Advertisement

“ಕರಕುಶಲ ಉತ್ಪನ್ನಗಳಿಗೆ ಬೇಡಿಕೆ ಇಳಿಕೆ!’

01:37 AM Apr 02, 2019 | sudhir |

ಉಡುಪಿ: ದೇಶದಲ್ಲಿ ಕರಕುಶಲ ಕರ್ಮಿಗಳು ಉತ್ಪಾದಿಸುವ ಉತ್ಪನ್ನಗಳಿಗೆ ಬೇಡಿಕೆ ಏರುತ್ತಿದೆ. ಆದರೆ ಇದೇ ವೇಳೆ ಕರಕುಶಲಕರ್ಮಿಗಳ ಸಂಖ್ಯೆ ಇಳಿಮುಖವಾಗುತ್ತಿದೆ ಎಂದು ಭಾರತೀಯ ಕರಕುಶಲ ಮಂಡಳಿ (ಕ್ರಾಫ್ಟ್ ಕೌನ್ಸಿಲ್‌ ಆಫ್ ಇಂಡಿಯ- ಸಿಸಿಐ) ಕಳವಳ ವ್ಯಕ್ತಪಡಿಸಿದೆ.

Advertisement

ಮಣಿಪಾಲದ ಹೆರಿಟೇಜ್‌ ವಿಲೇಜ್‌ನಲ್ಲಿ ಸೋಮವಾರ ಆರಂಭಗೊಂಡ 2 ದಿನಗಳ ಸಿಸಿಐ ರಾಷ್ಟ್ರೀಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿಸಿಐ ಅಧ್ಯಕ್ಷೆ ಗೀತಾರಾಮ್‌, 2 ವರ್ಷಗಳ ಹಿಂದೆ ಕರಕುಶಲ ಕ್ಷೇತ್ರದ ಸಮಸ್ಯೆಗಳ ಥೀಮ್‌ನಡಿ ಕಾರ್ಯನಿರ್ವಹಿಸಿದ್ದರೆ, ಈಗ ಕರಕುಶಲ ಉತ್ಪನ್ನಗಳ ಮಾರುಕಟ್ಟೆ ಬಗೆಗಿನ ಥೀಮ್‌ನಡಿ ಕಾರ್ಯನಿರ್ವಹಿಸುತ್ತಿದ್ದೇವೆ ಎಂದರು.

ಹೆರಿಟೇಜ್‌ ವಿಲೇಜ್‌ನಲ್ಲಿ ಆರಂಭಗೊಂಡ ಕಮಲಾ ಗ್ಯಾಲರಿ ಸೇರಿ ದೇಶದ ವಿವಿಧೆಡೆ ಸಿಸಿಐ ಸಂಯೋಜಿತ 11 ಘಟಕಗಳಿವೆ. ಈಗ ನಡೆಯುತ್ತಿರುವುದು 30ನೇ ರಾಷ್ಟ್ರೀಯ ಅಧಿವೇಶನ ಎಂದರು.

2022ರ ವೇಳೆಗೆ ದೇಶದಲ್ಲಿ ಸುಮಾರು 1.8 ಕೋ. ಕರಕುಶಲ ಕರ್ಮಿಗಳಿರಬಹುದೆಂದು ಅಂದಾಜಿಸ ಲಾಗಿದೆ. ಆದರೆ ಅನಧಿಕೃತ ಮೂಲಗಳ ಪ್ರಕಾರ ಕರಕುಶಲ ಉತ್ಪಾದಕರು, ಮಾರುಕಟ್ಟೆ ಮಾಡು ವವರು ಸೇರಿ ಸುಮಾರು 20 ಕೋಟಿ ಜನರು ಇದ್ದಾ ರೆಂದು ಸಿಸಿಐ ಕಾರ್ಯ ನಿರ್ವಾ ಹಕ ಸದಸ್ಯೆ ಸುಧಾ ಶಿವರಾಮ್‌ ಹೇಳಿದರು.

302 ಬಿ. ರೂ. ಮೊತ್ತದ ಕರಕುಶಲ ಉತ್ಪನ್ನವಾಗುತ್ತಿದ್ದು ಇದರಲ್ಲಿ 168.58 ಬಿ. ರೂ. ರಫ್ತಿನ ಪಾಲು ಇದೆ. ಇದರರ್ಥ ಬೇಡಿಕೆ ಹೆಚ್ಚಾಗುತ್ತಿದೆ; ಅಸಂಘಟಿತ ವಲಯ, ಕಚ್ಚಾ ಸಾಮ ಗ್ರಿಗಳ ಕಡಿಮೆ ಗುಣಮಟ್ಟ, ಸೀಮಿತ ಮಾರುಕಟ್ಟೆ ಸಾಮರ್ಥ್ಯ, ಹಣಕಾಸು ಒತ್ತಡ, ಮಾರುಕಟ್ಟೆ ಮತ್ತು ಗ್ರಾಹಕರ ನಡುವೆ ಸಂಪರ್ಕದ ಕೊರತೆ ಇತ್ಯಾದಿ ಸವಾಲುಗಳು ಇವೆ ಎಂದರು.

