Advertisement

ಕಳಸಾ ಅನುಷ್ಠಾನಕ್ಕೆ ಆಗ್ರಹ

11:59 AM Dec 23, 2019 | Suhan S |

ಬೈಲಹೊಂಗಲ: ಇಲ್ಲಿಯ ಕಳಸಾ-ಬಂಡೂರಿ ಹಾಗೂ ಮಹಾದಾಯಿ ನದಿ ಜೋಡಣಾ ಹೋರಾಟ ಸಮಿತಿ ವತಿಯಿಂದ ರವಿವಾರ ಪ್ರವಾಸಿ ಮಂದಿರದಲ್ಲಿ ತುರ್ತು ಸಭೆ ನಡೆಸಿ ಹೋರಾಟದ ರೂಪುರೇಷೆಗೆ ಸಿದ್ಧತೆ ನಡೆಸಲು ತೀರ್ಮಾನಿಸಿತು.

Advertisement

ಹೋರಾಟ ಸಮಿತಿ ಅಧ್ಯಕ್ಷ ಚಿತ್ರನಟ ಶಿವರಂಜನ ಬೋಳನ್ನವರ ನೇತೃತ್ವದಲ್ಲಿ ಸಭೆ ನಡೆಸಿದ ಹೋರಾಟಗಾರರು ಡಿ. 26ರಂದು ಬೆಳಗ್ಗೆ 10 ಗಂಟೆಗೆ ಸಂಗೊಳ್ಳಿ ರಾಯಣ್ಣ ಉದ್ಯಾನವನದಿಂದ ಬೃಹತ್‌ ಪ್ರತಿಭಟನಾ ರ್ಯಾಲಿ ನಡೆಸಲು ತೀರ್ಮಾನಿಸಿದರು. ಈ ಯೋಜನೆಗೆ ಎಲ್ಲ ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಮಾಡುತ್ತ ಮೂರು ದಶಕಗಳ ಕಾಲ ಕಾಲಹರಣ ಮಾಡಿವೆ. ಕಳೆದ ಹಲವು ವರ್ಷಗಳಿಂದ ಹೋರಾಟಗಾರರ ಹೋರಾಟದ ಫಲವಾಗಿ ನ್ಯಾಯಾಧಿಕರಣದಲ್ಲಿ ತೀರ್ಪು ಬಂದು ಒಂದು ವರ್ಷ ಕಳೆದರೂ ಅಧಿಸೂಚನೆ ಹೊರಡಿಸದೇ ಒಂದೆಡೆ ಕಾಮಗಾರಿ ಬಗ್ಗೆ ಅಸಡ್ಡೆ ತೋರಿದರೆ, ಸರ್ಕಾರವೇ ತನ್ನ ಅಧಿಕಾರಿಗಳಿಂದ ವರದಿ ತರಿಸಿ ಅರಣ್ಯ ಮತ್ತು ಪರಿಸರ ಇಲಾಖೆಯಿಂದ ಅನುಮತಿ ನೀಡಿ ಗೋವಾ ರಾಜ್ಯದ ಕಪಟ ನಾಟಕಕ್ಕೆ ಮರುಳಾಗಿ ರಾಜ್ಯದ ಜನರ ಹಿತ ಬಲಿ ಕೊಡುವುದು ನ್ಯಾಯ ಸಮ್ಮತವಲ್ಲ ಎಂದು ಸಮಿತಿ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.

ಡಿ.26ರಂದು ನಡೆಯುವ ಪ್ರತಿಭಟನಾ ರ್ಯಾಲಿಯಲ್ಲಿ ಕಳಸಾ-ಬಂಡೂರಿ ಮತ್ತು ಮಹಾದಾಯಿ ಹೋರಾಟ ಸಮಿತಿ ಎಲ್ಲ ಪದಾಧಿಕಾರಿಗಳು, ಕಾರ್ಯಕರ್ತರು, ವಿವಿಧ ಸಂಘಟನೆಗಳು, ರೈತರು ಭಾಗವಹಿಸಬೇಕೆಂದು ಹೋರಾಟ ಸಮಿತಿ ಕರೆ ನೀಡಿತು. ಅಂದು ಪ್ರತಿಭಟನಾ ರ್ಯಾಲಿ ಮೂಲಕ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿ ಮುಂದಿನ ಹೋರಾಟ ತೀವ್ರಗೊಳಿಸುವುದನ್ನು ಸಮಿತಿ ತೀರ್ಮಾನಿಸಿತು. ಸಭೆಯಲ್ಲಿ ಹೋರಾಟ ಸಮಿತಿ ಮುಖಂಡರುಗಳಾದ ಮಹಾಂತೇಶ ತುರಮರಿ, ಈಶ್ವರ ಹೋಟಿ, ಮಡಿವಾಳಪ್ಪ ಹೋಟಿ, ಸಿ.ಕೆ. ಮಕ್ಕೆದ ಎಫ್‌.ಎಸ್‌. ಸಿದ್ದನಗೌಡರ, ಶಂಕರ ಮಾಡಲಗಿ, ಬಿ.ಎಂ. ಚಿಕ್ಕನಗೌಡರ, ಮುರಗೇಶ ಗುಂಡೂರ, ನ್ಯಾಯವಾದಿ ಮಹಾಂತೇಶ ಮತ್ತಿಕೊಪ್ಪ, ಮಲ್ಲಿಕಾರ್ಜುನ ಹುಂಬಿ, ಸುರೇಶ ವಾಲಿ, ರುದ್ರಪ್ಪ ಹೊಸಮನಿ, ಶಂಕರಯ್ಯ ಕುಲಕರ್ಣಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next