Advertisement

ನಿರಂತರ ವಿದ್ಯುತ್‌ ಸರಬರಾಜಿಗೆ ಆಗ್ರಹ

03:23 PM Jan 02, 2018 | Team Udayavani |

ವಡಗೇರಾ: ನಿರಂತರ ವಿದ್ಯುತ್‌ ಸರಬರಾಜು ಮಾಡಲು ಆಗ್ರಹಿಸಿ ಬೆನಕನಹಳ್ಳಿ, ಶಿವನೂರ, ಜೋಳದಡಗಿ ಗ್ರಾಮದ ರೈತರು ಕದರಾಪೂರ ಗ್ರಾಮದಲ್ಲಿರುವ ವಿದ್ಯುತ್‌ ಸಬ್‌ಸ್ಟೇಶನ್‌ 133 ಕೆ.ವಿ ಹತ್ತಿರ ಮುಷ್ಕರ ಆರಂಭಿಸಿದ್ದಾರೆ.

Advertisement

ರೈತ ಮುಖಂಡ ಉದಯ ಪಾಟೀಲ್‌ ಮಾತನಾಡಿ, ಬೇರೆ ಗ್ರಾಮಗಳಿಗೆ ನಿರಂತರವಾಗಿ 18 ಗಂಟೆ ವಿದ್ಯುತ್ತನ್ನು ಜೆಸ್ಕಾಂ ಅಧಿಕಾರಿಗಳು ಸರಬರಾಜು ಮಾಡುತ್ತಾರೆ. ಬೆನಕನಹಳ್ಳಿ, ಶಿವನೂರ, ಹಾಗೂ ಜೋಳದಡಗಿ ಗ್ರಾಮಗಳು ನಿರಂತರ ಜ್ಯೋತಿ ಯೋಜನೆ ಅಡಿಯಲ್ಲಿ ಬರುತ್ತವೆ. ಆದರೆ ಈ ಮೂರು ಗ್ರಾಮಗಳಿಗೆ ನಿಯಮದ ಪ್ರಕಾರ 7 ಗಂಟೆ ವಿದ್ಯುತ್ತ ಸರಬರಾಜು ಮಾಡಬೇಕು.

ಜೆಸ್ಕಾಂ ಇಲಾಖೆ ಕಳೆದ ಒಂದು ವಾರದಿಂದ ಕೇವಲ 1 ಗಂಟೆ ಸಹ ವಿದ್ಯುತ್‌ ಸರಿಯಾಗಿ ಕೊಡುತ್ತಿಲ.ಇದರಿಂದ ಹೊಲದಲ್ಲಿರುವ ಹತ್ತಿ ಹಾಗೂ ಭತ್ತಕ್ಕೆ ನೀರು ಹಾಯಿಸಲು ಆಗುತ್ತಿಲ್ಲ. ಹೀಗಾಗಿ ಬೆಳೆಗಳು ಒಣಗುತ್ತಿವೆ ಎಂದು ಹೇಳಿದರು.

ನಿರಂತರ ವಿದ್ಯುತ್‌ ಸರಬರಾಜು ಮಾಡಿ ಎಂದು ಜೆಸ್ಕಾಂ ಅಧಿಕಾರಿಗಳಿಗೆ ಕೇಳಿಕೊಂಡರೆ ಇತ್ಯಾದಿ ನೆಪ ಹೇಳುತಾರೆ ಎಂದು ಆರೋಪಿಸಿದ ಅವರು, ಎಲ್ಲಿಯವರೆಗೂ ಅಧಿಕಾರಿಗಳು ಸ್ಥಳಕ್ಕೆ ಬಂದು ಸಮಸ್ಯೆಗೆ ಸ್ಪಂದಿಸುವುದಿಲ್ಲವೋ ಅಲ್ಲಿಯವರೆಗೆ ನಿರಂತರವಾಗಿ ಮುಷ್ಕರ ಮುಂದುವರೆಸುತ್ತೇವೆ ಎಂದು ತಿಳಿಸಿದರು. ಮಾಹದೇವಪ್ಪ, ಫಿರಮಹ್ಮದ, ಸಿದ್ದಪ್ಪಗೌಡ ಜೋಳದಡಗಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next