Advertisement

ಶಿವಮೊಗ್ಗ: ಲಸಿಕೆಗಾಗಿ ಬೆಳಗ್ಗೆ 5 ಗಂಟೆಯಿಂದ ಟೋಕನ್‌ ಪಡೆದು ಸರತಿ ಸಾಲಿನಲ್ಲಿ ನಿಂತ ಜನ!

01:58 PM May 22, 2021 | Team Udayavani |

ಶಿವಮೊಗ್ಗ: ಕೋವಿಡ್ ಪಾಸಿಟಿವ್‌ ಹಾಗೂ ಮರಣ ಪ್ರಮಾಣ ಏರಿಕೆಯಿಂದ ಲಸಿಕೆಗೆ ಭಾರೀ ಡಿಮಾಂಡ್‌ ವ್ಯಕ್ತವಾಗಿದೆ. ಆದರೆ ಲಸಿಕೆ ಸಂಬಂಧ ಸೂಕ್ತ ನಿರ್ವಹಣೆ ಇಲ್ಲದಿರುವುದು ಮತ್ತೊಮ್ಮೆ ಸಾಬೀತಾಗಿದೆ.

Advertisement

ಶನಿವಾರ ಕುವೆಂಪು ರಸ್ತೆಯ ಪಿಎಚ್‌ಸಿ ಸೆಂಟರ್‌ನಲ್ಲಿ ವ್ಯಾಕ್ಸಿನೇಷನ್‌ ಪಡೆಯಲು ಕಿ.ಮೀಗಟ್ಟಲೇ ಕ್ಯೂ ಕಂಡುಬಂತು. ಲಸಿಕ ಪಡೆಯಲು ಟೋಕನ್‌ ಅಗತ್ಯವಿರುವುದರಿಂದ ಬೆಳಗ್ಗೆ 5 ಗಂಟೆಗೆ ಜನ ಬಂದು ಕ್ಯೂನಲ್ಲಿ ನಿಂತಿದ್ದು ಕಂಡುಬಂತು.

ಶುಗರ್‌, ಬಿಪಿ ಪೀಡಿತರು ಕ್ಯೂನಲ್ಲಿ ಆಗುವುದಿಲ್ಲ. ಲಸಿಕೆ ನೀಡಲು ಸರಿಯಾದ  ವ್ಯವಸ್ಥೆ ಮಾಡಬೇಕು. 9 ಗಂಟೆಗೆ ಬಂದು ಟೋಕನ್‌ ನೀಡುವುದಾಗಿ ಹೇಳಿ ತಡ ಮಾಡುತ್ತಿದ್ದಾರೆ. ಟೋಕನ್‌ ಪಡೆದ  ಮೇಲೂ ಲಸಿಕೆಗಾಗಿ ಕಾಯಬೇಕು. ಲಸಿಕೆ ಲಭ್ಯತೆ  ಕಡಿಮೆ ಇದ್ದರೆ ಸರಿಯಾಗಿ ಮಾಹಿತಿ ಕೊಡಬೇಕು. ಅದಕ್ಕಾಗಿ ಬೆಳಗ್ಗೆಯಿಂದಲೇ ಕ್ಯೂನಿಲ್ಲಬೇಕೆ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next