Advertisement
ಈ ಕುರಿತು ಪುರಸಭೆ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಮಾದಿಗ ಸಮಾಜದ ಪದಾಧಿಕಾರಿಗಳು, ತಾಲೂಕಿನಲ್ಲಿ ಮಾದಿಗ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇವರಿಗೆ ಯಾವುದೇ ಕಾರ್ಯಕ್ರಮ ಮಾಡಲು ಸಮುದಾಯ ಭವನವಿಲ್ಲ. ಸಮುದಾಯ ಭವನ ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರ 1 ಕೋಟಿ ರೂ. ಅನುದಾನ ಒದಗಿಸಿದೆ. ಆದರೆ, ಸ್ಥಳದ ಕೊರತೆಯಿಂದ ಅನುದಾನ ಹಿಂದಿರುಗಿ ಹೋಗುವ ಸಾಧ್ಯತೆ ಇದೆ. ಕಾರಣ ತಕ್ಷಣವೇ ತಮ್ಮ ಅಧೀನದಲ್ಲಿರುವ ಸರ್ಕಾರಿ ಸ್ಥಳದಲ್ಲಿ ಸ್ಥಳಾವಕಾಶ ಮಾಡಿಕೊಟ್ಟು, ಮಾದಿಗ ಸಮಾಜದ ಜನರ ಉದ್ಧಾರದ ಸಲುವಾಗಿ ಸಮುದಾಯ ಭವನ ನಿರ್ಮಿಸಲು ಸಹಕರಿಸಬೇಕು. ಇದೇ ಆ.29ರೊಳಗೆ ನಿವೇಶನ ನೀಡಬೇಕು. ಇಲ್ಲದಿದ್ದರೆ ಆ.30ರಿಂದ ಮಾದಿಗ ಸಮಾಜದವರು ಪುರಸಭೆ ಮುಂದೆ ಅನಿರ್ದಿಷ್ಠ ಧರಣಿ ಸತ್ಯಾಗ್ರಹ ಮಾಡುತ್ತೇವೆ ಎಂದು ಎಚ್ಚರಿಸಿದರು.
Advertisement
ಮಾದಿಗ ಸಮುದಾಯ ಭವನ ನಿರ್ಮಾಣದ ನಿವೇಶನಕ್ಕೆ ಆಗ್ರಹ
03:35 PM Aug 29, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.