Advertisement

ಕೋವಿಡ್‌ ಭ್ರಷ್ಟಾಚಾರ ತನಿಖೆಗೆ ಆಗ್ರಹ

04:24 PM Jul 16, 2022 | Team Udayavani |

ಕೋಲಾರ: ಶ್ರೀ ನರಸಿಂಹರಾಜ ಜಿಲ್ಲಾಸ್ಪತ್ರೆಯಲ್ಲಿ ಕೊರೊನಾ 1, 2ನೇ ಅಲೆಯ ವೇಳೆ ನೀಡಿದ ಅನುದಾನದಲ್ಲಿ ನಡೆದಿರುವ ಭ್ರಷ್ಟಾಚಾರ ತನಿಖೆ ಮಾಡಲು ವಿಶೇಷ ತಂಡ ರಚನೆ ಮಾಡಿಆಸ್ಪತ್ರೆಯಲ್ಲಿ ದಲ್ಲಾಳಿಗಳ ಹಾವಳಿಗೆ ಕಡಿವಾಣ ಹಾಕಬೇಕೆಂದು ರೈತ ಸಂಘದಿಂದ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ವಿಜಯ್‌ಕುಮಾರ್‌ಗೆ ಮನವಿ ನೀಡಿ ಆಗ್ರಹಿಸಲಾಯಿತು.

Advertisement

ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್‌ ಸೋಂಕಿತರಿಗೆ ಖಾಸಗಿ ಆಕ್ಸಿಜನ್‌, ಔಷಧಿ ಸಿಗದೆ ಕುಟುಂಬಸ್ಥರ ಕಣ್ಣ ಮುಂದೆಯೇ ಪ್ರಾಣ ಕಳೆದುಕೊಂಡು ಅವರನ್ನೇ ನಂಬಿದ್ದ ಕುಟುಂಬ ಬೀದಿಗೆ ಬೀಳುತ್ತಿದ್ದರೆ ಸಮರ್ಪಕವಾಗಿ ಸರ್ಕಾರದ ಅನುದಾನವನ್ನು ಅಕ್ರಮ ದಾಖಲೆಗಳನ್ನು ಕೋವಿಡ್‌ ಸೋಂಕಿತರ ಹೆಸರಿನಲ್ಲಿ 8 ಕೋಟಿಗೂ ಅಧಿಕ ಹಣ ದುರ್ಬಳಕೆ ಮಾಡಿಕೊಂಡಿರುವುದು ಮಾಹಿತಿ ಹಕ್ಕಿನಡಿಯಲ್ಲಿ ಸಾಭೀತಾಗಿದೆ.

ಹಿಂದೆ ಆಸ್ಪತ್ರೆಯ ವೈದ್ಯರು ಕೆಲವು ಸಿಬ್ಬಂದಿಗಳು ಕೋಟಿ ಕೋಟಿ ಹಣವನ್ನು ತಮ್ಮ ಖಾತೆಗಳಿಗೆ ಜಮಾ ಮಾಡಿಕೊಂಡು ಅದಕ್ಕೆ ಯಾವುದೇ ದಾಖಲೆಯಿಲ್ಲದೆ ಡ್ರಾ ಮಾಡಿಕೊಂಡಿರುವ ಮೂಲಕ ಸರ್ಕಾರ ನಿಯಮವನ್ನು ಉಲ್ಲಂಘನೆ ಮಾಡಿರುವುದುದಾಖಲೆಗಳಿವೆ ಎಂದು ರೈತಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ವಕ್ಕಲೇರಿ ಹನುಮಯ್ಯ ಅವ್ಯವಸ್ಥೆ ಹಾಗೂ ಆಸ್ಪತ್ರೆಯ ಅಕ್ರಮ ದಾಖಲೆಗಳ ಸಮೇತ ದೂರು ನೀಡಿದರು.

ಜಿಲ್ಲಾಧ್ಯಕ್ಷ ಐತಾಂಡಹಳ್ಳಿ ಮಂಜುನಾಥ್‌ ಮಾತನಾಡಿ, ಕೋವಿಡ್‌ ಸಂದರ್ಭದಲ್ಲಿ ಸರ್ಕಾರಿ ಆಸ್ಪತ್ರೆಗೆ 30 ಕೋಟಿಗೂ ಅಧಿಕ ಅನುದಾನ ಜಿಲ್ಲಾಧಿಕಾರಿಗಳ ಕಚೇರಿಯಿಂದ ಬಿಡುಗಡೆಯಾಗಿದ್ದರೂ ಖರ್ಚು ವೆಚ್ಚಗಳಿಗೆ ಲೆಕ್ಕವಿಲ್ಲ. ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲು ಮಾಡಲು ಒತ್ತಾಯಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾ ಶಸ್ತ್ರಚಿಕಿತ್ಸಕರು, ದಾಖಲೆಗಳ ಸಮೇತ ದೂರು ನೀಡಿರುವುದನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ತನಿಖೆ ಮಾಡಿ ಹಣ ದುರ್ಬಳಕೆ ಮಾಡಿಕೊಂಡಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದರು.

Advertisement

ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ತಾಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ್‌,ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ, ಮಂಗಸಂದ್ರ ತಿಮ್ಮಣ್ಣ, ವೆಂಕಟೇಶಪ್ಪ, ನಾರಾಯಣಗೌಡ, ಯಾರಂಗಟ್ಟ ಗಿರೀಶ್‌, ಮಾಲೂರುತಾಲೂಕು ಅಧ್ಯಕ್ಷ ಯಲ್ಲಣ್ಣ, ಮುಳಬಾಗಿಲು ತಾಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್‌, ತೆರ್ನಹಳ್ಳಿ ಆಂಜಿನಪ್ಪ ಇತರರಿದ್ದರು.

ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಿ :

ಸೋಂಕಿತರ ಹಾಜರಾತಿಯಿಂದ ಊಟ, ಔಷಧಿ, ಕೊರೊನಾ ವಾರಿಯರ್ಸ್‌ ನೇಮಕಾತಿ ಹಾಗೂ ರಕ್ತ ಪರೀಕ್ಷಾ ನಡೆಸಲು ಮೆಡಲ್‌ ಮತ್ತು ಔಷಧಿ ವಿತರಣೆ ಮಾಡಲು ತುಳಸಿ ಮೆಡಿಕಲ್‌ಗೆ ಅಕ್ರಮವಾಗಿ ಪರವಾನಗಿ ನೀಡಿ ನಕಲಿ ರಕ್ತ ಪರೀಕ್ಷಾ ವರದಿಗಳ ತಯಾರಿ ಜತೆಗೆ ಔಷಧಿ ವಿತರಣೆ ಮಾಡದೆ ಕೋಟಿಕೋಟಿ ಹಣವನ್ನು ಮೇಲ್ಕಂಡ ಸಮಸ್ಯೆಗೆ ನೀಡುವ ಮುಖಾಂತರ ರಾಜ್ಯ ಸರ್ಕಾರ 8 ಕೋಟಿ ಹಣವನ್ನು ದುರ್ಬಳಕೆ ಮಾಡಿಕೊಂಡಿರುವ ದಾಖಲೆಗಳ ಸಮೇತ ದೂರು ನೀಡಿ ತನಿಖೆ ಮಾಡಲು ವಿಶೇಷ ತಂಡ ರಚನೆ ಮಾಡಬೇಕು ಎಂದು ಜಿಲ್ಲಾ ಕಾರ್ಯಾಧ್ಯಕ್ಷ ವಕ್ಕಲೇರಿ ಹನುಮಯ್ಯ ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next