Advertisement

ಮಾವಿನ ಹಣ್ಣಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್‌

12:09 PM May 19, 2018 | |

ನಾಲತವಾಡ: ಮುದ್ದೇಬಿಹಾಳ ತಾಲೂಕು ಸೇರಿದಂತೆ ಪಟ್ಟಣದಲ್ಲೂ ಸಹ ಹಣ್ಣುಗಳ ರಾಜ ಮಾವಿನ ಹಣ್ಣುಗಳ ಉತ್ಪಾದನೆಯಲ್ಲಿ ಭಾರಿ ಕುಸಿತ ಕಂಡು ಬಂದಿದ್ದು ಬೆಲೆ ಏರಿಕೆಗೆ ಕಾರಣವಾಗಿದೆ.

Advertisement

ಈ ಬಾರಿ ಹವಾಮಾನ ವೈಪರಿತ್ಯದ ಪರಿಣಾಮ ರಾಜ್ಯಾದ್ಯಂತ ಹಣ್ಣುಗಳ ರಾಜಾ ಎಂದೇ ಕರೆಯಲಾದ ಮಾವು ಇಳುವರಿ ಕುಸಿದಿದ್ದು ಪಟ್ಟಣ ಸೇರಿದಂತೆ ನಾಲತವಾಡ ವ್ಯಾಪ್ತಿಯ ಮಾವು ತೋಪಿನ ಮಾಲೀಕರನ್ನು ಸಂಕಷ್ಟಕ್ಕೆ ದೂಡಿದ್ದು ಹಣ್ಣು ಕೊರತೆಯಿಂದ ಮಾರುಕಟ್ಟೆ ಬಿಕೋ ಎನ್ನುತ್ತಿದೆ.

ನಾಲತವಾಡ ವ್ಯಾಪ್ತಿಯಲ್ಲಿ ಮಾವು ಬೆಳೆಗಾರರು ಕಳೆದ ವರ್ಷಕ್ಕಿಂತಲೂ ಈ ವರ್ಷದ ಬೇಸಿಗೆ ಬರದಲ್ಲಿ ಶೆ. 50ರಷ್ಟು ಹಾನಿ ಅನುಭವಿಸಿದ್ದಾರೆ. ಇಳುವರಿಯ ಮಧ್ಯ ಮಾವಿನ ಬೆಲೆಯೂ ಸಹ ಭಾರಿ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿದೆ. ಪಟ್ಟಣದ ಮಾರುಕಟ್ಟೆಯಲ್ಲಿ ಕಳೆದ ವರ್ಷ 40 ರೂ.ಗೆ ಮಾರಾಟವಾಗುತ್ತಿದ್ದ ನಾನಾ ಬಗೆಯ ಮಾವು ಈ ಭಾರಿ 80ರಿಂದ 90 ರೂ.ಗೆ ಏರಿಕೆಯಾಗಿದ್ದು ಮಾವು ಪ್ರೀಯರಿಗೆ ಬೆಲೆ ಏರಿಕೆ ಶಾಕ್‌ ತಗಲಿದ್ದರೆ, ಕೊಂಡು ತಂದು ಮಾರಾಟ
ಮಾಡುವವರಿಗೆ ಈ ಬೆಲೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ತತ್ತರಿಸಿದ ಮಾವಿನ ತೋಪುಗಳು: ಸತತ ಮೂರು ವರ್ಷಗಳ ಬರಗಾಲದಿಂದ ಜಮೀನುಗಳ ಬೊರ್‌ ವೆಲ್‌ಗ‌ಳಲ್ಲೂ ಸಹ ಅಂತರ್ಜಲ ಮಟ್ಟ ಕುಸಿತ ಕಂಡ ಪರಿಣಾಮ ಪ್ರಸಕ್ತ ಸಾಲಿನಲ್ಲೂ ಸಹ ಮಾವಿನ ತೋಪಿನ ಮರಗಳಿಗೆ ಸಮರ್ಪಕ ನೀರು ಹರಿಸಲು ಸಹ ನೀರಿನ ಬವಣೆ ಉಂಟಾದ ಪರಿಣಾಮ ಬೆಳೆಯುವ ಮಾವಿನ ಕಾಯಿಗಳು ತತ್ತರಿಸಿವೆ.

ಧರೆಗೆ ಉರುಳುತ್ತಿವೆ ಮಾವು: ಬೆಲೆ ಏರಿಕೆ ಹಾಗೂ ಇಳುವರಿ ಕುಸಿತದ ಪರಿಣಾಮ ಮಾವಿನ ತೋಪುಗುತ್ತಿಗೆ ಪಡೆದ ವ್ಯಾಪಾರಿಗಳಿಗೆ ಈಚೆಗೆ ಬೀಸುತ್ತಿರುವ ಬಿರುಗಾಳಿ ಹಾಗೂ ಅಕಾಲಿಕ ಮಳೆಗೆ ಮಾವು ಧರೆಗುರುಳಿತ್ತಿದ್ದು ವ್ಯಾಪಾರಿಗಳಿಗೆ ಬಿಗ್‌ ಶ್ಯಾಕ್‌ ಕೊಟ್ಟಿದ್ದು ಕಳೆದ ಎರಡು ಮೂರು ದಿನಗಳಿಂದ ಮಾವು ನೆಲಕ್ಕುರುಳುತ್ತಿದೆ. ಬಿರುಗಾಳಿಗೆ ಇದ್ದ ಅಲ್ಪ ಸ್ವಲ್ಪ ಮಾವು ನೆಲಕ್ಕುರುಳಿ ಹಾಳಾಗುತ್ತಿದ್ದು ಮತ್ತಷ್ಟು ಸಂಕಷ್ಟ ಅನುಭವಿಸುತ್ತಿದ್ದಾರೆ

Advertisement

ಈ ಬಾರಿ ಆಕಾಲಿಕ ಮಳೆ ಪರಿಣಾಮ ಮಾವು ಇಳುವರಿ ಹಾಗೂ ಉತ್ಪಾದನೆಯಲ್ಲಿ ಕುಸಿದ ಕಂಡು ಬಂದಿದೆ. ಮರದಲ್ಲೂ ಸಹ ಮಾವಿನ ಬೆಳವಣಿಗೆ ಶೇ. 20ರಷ್ಟು ಕುಸಿದಿದೆ. ಜೊತೆಗೆ ವಿಪರಿಸ ಬಿಸಿಲಿಗೆ ಬೆಳೆಯುವ ಮಾವಿನ
ಕಾಯಿಯಲ್ಲಿ ಜಿಡ್ಡು ರೋಗ ಕಂಡು ಬಂದಿದೆ. ಕಳೆದ ವರ್ಷಕ್ಕಿಂಲೂ ಈ ವರ್ಷ ಮಾವು ಕಡಿಮೆ ಬೆಳೆಯಲಾಗಿದೆ. ದರದಲ್ಲೂ ಸಹ ಶೇ. 50ರಷ್ಟು ಹೆಚ್ಚಾಗಿದೆ. 
 ವೀರೇಶ ದಲಾಲಿ, ಮಾವು ಬೆಳೆಗಾರ 

Advertisement

Udayavani is now on Telegram. Click here to join our channel and stay updated with the latest news.

Next