ಲೋಕಾಪುರ: ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ ಆಗ್ರಹಿಸಿ ಸಮೀಪದ ವೆಂಕಟಾಪುರ ಗ್ರಾಮದ 5ನೇ ವಾರ್ಡ್‌ನ ಮಹಿಳೆಯರು ಪ್ರತಿಭಟನೆ ನಡೆಸಿದರು.
ಪ್ರತಿದಿನ ಶೌಚಕ್ಕಾಗಿ ಮಹಿಳೆಯರು ಬಯಲು ಪ್ರದೇಶ ಅವಲಂಭಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಹೀಗಾಗಿ ವೆಂಕಟಾಪುರ ಗ್ರಾಮದ ಮಹಿಳೆಯರು ಬಾಗಲಕೋಟೆ ರಸ್ತೆ ಬಳಿ ಸೇರಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸಾರ್ವಜನಿಕ ಶೌಚಾಲಯ ವ್ಯವಸ್ಥೆ ಇಲ್ಲದ ಕಾರಣ ಜನರಿಗೆ ಸಾಕಷ್ಟು ತೊಂದರೆಯಾಗಿದೆ. ಈ ಕುರಿತು ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಗಮನ ಹರಿಸುತ್ತಿಲ್ಲ. ಸಂಬಂಧಪಟ್ಟ ಇಲಾಖೆ ಶೌಚಾಲಯ ನಿರ್ಮಿಸಲು ಕ್ರಮ ಕೈಗೊಳ್ಳದಿದ್ದರೆ ಗ್ರಾಮ ಪಂಚಾಯತ್‌ಗೆ ಬೀಗ ಜಡಿದು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ವೆಂಕಟಾಪುರದಲ್ಲಿ ಸ್ಥಳದ ಅಭಾವವಿದ್ದು, ಪ್ರತಿಭಟನಾಕಾರರು ತಿಳಿಸುವ ಜಾಗವು ಸರಕಾರಿ ಅಧೀನದಲ್ಲಿದ್ದರೆ ಪರಿಶೀಲಿಸಿ ಸಾಮೂಹಿಕ ಶೌಚಾಲಯ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು ಎಂದು ಗ್ರಾಪಂ ಅಧ್ಯಕ್ಷೆ ಕಮಲಾ ಹೊರಟ್ಟಿ ತಿಳಿಸಿದರು.
ಪ್ರತಿಭಟನೆಯಲ್ಲಿ ರೇಣುಕಾ ಕಂಬಳಿ, ಸವಿತಾ ಕಂಬಳಿ, ಪ್ರೇಮಾ ಗಡ್ಡದವರ, ಕಾಶವ್ವ ಗಡ್ಡದವರ, ಕಸ್ತೂರಿ ಹುಚ್ಚೆಟ್ಟಿ, ಅಂಜನಾ ಹರಕಂಗಿ, ಕಮಲಾ ಯಡಹಳ್ಳಿ, ಲಕ್ಷ್ಮೀ ಹರಕಂಗಿ, ಕಾಶವ್ವ ಹರಕಂಗಿ, ಯಲ್ಲವ್ವ ಹರಕಂಗಿ, ಯಲ್ಲವ್ವ ಗಡ್ಡದವರ, ಶಿಲ್ಪಾ ಗಡ್ಡದವರ, ಗಂಗವ್ವ ತುಂಗಳ, ಮುತ್ತವ್ವ ಗರುಡ, ಮಂಜುಳಾ ಹುಚ್ಚೆಟ್ಟಿ, ವಿಜಯಲಕ್ಷಿ ್ಮೕ ಕುಂದರಿಗಿ, ನೀಲವ್ವ ಕಿಲಾರಿ, ಹನಮವ್ವ ಹರಕಂಗಿ ಇತರರಿದ್ದರು.