Advertisement

ಫುಟ್‌ಪಾತ್‌ ತೆರವಿಗೆ ಆಗ್ರಹ

12:08 PM Nov 20, 2019 | Suhan S |

ಹುಬ್ಬಳ್ಳಿ: ಕಿಮ್ಸ್‌ ಮುಖ್ಯ ದ್ವಾರ ಮುಂಭಾಗದ ಮಹಾತ್ಮಾ ಗಾಂಧೀಜಿ ಪುತ್ಥಳಿ ಸಮೀಪದ ಬಸ್‌ ನಿಲ್ದಾಣ ಪಕ್ಕ ಬಿಆರ್‌ಟಿಎಸ್‌ ಸ್ವಾಧೀನದ ಜಾಗದಲ್ಲಿರುವ ಕಟ್ಟಡ ಹಾಗೂ ಪಾದಚಾರಿ ಮಾರ್ಗ ತೆರವುಗೊಳಿಸುವಂತೆ ಶ್ರೀ ಗಜಾನನ ಮಹಾ ಮಂಡಳ ಪಾಲಿಕೆ ಆಯುಕ್ತರನ್ನು ಆಗ್ರಹಿಸಿದೆ.

Advertisement

ಬಸ್‌ ನಿಲ್ದಾಣ ಪಕ್ಕದ ಜಾಗವನ್ನು ಎಚ್‌ಡಿಬಿಆರ್‌ಟಿಎಸ್‌ ಸ್ವಾಧೀನಪಡಿಸಿಕೊಂಡು ಒಂದು ವರ್ಷವಾದರು ಇದುವರೆಗೆ ಆ ಜಾಗದಲ್ಲಿನ ಕಟ್ಟಡ ಹಾಗೂ ಪಾದಚಾರಿ ಮಾರ್ಗ ತೆರವುಗೊಳಿಸಿಲ್ಲ. ಇದರಿಂದ ಸಾರ್ವಜನಿಕರು ಹಾಗೂ ವಾಹನ ಸಂಚಾರಕ್ಕೆ ತೀವ್ರ ಅಡಚಣೆಯಾಗುತ್ತಿದೆ.

ಸಂಬಂಧಿಸಿದವರು ವಾರದೊಳಗೆ ಈ ಜಾಗೆಯಲ್ಲಿರುವ ಕಟ್ಟಡ ಹಾಗೂ ಪಾದಚಾರಿ ಮಾರ್ಗ ತೆರವುಗೊಳಿಸಬೇಕು. ಇಲ್ಲವಾದರೆ ಮಂಡಳದ ಅಧ್ಯಕ್ಷ ಡಿ. ಗೋವಿಂದರಾವ್‌ ನೇತೃತ್ವದಲ್ಲಿ ಸ್ಥಳದಲ್ಲಿ ಬಿಆರ್‌ಟಿಎಸ್‌ ಬಸ್‌ಗಳನ್ನು ತಡೆದು ಪ್ರತಿಭಟಿಸಲಾಗುವುದು ಎಂದು ಮಂಡಳದ ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next