Advertisement
ಉಪ್ಪಿನಂಗಡಿಯ ನಿವಾಸಿಯಾಗಿರುವ ವ್ಯಕ್ತಿ ಸೋಮವಾರ ಅಂಗಡಿ ತೆರೆದಾಗ ಅವರು ಉಪ್ಪಿನಂಗಡಿಯ ಕೋವಿಡ್-19 ಪೀಡಿತರೊಂದಿಗೆ ನಂಟು ಹೊಂದಿದ್ದಾರೆಂದು ಭ್ರಮಿಸಿ ಅಂಗಡಿಯನ್ನು ಮುಚ್ಚಬೇಕೆಂದು ಆಗ್ರಹಿಸಿದ್ದಲ್ಲದೆ ಅವರು ಇಲ್ಲಿನ ಜನತೆಗೆ ಕೋವಿಡ್-19 ವೈರಸ್ ಹರಡುತ್ತಾರೆಂದು ಉಪ್ಪಿನಂಗಡಿ ಪೊಲೀಸರಿಗೆ ದೂರು ಸಲ್ಲಿಸಿದರು. ಪರಿಶೀಲನೆ ನಡೆಸಿದ ಪೊಲೀಸರು, ಕೋವಿಡ್-19 ಪೀಡಿತರ ಸಂಪರ್ಕದಲ್ಲಿ ವ್ಯಾಪಾರಿಯ ಹೆಸರು ಇಲ್ಲದ ಕಾರಣ ಕೇವಲ ಉಪ್ಪಿನಂಗಡಿಯ ವ್ಯಕ್ತಿ ಎಂಬ ಕಾರಣಕ್ಕೆ ಅವರಿಗೆ ದಿಗ್ಬಂಧನ ಹಾಕಲು ಸಾಧ್ಯವಿಲ್ಲ ಎಂದು ಮನದಟ್ಟು ಮಾಡಿದರು.
ಉಪ್ಪಿನಂಗಡಿಯ ಲಕ್ಷ್ಮೀನಗರ ಹಾಗೂ ಕರಾಯ ಗ್ರಾಮದ ಕಲ್ಲೇರಿಯಲ್ಲಿ ಸೀಲ್‌ಡೌನ್ ಕಟ್ಟುನಿಟ್ಟಾಗಿ ಅನುಷ್ಠಾನಿಸಲ್ಪಟ್ಟಿದ್ದು, ಸ್ಥಳಕ್ಕೆ ಸಹಾಯಕ ಕಮಿಷನರ್ ಹಾಗೂ ತಹಶೀಲ್ದಾರ್ ಭೇಟಿ ನೀಡಿ ಪರಿಸ್ಥಿತಿಯ ಪರಾಮರ್ಶೆ ನಡೆಸಿದರು. ಉಪ್ಪಿನಂಗಡಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಸಕ್ತ ನಿಗಾ ಘಟಕದಲ್ಲಿರುವ ಮಕ್ಕಳೂ ಸೇರಿದಂತೆ 12 ಮಂದಿಯ ಆರೋಗ್ಯದಲ್ಲಿ ಯಾವುದೇ ವ್ಯತ್ಯಯ ಕಂಡು ಬಂದಿಲ್ಲ .