್ನುಧಾರೆ ಎರೆಯುವ ಮಡಿಕೆಗಳಿಗೀಗ ಭಾರಿಬೆಲೆಯಿದೆ. ದೊಡ್ಡ ಮಡಿಕೆ 350 ರಿಂದ 450 ರೂ., ಸಣ್ಣ ಮಡಿಕೆ 150ರಿಂದ 250 ರೂ.ವರೆಗೆ ಮಾರಾಟವಾಗುತ್ತಿವೆ.

ಆಧುನಿಕ ರೆಫ್ರಿಜೆಟರ್‌ಗೇನು ಕಡಿಮೆ ಇಲ್ಲದ ಬಡವರ ಫ್ರಿಡ್ಜ್: ಆಧುನಿಕ ರೆಫ್ರಿಜೆಟರ್‌ಗಳು ವಿದ್ಯುತ್‌ ಇದ್ದರೇ ಮಾತ್ರ ತಂಪು ಪಾನೀಯ ನೀಡುತ್ತವೆ. ಆದರೆ, ಮಡಿಕೆ ವಿದ್ಯುತ್‌ ಇಲ್ಲದೇದಿನದ 24 ಗಂಟೆ ತಂಪಾದ ನೀರನ್ನು ಒದಗಿಸುವ ಆಧುನಿಕ  ಫ್ರಿಡ್ಜ್ ಗಳಿಗೇನುಕಡಿಮೆಯಿಲ್ಲದಂತೆ ಮನುಷ್ಯನ ದೇಹಕ್ಕೆತಣ್ಣನೆಯ ನೀರು ಕೊಡುತ್ತಿವೆ.

ಮಡಿಕೆಯ ನೀರು ಆರೋಗ್ಯಕ್ಕೆ ಯೋಗ್ಯ: ಆಧುನಿಕ ಫ್ರಿಡ್ಜ್ ನಲ್ಲಿಯ ನೀರು ಸ್ವಲ್ಪ ಆರೋಗ್ಯಕ್ಕೆ ಮನುಷ್ಯನವ್ಯತಿರಿಕ್ತ ಪರಿಣಾಮ ಬೀರುವ ಸ್ಥಿತಿಯಿದೆ.ಆದರೆ, ಮಣ್ಣಿನ ಮಡಿಕೆಯಲ್ಲಿನ ನೀರು ಮಾನವನ ಆರೋಗ್ಯಕ್ಕೆ ಉತ್ತಮ.ಇದರಿಂದ ಬೇಸಿಗೆಯಲ್ಲಿ ಶ್ರೀಮಂತರಿಂದಹಿಡಿದು ಬಡವರು ಮಡಿಕೆಯ ಖರೀದಿಗೆ ಮುಂದಾಗುತ್ತಿತ್ತಾರೆ. ವಿವಿಧ ಮಾದರಿ ಮಡಿಕೆಗಳು

Advertisement

ಮಾರುಕಟ್ಟೆಗೆ ಲಗ್ಗೆ: ಬೇಸಿಗೆಯ ಸಮಯದಲ್ಲಿ ಮಣ್ಣಿನ ಮಡಿಕೆಗಳಿಗೆಬೇಡಿಕೆ ಹೆಚ್ಚಾಗುವ ವಿಶ್ವಾಸದಿಂದ ಕುಂಬಾರರು ಜನರನ್ನುಮನಸೂರೆಗೊಳ್ಳುವ ರೀತಿಯಲ್ಲಿ ಮಣ್ಣಿನವಿವಿಧ ಮಾದರಿಯ ಮಡಿಕೆಗಳನ್ನು ತಯಾರಿಸಿದ್ದಾರೆ. ಇದರಿಂದ ಕುಂಬಾರನಮಡಿಕೆ ತಯಾರಿಕೆ ನೈಪುಣ್ಯತೆ ಅಡಗಿದೆ.

ಬೇಸಿಗೆ ಆಧಾರಸ್ಥಂಭ: ಈ ಹಿಂದಿನ ಜೀವನ ಪದ್ದತಿಯಲ್ಲಿ ಮನುಷ್ಯ ನಿತ್ಯ ಉಪಯೋಗಿಸುವ ವಸ್ತುಗಳಿಂದ ಹಿಡಿದು ಆಹಾರ ಬೇಯಿಸಿ ತಿನ್ನುವ ಪಾತ್ರೆಗಳೆಲ್ಲ ಮಣ್ಣಿನ ವಸ್ತುಗಳಾಗಿದ್ದವು. ತಾಂತ್ರಿಕತೆ ಹೆಚ್ಚಾಗಿ ಗುಡಿ ಕೈಗಾರಿಕೆ ಮುಚ್ಚಿ ಹೊಸಹೊಸ ವಸ್ತುಗಳು ಮಾರುಕಟ್ಟೆಗೆ ಬಂದುಮೂಲವಾಗಿ ಉಪಯೋಗಿಸುತ್ತಿದ್ದ ಮಡಿಕೆಗಳು ಮಾಯವಾಗಿ ಕುಂಬಾರಬದುಕಿನ ಮೇಲೆ ಕರಿನೆರಳು ಆವರಿಸಿದೆ. ಗುಡಿ ಕೈಗಾರಿಕೆ ನೆಲಕಚ್ಚಿದ ಮೇಲೆಕುಂಬಾರ ವೃತ್ತಿ ನಂಬಿಕೊಂಡಅನೇಕ ಕುಟುಂಬಗಳ ಜೀವನನಿರ್ವಹಣೆ ಕಷ್ಟವಾಗಿದೆ. ಮೂಲಕುಲಕಸಬನ್ನೇ ಬಿಟ್ಟು ಬೇರೆ ಬೇರೆ ಉದ್ಯೋಗ ಹುಡುಕಿಕೊಂಡಿದ್ದರೇಇನ್ನು ಕೆಲ ಕುಂಬಾರಿಕೆ ಕುಟುಂಬಗಳುಮೂಲಕಸಬು ಮುಂದುವರಿಸಿಕೊಂಡು ಹೋಗುತ್ತಿವೆ.

ದೀಪಾವಳಿ, ಹಬ್ಬ ಹರಿದಿನ, ಜಾತ್ರೆ, ಮದುವೆ ಸೇರಿದಂತೆ‌ ಶುಭ ಸಂದರ್ಭದಲ್ಲಿ ಮಾತ್ರ ಮಣ್ಣಿನ ಮಡಿಕೆಗಳು ಮಾರಾಟವಾಗುತ್ತವೆ. ಅಲ್ಲದೇ ಬೇಸಿಗೆಯ ಸಂದರ್ಭದಲ್ಲಿ ಹೆಚ್ಚು ಮಡಿಕೆಗಳು ಮಾರಾಟವಾಗುವುದು.ಇದರಿಂದ ವರ್ಷದ ಏಳೆಂಟು ತಿಂಗಳ ವ್ಯಾಪಾರವಿಲ್ಲದೇ ಜೀವನ ನಿರ್ವಹಣೆ ಕಷ್ಟವಾಗುತ್ತಿದೆ. ವೃತ್ತಿ ಬಿಡಬೇಕೆಂದರೇ ಬೇರೆ ಉದ್ಯೋಗ ಸರಿ ಹೋಗುತ್ತಿಲ್ಲ.  -ಮಲ್ಲು ಕುಂಬಾರ, ಹುನಗುಂದ

 

­-ಮಲ್ಲಿಕಾರ್ಜುನ ಬಂಡರಗಲ್ಲ

Advertisement

Udayavani is now on Telegram. Click here to join our channel and stay updated with the latest news.

Next