Advertisement

ಹಾಸ್ಟೆಲ್ಗಳಿಗೆ ಮೂಲ ಸೌಕರ್ಯಕ್ಕೆ ಆಗ್ರಹ

02:56 PM Jul 26, 2019 | Team Udayavani |

ಕೋಲಾರ: ಪರಿಶಿಷ್ಟ ಜಾತಿ, ಪಂಗಡಗಳ ಹಾಸ್ಟೆಲ್ಗಳಿಗೆ ಮೂಲ ಸೌಕರ್ಯ ಒದಗಿಸಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಶಾಖೆಯಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಸಾಂಕೇತಿಕ ಧರಣಿ ನಡೆಸಿ ಜಿಲ್ಲಾಧಿಕಾರಿ ಜೆ.ಮಂಜುನಾಥ್‌ರ ಮೂಲಕ ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಮನವಿ ಸಲ್ಲಿಸಲಾಯಿತು.

Advertisement

ರಾಜ್ಯಾದ್ಯಂತ ಪರಿಶಿಷ್ಟ ಜಾತಿ, ಪಂಗಡಗಳ ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಸ್ಟೆಲ್ಗಳಿಗೆ ಮೂಲ ಸೌಕರ್ಯ ನೀಡಿ ಗುಣಮಟ್ಟವನ್ನು ಕಾಯ್ದಿರಿಸಿಕೊಳ್ಳಬೇಕು, ಈಗ ನೀಡುತ್ತಿರುವ ವಿದ್ಯಾರ್ಥಿ ವೇತನವನ್ನು ಹೆಚ್ಚಿಸಿ, ಇಂದಿನ ಬೆಲೆ ಏರಿಕೆಗೆ ಅನುಗುಣವಾಗಿ ವೇತನ ನೀಡಬೇಕು, ರಾಜ್ಯಾದ್ಯಂತ 30-40 ವರ್ಷಗಳ ಹಿಂದಿನ ಹಳೇ ಹಾಸ್ಟೆಲ್ ಕಟ್ಟಡಗಳನ್ನು ನವೀಕರಿಸುವ ಬದಲು ಹೊಸದಾಗಿ ಮಾದರಿ ಕಟ್ಟಡಗಳನ್ನು ನಿರ್ಮಿಸಬೇಕು ಎಂದು ಮನವಿ ಮಾಡಿದರು.

ಅರ್ಹರನ್ನು ನೇಮಿಸಿ: ಅವೈಜ್ಞಾನಿಕವಾಗಿ ಅಡುಗೆ ಕೆಲಸ ಮಾಡುತ್ತಿರುವವರಿಗೆ ನಿಯಮ ಬಾಹಿರವಾಗಿ ಜೂನಿಯರ್‌ ವಾರ್ಡ್‌ನ್‌ ಹುದ್ದೆ ನೀಡಿ 2-3 ಹಾಸ್ಟೆಲ್ಗಳ ನಿರ್ವಹಣೆಯ ಜವಾಬ್ದಾರಿಯನ್ನು ದಲಿತ ವಿದ್ಯಾರ್ಥಿಗಳ ವಿದ್ಯಾರ್ಜನೆ ಕುಂಠಿತವಾಗುತ್ತಿರುವುದರಿಂದ, ಜೂನಿಯರ್‌ ವಾರ್ಡ್‌ನ್‌ಗಳ ಹುದ್ದೆಯನ್ನು ರದ್ದು ಮಾಡಿ ನಿಯಮಾನುಸಾರ ಅರ್ಹ ಪದವೀಧರರನ್ನು ನೇಮಕ ಮಾಡಬೇಕೆಂದು ಒತ್ತಾಯಿಸಿದ್ದಾರೆ. ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಸೂಲಿ ಕುಂಟೆ ರಮೇಶ್‌, ಜಿಲ್ಲಾ ಸಂಚಾಲಕ ನಾಗನಾಳ ಮುನಿಯಪ್ಪ, ಸಂಘಟನಾ ಸಂಚಾಲಕರಾದ ವೆಂಕಟರವಣಪ್ಪ, ಎಚ್.ಮುನಿಚೌಡಪ್ಪ, ಮದನಹಳ್ಳಿ ವೆಂಕಟೇಶ್‌, ಗೋವಿಂದರಾಜು, ಮುದುವತ್ತಿ ಕೇಶವ, ಪುರಹಳ್ಳಿ ಜಿ.ಯಲ್ಲಪ್ಪ, ದೇವರಾಜ್‌, ರೆಡ್ಡಪ್ಪ, ವೆಂಕಟೇಶ್‌, ನರಸಿಂಹ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next