ಹಳೆಯಂಗಡಿ: ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗಖಾತರಿ ಯೋಜನೆಯಲ್ಲಿ ಕೆಲವೊಂದು ಗ್ರಾಮ ಪಂಚಾಯತ್ ಮಟ್ಟದಲ್ಲಿಯೇ ನ್ಯೂನತೆ ಗಳನ್ನು ಸರಿಪಡಿಸಲು ಸಾಧ್ಯವಿದೆ. ಈ ಬಗ್ಗೆ ಯೋಜನೆಯ ಫಲಾನುಭವಿಗಳು ಮತ್ತು ಚುನಾಯಿತ ಜನಪ್ರತಿನಿ ಧಿಗಳು ಪರಸ್ಪರ ಚರ್ಚೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಹಳೆಯಂಗಡಿ ಗ್ರಾಮ ಪಂಚಾಯತ್‌ನಲ್ಲಿ ಜರ ಗಿದ ಸಾಮಾಜಿಕ ಲೆಕ್ಕ ಪರಿಶೋಧನ ಗ್ರಾಮ ಸಭೆಯಲ್ಲಿ ಗ್ರಾಮಸ್ಥರ ಸಹಿತ ಪಂಚಾಯತ್ ಸದಸ್ಯರು ಆಗ್ರಹಿಸಿದರು.
ಬಾಡಿಗೆ ಪಾವತಿಸಲು ಆಗ್ರಹ
ಗ್ರಾಮ ಪಂಚಾಯತ್‌ನ ಅಧ್ಯಕ್ಷೆ ಜಲಜಾ ಅಧ್ಯಕ್ಷತೆಯಲ್ಲಿ ಪಂಚಾ ಯತ್‌ನ ಸಭಾಂಗಣದಲ್ಲಿ ಜರ ಗಿದ ಗ್ರಾಮ ಸಭೆಯಲ್ಲಿ ಈ ಬಗ್ಗೆ ಗ್ರಾಮಸ್ಥರು ಗಮನ ಸೆಳೆದು, ಯೋಜನೆಯಲ್ಲಿ ಕಾಮಗಾರಿ ನಡೆಸುವಾಗ ಕೆಲವೊಂದು ಸಲಕರಣೆಗೆ ಇಂತಿಷ್ಟು ಎಂಬ ಬಾಡಿಗೆದರವನ್ನು ನಿಗದಿ ಪಡಿಸಲಾಗಿದೆ ಅದನ್ನು ಪಾವತಿಸಲು ಪಂ.ಗೆ ಸೂಚಿಸಬೇಕು ಎಂಬ ಅಭಿಪ್ರಾಯ ವ್ಯಕ್ತವಾಯಿತು. ಸಸಿಹಿತ್ಲಿನ ಕಾಮಗಾರಿ ಬಗ್ಗೆ ಪಿಡಿಒ ಮಾಹಿತಿ ನೀಡಿದರು.
ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಯಶೋಧರ ಅವರು ನೋಡಲ್ ಅಧಿಕಾರಿಯಾಗಿ ಸಭೆಯ ಕಾರ್ಯ ಕಲಾಪವನ್ನು ನಡೆಸಿಕೊಟ್ಟರು.
ಮಂಗಳೂರು ತಾಲೂಕು ಸಂಯೋಜಕ ರಾದ ಪವಿತ್ರಾ, ಗ್ರಾಮ ಸಂಪನ್ಮೂಲ ವ್ಯಕ್ತಿಗಳಾದ ಉಷಾರಾಣಿ, ರೇಖಾಮಣಿ, ಮಂಗಳಶ್ರೀ, ಜಿಲ್ಲಾ ಪಂಚಾಯತ್ ಸದಸ್ಯ ವಿನೋದ್‌ಕುಮಾರ್ ಬೊಳ್ಳೂರು, ತಾಲೂಕು ಪಂಚಾಯತ್ ಸದಸ್ಯ ಜೀವನ್ ಪ್ರಕಾಶ್ ಕಾಮೆರೊಟ್ಟು, ಹಳೆಯಂಗಡಿ ಗ್ರಾಮ ಪಂಚಾಯತ್‌ನ ಉಪಾಧ್ಯಕ್ಷೆ ಪದ್ಮಾವತಿ ಶೆಟ್ಟಿ, ಸದಸ್ಯರಾದ ಎಚ್.ವಸಂತ್ ಬೆರ್ನಾಡ್, ಅಬ್ದುಲ್ ಖಾದರ್, ಚಿತ್ರಾ ಸುರೇಶ್, ಅಬ್ದುಲ್ ಅಝೀಜ್, ವಿನೋದ್ ಕುಮಾರ್, ಶರ್ಮಿಳಾ ಎಸ್. ಕೋಟ್ಯಾನ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಪಿಡಿಒ ಅಬೂಬಕ್ಕರ್ ಸ್ವಾಗತಿಸಿ, ನಿರೂಪಿಸಿದರು. ಕಾರ್ಯದರ್ಶಿ ಕೇಶವ ದೇವಾಡಿಗ ವಂದಿಸಿದರು.