Advertisement
ಸೂಕ್ತ ಸಮಯದಲ್ಲಿ ರಸಗೊಬ್ಬರ ಪೂರೈಕೆಯಾಗದೆ ಸಾವಿರಾರು ಹೆಕ್ಟೇರ್‌ನಲ್ಲಿ ಕೃಷಿ ಭೂಮಿ ಮಾಡಿರುವ ರೈತರು ಅಳಲು ತೋಡಿಕೊಂಡಿದ್ದರು. ಕರಾವಳಿ ಭಾಗ ಸಹಿತ ರಾಜ್ಯದೆಲ್ಲೆಡೆ ಉತ್ತಮ ಮುಂಗಾರು ಮಳೆಯಾಗುತ್ತಿರುವ ಪರಿಣಾಮ ರಾಜ್ಯದ ಬಹುತೇಕ ಭಾಗದಲ್ಲಿ ಕೃಷಿ ಚಟುವಟಿಕೆ ಹುರುಪು ಪಡೆದುಕೊಂಡಿದ್ದು, ಈಗ ಡಿಎಪಿ ರಸಗೊಬ್ಬರ ಸಮರ್ಪಕವಾಗಿ ಪೂರೈಕೆಯಾಗುತ್ತಿರುವುದರಿಂದ ರೈತರು ಸಂತುಷ್ಟರಾಗಿದ್ದಾರೆ.
Related Articles
Advertisement
ಭತ್ತದ ನಾಟಿ ಸಂದರ್ಭ ಅಥವಾ ನಾಟಿಯಾದ 10, 15 ದಿನದೊಳಗೆ ಡಿಎಪಿ ರಸಗೊಬ್ಬರವನ್ನು ಕೃಷಿ ಭೂಮಿಗೆ ನಿಮಿತ್ತ ಪ್ರಮಾಣದಲ್ಲಿ ಸಿಂಪಡಿಸಲಾಗುತ್ತದೆ. ಆದರೆ ಈ ಬಾರಿ ಕೆಲವೆಡೆ ಈ ರಸಗೊಬ್ಬರದ ಕೊರತೆ ಉಂಟಾಗಿತ್ತು. ಕೃಷಿಗೆ ಸಮಯಕ್ಕೆ ಸರಿಯಾಗಿ ರಸಗೊಬ್ಬರ ಕೊಡದೇ ಹೋದರೆ ಅನ್ಯ ಕಾಯಿಲೆ ಸಮಸ್ಯೆ ಕಾಡುತ್ತದೆ ಎನ್ನುವುದು ರೈತರ ಅಳಲಾಗಿತ್ತು. ಕೃಷಿ ಇಲಾಖೆ ಸಕಾಲದಲ್ಲಿ ಸ್ಪಂದಿಸಿದ ಕಾರಣ ಸದ್ಯ ಸಮಸ್ಯೆ ಆಗದಂತೆ ನೋಡಿಕೊಳ್ಳಲಾಗುತ್ತಿದೆ.
ಜಿಲ್ಲೆಯಲ್ಲಿ ರಸಗೊಬ್ಬರದ ಕೊರತೆ ಇಲ್ಲ. ಡಿಎಪಿ ರಸಗೊಬ್ಬರಕ್ಕೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿತ್ತು. ಕೆಲವೇ ದಿನಗಳ ಹಿಂದೆ 100 ಕ್ವಿಂಟಲ್‌ಗಳನ್ನು ತರಿಸಲಾಗಿದೆ. ರೈತರಿಗೆ ರಸಗೊಬ್ಬರ ಸೂಕ್ತ ಸಮಯದಲ್ಲಿ ಪೂರೈಕೆ ಆಗುವಂತೆ ನೋಡಿಕೊಳ್ಳಲಾಗುತ್ತಿದೆ.-ಡಾ| ಕೆಂಪೇಗೌಡ, ಕೃಷಿ ಇಲಾಖೆ ಜಂಟಿ ನಿರ್ದೇಶಕರು