Advertisement

ವಿಶ್ವ ಸಂಸ್ಥೆ ವರದಿ ಪ್ರಕಾರ 30 ವರ್ಷಗಳ ಬಳಿಕ ಭಾರತೀಯ ಕರ ಕುಶಲಕರ್ಮಿಗಳ ಸಂಖ್ಯೆ ಶೇ. 30ರಷ್ಟು ಇಳಿಮುಖವಾಗಲಿದೆ. ಇದರರ್ಥ ಕರಕುಶಲ ಕಲಾವಿದರ ಮೇಲೆ ಮರು ಹೂಡಿಕೆ ಮಾಡಬೇಕಾದ, ಇತಿಹಾಸ, ಸಂಸ್ಕೃತಿ, ಜೀವನೋಪಯೋಗಿ ಮೂಲದ ರಕ್ಷಣೆ ಮಾಡಬೇಕಾಗಿದೆ ಎಂದು ಸುಧಾ ಅಭಿಪ್ರಾಯಪಟ್ಟರು.

ಸಿಸಿಐ ಕರ್ನಾಟಕದ ಅಧ್ಯಕ್ಷೆ ಭಾರತೀ ಗೋವಿಂದರಾಜ್‌ ಸ್ವಾಗತಿಸಿದರು. ರಂಗಕರ್ಮಿ ಪ್ರಸನ್ನ ಹೆಗ್ಗೊàಡು, ಹಸ್ತಶಿಲ್ಪ ಟ್ರಸ್ಟ್‌ ಟ್ರಸ್ಟಿ ಟಿ. ರಾಜೇಶ್‌ ಪೈ, ಕಾರ್ಯದರ್ಶಿ ಶ್ರೀನಿವಾಸ ಶೆಣೈ ಉಪಸ್ಥಿತರಿದ್ದರು.

ವಿಜಯನಾಥ ಶೆಣೈ ಸ್ಮಾರಕ ಸಭಾಂಗಣ ಉದ್ಘಾಟನೆ
ಮಣಿಪಾಲ ಹೆರಿಟೇಜ್‌ ವಿಲೇಜ್‌ ರೂವಾರಿ, ಸಾಂಸ್ಕೃತಿಕ ಕ್ಷೇತ್ರದ ಸಂಘಟಕರಾಗಿದ್ದ ವಿಜಯನಾಥ ಶೆಣೈ ಸ್ಮಾರಕ ಸಭಾಂಗಣವನ್ನು ಸೋಮವಾರ ಹೆರಿಟೇಜ್‌ ವಿಲೇಜ್‌ ಆವರಣದಲ್ಲಿ ಚೆನ್ನೈಯ ಭಾರತೀಯ ಕರಕುಶಲ ಮಂಡಳಿ (ಸಿಸಿಐ) ಅಧ್ಯಕ್ಷೆ ಗೀತಾ ರಾಮ್‌ ಉದ್ಘಾಟಿಸಿದರು.

ಕಮಲಾ ಗ್ಯಾಲರಿ ಉದ್ಘಾಟನೆ
ಕರ್ನಾಟಕದ ಕರಾವಳಿಯಲ್ಲಿ ಜನಿಸಿ ರಾಷ್ಟ್ರ ಮಟ್ಟದಲ್ಲಿ ಪ್ರಸಿದ್ಧರಾದ ಕಮಲಾದೇವಿ ಚಟ್ಟೋಪಾಧ್ಯಾಯ ಅವರ ಹೆಸರಿನ ತಾತ್ಕಾಲಿಕ ಗ್ಯಾಲರಿ ಹೆರಿಟೇಜ್‌ ವಿಲೇಜ್‌ನಲ್ಲಿ ಆರಂಭಗೊಂಡಿತು. ರಂಗಕರ್ಮಿ ಪ್ರಸನ್ನ ಹೆಗ್ಗೊàಡು ಉದ್ಘಾಟಿಸಿದರು. ಕಮಲಾದೇವಿಯವರು ಮೊದಲು ಮದುವೆಯಾದ ಮಂಗಳೂರಿನ ಶಿವಬಾಗ್‌ನಲ್ಲಿದ್ದ ಮನೆಯನ್ನು ಹೆರಿಟೇಜ್‌ ವಿಲೇಜ್‌ನಲ್ಲಿ ಮರುಸ್ಥಾಪಿಸಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next