Advertisement

ನಾಲತವಾಡ ಅಭಿವೃದ್ಧಿ ಗೆ ಆಗ್ರಹ

05:39 PM Nov 05, 2019 | Suhan S |

ಮುದ್ದೇಬಿಹಾಳ: ತಾಲೂಕಿನ ನಾಲತವಾಡ ಭಾಗದ ಸಮಗ್ರ ಅಭಿವೃದ್ಧಿ ಸೇರಿದಂತೆ ಹಲವು ವಿಷಯಗಳನ್ನೊಳಗೊಂಡಿರುವ 27 ಪ್ರಮುಖ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ನಾಲತವಾಡದ ವಿವಿಧ ಸಂಘಟನೆ ಸದಸ್ಯರು ನಾಲತವಾಡದಿಂದ ಮುದ್ದೇಬಿಹಾಳವರೆಗೆಪಾದಯಾತ್ರೆ ನಡೆಸಿ ತಾಲೂಕಾಡಳಿತ ಮೂಲಕ ಸಿಎಂಗೆ ಮನವಿ ಸಲ್ಲಿಸಿದವು.

Advertisement

ನಾಲತವಾಡ ಪಟ್ಟಣದಲ್ಲಿ ಸರಕಾರಿ ಕಾಲೇಜು ಮತ್ತು ಬಿಜೂರಲ್ಲಿ ಪ್ರೌಢಶಾಲೆ ಪ್ರಾರಂಭ, ಚಿಮ್ಮಲಗಿ ಏತ ನೀರಾವರಿ ಯೋಜನೆಯಲ್ಲಿ ಜಮೀನು ಕಳೆದುಕೊಂಡ ರೈತರಿಗೆ ಪರಿಹಾರ ನೀಡಬೇಕು, ಅಮರೇಶ್ವರದೇವಸ್ಥಾನ ಹತ್ತಿರ ಸ್ಥಗಿತಗೊಂಡ ಕಾಲುವೆ ಪ್ರಾರಂಭಿಸಬೇಕು, ಅಕ್ರಮ ಮದ್ಯ ಮಾರಾಟ ತಡೆಯಬೇಕು, ನಾಲತವಾಡ ನಾಡಕಚೇರಿಯಲ್ಲಿ ಪಡಿತರ ಚೀಟಿ ಮತ್ತು ಭೂಮಿ ಕೇಂದ್ರ ಪ್ರಾರಂಭಿಸಬೇಕು. ಎಲ್ಲ ಸರಕಾರಿ ಕಚೇರಿಯಲ್ಲಿ ಸಿಬ್ಬಂದಿ ಹಾಜರಾತಿಗೆ ಬಯೋಮೆಟ್ರಿಕ್‌ ಅಳವಡಿಸಬೇಕು. ಸರಕಾರಿ ನೌಕರರು ಕಡ್ಡಾಯವಾಗಿ ಗುರುತಿನ ಚೀಟಿ ಪಡೆಯಬೇಕು. ಮುದ್ದೇಬಿಹಾಳ ಅಬಕಾರಿ ಇಲಾಖೆಯ ಧೋರಣೆ ತಡೆಯಬೇಕು. ವೀರೇಶ ನಗರ ಮತ್ತು ಬಿಜೂjರಲ್ಲಿ ಸೂಕ್ತ ಪಶು ವೈದ್ಯಕೀಯ ಸೌಲಭ್ಯ ಸಿಗಬೇಕು, ನಾಲತವಾಡ ಹೆಸ್ಕಾಂ ಕಚೇರಿಯಲ್ಲಿ ಹೊರ ಗುತ್ತಿಗೆದಾರರ ವೇತನದ ಗೊಲಮಾಲ್‌ ತನಿಖೆ ಮಾಡಬೇಕು. ದಲಿತ ಕುಟುಂಬಗಳಿಗೆ ಜಮೀನು ಒದಗಿಸಬೇಕು, ನಾಲತವಾಡದಲ್ಲಿ ಹೈಟೆಕ್‌ ಬಸ್‌ ನಿಲ್ದಾಣ ಪ್ರಾರಂಭಿಸಬೇಕು, ವೀರೇಶನಗರದಲ್ಲಿ ಎಂಎಸ್‌ಐಎಲ್‌ ಮಳಿಗೆಯನ್ನು ಸ್ಥಳಾಂತರಿಸಬೇಕು, ನಾಲತವಾಡ ಪಪಂ ವ್ಯಾಪ್ತಿಯ ಗುಂಟೆ ನಿವೇಶನಗಳು ಮತ್ತು ಎನ್‌ಎ ಆಗಿರುವ ನಿವೇಶನಗಳನ್ನು 9 ನಂಬರ್‌ ದಾಖಲೆ ಪುಸ್ತಕದಲ್ಲಿ ನಿಯಮಬಾಹೀರ ದಾಖಲು ಮಾಡಿದ್ದು ಸೂಕ್ತ ತನಿಖೆ ಮಾಡಬೇಕು. ನಾಲತವಾಡ ಪಪಂನಲ್ಲಿ ಹಲವಾರು ಯೋಜನೆಗಳಿಂದ ಮಂಜೂರಾದ ಕಾಮಗಾರಿಗಳು ಸ್ಥಗಿತಗೊಂಡಿದ್ದು ತನಿಖೆ ನಡೆಸಬೇಕು. ಪಟ್ಟಣದಲ್ಲಿ ಗ್ರಂಥಾಲಯ ಪ್ರಾರಂಭ ಮತ್ತು ಗ್ರಾಮೀಣ ಭಾಗದಲ್ಲಿ ಶುದ್ದ ನೀರಿನ ಘಟಕಗಳ ದುರಸ್ತಿ ಮಾಡಬೇಕು ಎನ್ನುವ ಬೇಡಿಕೆಗಳನ್ನು ಮನವಿಯಲ್ಲಿ ಪ್ರಸ್ತಾಪಿಸಲಾಗಿದೆ.

ಶಿವಾನಂದ ವಾಲಿ, ದಲಿತ ಸಂಘಟನೆಗಳ ಪ್ರಮುಖರಾದ ಪ್ರಕಾಶ ಸರೂರ, ಬಾಲಚಂದ್ರ ಹುಲ್ಲೂರ, ಅಲ್ತಾಫ್‌ ಕೊಣ್ಣೂರ, ತಂಗಡಗಿ ಗ್ರಾಪಂ ಅಧ್ಯಕ್ಷರೂ ಆಗಿರುವ ಕರವೇ ತಾಲೂಕಾಧ್ಯಕ್ಷ ಸಂಗಯ್ಯ ಸಾರಂಗಮಠ, ಮಲ್ಲು ತಳವಾರ, ಎ.ಎಸ್‌. ಉಮೇಶ, ಯಲ್ಲಪ್ಪ ಚಲವಾದಿ, ಕರವೇ ಮುಖಂಡ ಮಲ್ಲು ಗಂಗನಗೌಡ್ರ, ಮಹ್ಮದಗೌಸ್‌ ಸಿಕ್ಕಲಗಾರ, ಶೇಖರ್‌ ಮಾದರ, ಹುಲಗಪ್ಪ ಮಾದರ, ಮೌನೇಶ ಮಾದರ, ಮಾರುತಿ ಸಿದ್ದಾಪುರ ಸೇರಿದಂತೆ ಹಲವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next